ಆ್ಯಪ್ನಗರ

ಗ್ರೀನ್‌ ಝೋನ್‌ಗಳಾಗಿದ್ದ ಹಾಸನ, ಯಾದಗಿರಿಗೂ ಕಾಲಿಟ್ಟ ಕೊರೊನಾ!

ಇದುವೆರೆಗೆ ಗ್ರೀನ್‌ಝೋನ್‌ ಆಗಿಯೇ ಉಳಿದಿದ್ದ ಹಾಸನ ಮತ್ತು ಯಾದಗಿರಿ ಜಿಲ್ಲೆಗಳಿಗೂ ಕೊರೊನಾ ಕರಿಛಾಯೆ ಆವರಿಸಿದೆ. ಹಾಸನದಲ್ಲಿ ಐವರಿಗೆ ಹಾಗೂ ಯಾದಗಿರಿಯಲ್ಲಿ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

Vijaya Karnataka Web 12 May 2020, 2:41 pm
ಹಾಸನ: ಇದುವೆರೆಗೆ ಗ್ರೀನ್‌ಝೋನ್‌ ಆಗಿಯೇ ಉಳಿದಿದ್ದ ಹಾಸನ ಮತ್ತು ಯಾದಗಿರಿ ಜಿಲ್ಲೆಗಳಿಗೂ ಕೊರೊನಾ ಕರಿಛಾಯೆ ಆವರಿಸಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮುಂಬೈನಿಂದ ಬಂದವರಲ್ಲಿ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಈವರೆಗೆ ಗ್ರೀನ್ ಝೋನ್ ನಲ್ಲಿದ್ದ ಹಾಸನಕ್ಕೂ ಡೆಡ್ಲಿ ವೈರಸ್ ಎಂಟ್ರಿಯಾದಂತಾಗಿದೆ.
Vijaya Karnataka Web Coronavirus test tube


ಮೇ.8 ರಂದು ಹಾಸನದ ಚನ್ನರಾಯಪಟ್ಟಣ ಗಡಿ ಮೂಲಕ ಈ ಐವರು ಜಿಲ್ಲೆಗೆ ಎಂಟ್ರಿಯಾಗಿದ್ದರು. ಗಡಿಯಲ್ಲೇ ಅವರನ್ನು ವಶಕ್ಕೆ ಪಡೆದ ಪೊಲೀಸರು ಕ್ವಾರಂಟೇನ್ ಮಾಡಿದ್ದರು.

ಪೊಲೀಸರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಎಲ್ಲಾ ಶಂಕಿತರ, ಸೋಂಕಿತನ ಗ್ರಾಮಗಳನ್ನು ಸೀಲ್‌ಡೌನ್‌ ಮಾಡಲು ನಿರ್ಧರಿಸಲಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಪೊಲೀಸರು ಬಿಗಿ ಕ್ರಮ‌ ಕೈಗೊಳ್ಳುತ್ತಿದ್ದಾರೆ.

ಕೊರೊನಾ: ದೇಶವನ್ನು ಉದ್ದೇಶಿಸಿ ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಭಾಷಣ

ಯಾದಗಿರಿಯಲ್ಲಿ ಇಬ್ಬರಿಗೆ ಸೋಂಕು
ಗ್ರೀನ್ ಝೋನ್ ಎನಿಸಿಕೊಂಡಿದ್ದ ಯಾದಗಿರಿಗೂ ಕಾಲಿಟ್ಟ ಕೊರೊನಾ ವೈರಸ್.ಅಹ್ಮದಾಬಾದ್ ನಿಂದ ಆಗಮಿಸಿದ ಸುರಪುರ ಮೂಲದ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾ ಜಿಲ್ಲೆಯಲ್ಲಿ ನಿರಾಳವಾಗಿದ್ದ ಜನರಿಗೆ ಕೊರೊನಾ ಭಯ ಹುಟ್ಟುವಂತೆ ಮಾಡಿದೆ.

"ಅರೆಸ್ಟ್‌ ಶೋಭಾ ಕರಂದ್ಲಾಜೆ": ಟ್ವಿಟ್ಟರ್‌ನಲ್ಲಿ ಆರಂಭವಾದ ಹೊಸ ಆಂದೋಲನ!

ಕೊರೊನಾ ಪಾಸಿಟ್ ಹಿನ್ನೆಲೆಯಲ್ಲಿ 24 ತಾಸುಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ವಾಹನ ಸಂಚಾರ ಮತ್ತು ಅಂಗಡಿ ಮುಂಗಟ್ಟುಗಳನ್ನು ಬೆಳಗಿನಿಂದಲೇ ಬಂದ್ ಮಾಡಲಾಗಿದೆ.

ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಜನರು ಪರದಾಡುವಂತಾಯಿತು. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್‌ ಹೋದರು. ಇದಲ್ಲದೇ ಪೊಲೀಸರು ಜನರಿಗೆ ಸಾಕಷ್ಟು ಕಿರಿಕಿರಿ ಮಾಡುತ್ತಿರುವುದು ಕೂಡ ಕಂಡು ಬಂದಿತು.

ಕರ್ನಾಟಕದಲ್ಲಿ ಇಂದು ಒಂದೇ ದಿನ 42 ಹೊಸ ಪ್ರಕರಣಗಳು ದೃಢಪಟ್ಟಿವೆ. ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ.
ಹೊಸ ಸೋಂಕಿತರ ವಿವರ
  • ಬಾಗಲಕೋಟೆ 15
  • ಧಾರವಾಡ 09
  • ಹಾಸನ 05
  • ಬೆಂಗಳೂರು 03
  • ಬೀದರ್ 02
  • ಯಾದಗಿರಿ 02
  • ದಕ್ಷಿಣಕನ್ನಡ 02
  • ಚಿಕ್ಕಬಳ್ಳಾಪುರ 01
  • ಮಂಡ್ಯ 01
  • ಕಲಬುರ್ಗಿ 01
  • ಬಳ್ಳಾರಿ 01

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ