ಆ್ಯಪ್ನಗರ

ಇನ್ನೆರಡು ತಿಂಗಳು ಮದ್ಯವಿಲ್ಲದಿದ್ರೆ 50% ಮಂದಿ ಕುಡಿತ ಬಿಡೋದು ಗ್ಯಾರಂಟಿ..!

ಮದ್ಯ ಮಾರಾಟ ಇನ್ನೂ ಎರಡು ತಿಂಗಳು ಸ್ಥಗಿತಗೊಳಿಸಿದ್ರೆ ಶೇ.50ರಷ್ಟು ಜನರು ಕುಡಿತ ಬಿಡುವ ಸಾಧ್ಯತೆ ಇದೆ ಅಂತ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಿಳಿಸಿದೆ.

Vijaya Karnataka Web 24 Apr 2020, 2:32 pm
ಕೊರೊನಾ ವೈರಸ್‌ ಹರಡುವಿಕೆ ಹಿನ್ನೆಲೆ ರಾಜ್ಯದಲ್ಲಿ ಲಾಕ್‌ಡೌನ್‌ ಇರೋದ್ರಿಂದ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಯಾವುದೇ ಗ್ರಾಮ, ನಗರವಾಗಲಿ ಎಲ್ಲೂ ಮದ್ಯ ಮಾರಾಟವಾಗುತ್ತಿಲ್ಲ. ಈ ಹಿನ್ನೆಲೆ ಆರಂಭದಲ್ಲಿ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ರು. ಆದ್ರೆ ಈಗ ಮದ್ಯ ಇಲ್ಲದೆ ಬದುಕುವುದು ಮಾಮೂಲಾಗಿ ಬಿಟ್ಟಿದೆ. ಮದ್ಯಪಾನ ಇಲ್ಲದಿದ್ದರೂ ಜೀವನ ನಡೆಯುತ್ತೆ ಅಂತ ಮನಗಂಡಿದ್ದಾರೆ. ಹೀಗೆ ಸ್ವ ಮನಪರಿವರ್ತನೆಯಾಗಿರೋದ್ರಿಂದ ಮದ್ಯ ಮಾರಾಟ ಇನ್ನೂ ಎರಡು ತಿಂಗಳು ಸ್ಥಗಿತಗೊಳಿಸಿದ್ರೆ ಶೇ.೫೦ರಷ್ಟು ಜನರು ಕುಡಿತ ಬಿಡುವ ಸಾಧ್ಯತೆ ಇದೆ ಅಂತ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಿಳಿಸಿದೆ. ಮದ್ಯ ಮಾರಾಟಕ್ಕೆ ಸಂಬಂಧಪಟ್ಟಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆ ನಡೆಸಿದ ಸರ್ವೆಯಿಂದ ಹಲವು ಕುತೂಹಲಕಾರಿ ವಿಚಾರ ಬಹಿರಂಗಗೊಂಡಿದೆ.
Vijaya Karnataka Web 1204312_1437674530


ಸರ್ವೆ ಹೇಳುತ್ತಿರೋದೇನು..?
ಮದ್ಯಪಾನ ನಿಷೇಧದ ಬಗ್ಗೆ ಕರ್ನಾಟಕದ ಪ್ರತೀ ಜಿಲ್ಲೆಯಲ್ಲೂ ಜನ ಸೇವಾ ಪ್ರತಿನಿಧಿಗಳು ಸರ್ವೆ ನಡೆಸಿದ್ದಾರೆ. ಪ್ರಶ್ನೆ ಹಾಗೂ ಉತ್ತರದ ರೀತಿಯಲ್ಲಿರುವ ಸರ್ವೆಯಿಂದ, ಶೇ.60ರಷ್ಟುಜನರು ಮದ್ಯ ನಿಷೇಧದಿಂದ ಒಳ್ಳೆಯದಾಗಿದೆ. ಶೇ.38 ಮಂದಿ ಇದರಿಂದ ತುಂಬಾ ಒಳ್ಳೆಯದಾಗಿದ ಅಂತ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಶೇ. 41ರಷ್ಟುಜನ ಮದ್ಯ ಸಿಗದೇ ಸಮಾಜದಲ್ಲಿ ಸಂತೋಷ ಹೆಚ್ಚಾಗಿದೆ ಅಂತ ಹೇಳಿದ್ರೆ, ಶೇ.67ರಷ್ಟು ಜನರು ಮದ್ಯ ಸಿಗದೇ ಇದ್ದಿದ್ದರಿಂದ ಸಮಾಜದಲ್ಲಿ ಗಲಾಟೆ ಆಗಿಲ್ಲ ಅಂತಲೂ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮದ್ಯ ಸಿಗದೆ ಶೇ. 30ರಷ್ಟುಜನರು ಮಾನಸಿಕ ಖಿನ್ನತೆಗೊಳಗಾಗಿದ್ದೇವೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.

ಮತ್ತೆ 18 ಜನರಿಗೆ ಕೊರೊನಾ ಸೋಂಕು, ಮಹಿಳೆ ಸಾವು; ರಾಜ್ಯದಲ್ಲಿ ನಿಲ್ಲದ ಕೋವಿಡ್‌ ಅಬ್ಬರ
ಮದ್ಯ ಮಾರಾಟ ನಿಷೇಧ..?
“ಮದ್ಯ ಮಾರಾಟ ಇಲ್ಲದೆ ಇರೋದ್ರಿಂದ ಜನರು ಈಗ ಮದ್ಯ ಸೇವಿಸುತ್ತಿಲ್ಲ. ಮದ್ಯ ಸೇವನೆ ಇಲ್ಲದೆ ಬದುಕುವ ಕಲೆಯನ್ನ ಜನರು ಈಗ ರೂಡಿಸಿಕೊಂಡಿದ್ದಾರೆ. ಇದು ಕೆಲವರನ್ನ ಮದ್ಯದಿಂದ ದೂರ ಇರುವಂತೆ ಪ್ರೇರೆಪಿಸಬಹುದು. ಇದಕ್ಕೆ ಮಾರ್ಗದರ್ಶನವೂ ಮುಖ್ಯ. ಇನ್ನೂ 2 ತಿಂಗಳು ಮದ್ಯ ಸಿಗದೆ ಇದ್ದರೆ ಶೇ. 80 ವ್ಯಸನಿಗಳಲ್ಲಿ ಶೇ. 50 ರಷ್ಟು ಜನರು ಕುಡಿತ ಬಿಡುವ ಸಾಧ್ಯತೆ ಇದೆ" ಅಂತ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿ ಪಾಯಸ್ ತಿಳಿಸಿದ್ದಾರೆ.

ಸದ್ಯ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಈ ಸರ್ವೆಯಿಂದ ಸರ್ಕಾರ ಯಾಕೆ ಮದ್ಯ ನಿಷೇಧಿಸಬಾರದು ಅನ್ನೋ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಸದ್ಯ ಬಂದ್‌ ಆಗಿರುವ ಬಾರ್‌ ಹಾಗೂ ವೈನ್‌ ಶಾಪ್‌ಗಳು ಹಾಗೇ ಇರಲಿ ಅನ್ನುವ ಅಭಿಪ್ರಾಯವು ಜನರಿಂದ ವ್ಯಕ್ತವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ