ಆ್ಯಪ್ನಗರ

ರಾಜ್ಯದಲ್ಲಿ 11 ಸಾವಿರ ದಾಟಿದ ಹೊಸ ಕೊರೊನಾ ಕೇಸ್‌, ಸಕ್ರಿಯ ಪ್ರಕರಣ 85,000ಕ್ಕೆ ಏರಿಕೆ!

ಸ್ಯಾಂಪಲ್‌ ಪರೀಕ್ಷೆಗಳಿಗೆ ಹೋಲಿಸಿದರೆ ಪಾಸಿಟಿವಿಟಿ ಪ್ರಮಾಣ ಶೇ. 9.94ಕ್ಕೆ ಏರಿಕೆಯಾಗಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಭಾರಿ ಏರಿಕೆಯಾಗಿದ್ದು 85,480ಕ್ಕೆ ತಲುಪಿದೆ. ಇವರಲ್ಲಿ 506 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Vijaya Karnataka 14 Apr 2021, 7:59 pm

ಹೈಲೈಟ್ಸ್‌:

  • ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಿಲ್ಲ, ಹೀಗಾಗಿ ಸ್ಯಾಂಪಲ್‌ ಪರೀಕ್ಷೆಗಳಿಗೆ ಹೋಲಿಸಿದರೆ ಪಾಸಿಟಿವಿಟಿ ಪ್ರಮಾಣ ಶೇ. 9.94ಕ್ಕೆ ಏರಿಕೆ
  • ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಇಳಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಭಾರಿ ಏರಿಕೆಯಾಗಿದ್ದು 85,480ಕ್ಕೆ ತಲುಪಿದೆ
  • ರಾಜ್ಯದಲ್ಲಿ ಲಸಿಕೆ ಅಭಿಯಾನ ನಿಧಾನಗೊಂಡಿದ್ದು, ಬುಧವಾರ ಕೇವಲ 20,513 ಡೋಸ್‌ ಲಸಿಕೆ ನೀಡಲಾಗಿದೆ


ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web temperature of a rice mill worker during a coronavirus
ಬೆಂಗಳೂರು: ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಇಳಿಕೆ ಕಂಡಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಲು ಆರಂಭವಾಗಿದೆ. ಬುಧವಾರ ರಾಜ್ಯದಲ್ಲಿ 11,265 ಹೊಸ ಕೋವಿಡ್‌-19 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 10,94,912ಕ್ಕೆ ಏರಿಕೆಯಾಗಿದೆ.
ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಿಲ್ಲ. ಇದರಿಂದ ಸ್ಯಾಂಪಲ್‌ ಪರೀಕ್ಷೆಗಳಿಗೆ ಹೋಲಿಸಿದರೆ ಪಾಸಿಟಿವಿಟಿ ಪ್ರಮಾಣ ಶೇ. 9.94ಕ್ಕೆ ಏರಿಕೆಯಾಗಿದೆ.

ಇದೇ ಅವಧಿಯಲ್ಲಿ ಸೋಂಕಿನಿಂದ 38 ಜನರು ಕರ್ನಾಟಕದಲ್ಲಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ ಸೋಂಕಿನಿಂದ ಅಸುನೀಗಿದವರ ಸಂಖ್ಯೆ 13,046ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 23 ಜನರು ಅಸುನೀಗಿದ್ದರೆ, ಮೈಸೂರಿನಲ್ಲಿ 5, ಧಾರವಾಡ ಮತ್ತು ಕಲಬುರಗಿಯಲ್ಲಿ ತಲಾ 3, ಬೀದರ್‌ನಲ್ಲಿ 2, ತುಮಕೂರು ಹಾಗೂ ಬಳ್ಳಾರಿಯಲ್ಲಿ ತಲಾ ಒಬ್ಬರು ಸೋಂಕಿನಿಂದ ನಿಧನರಾಗಿದ್ದಾರೆ.

ರಾಜ್ಯದಲ್ಲಿ ಕೊರೊನಾ‌ ಅಲ್ಪ ಇಳಿಕೆ, ಸಾವಿನ ಸಂಖ್ಯೆ ತೀವ್ರ ಏರಿಕೆ; ನಿಧಾನಗೊಂಡ ಲಸಿಕೆ ಅಭಿಯಾನ
ಬೆಂಗಳೂರಿನಲ್ಲಿ ಕೊರೊನಾ ಆರ್ಭಟ

ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಬರೋಬ್ಬರಿ 8,155 ಹೊಸ ಪ್ರಕರಣಗಳು ವರದಿಯಾಗಿವೆ. ಕಲಬುರಗಿಯಲ್ಲಿ 376, ಮೈಸೂರಿನಲ್ಲಿ 356, ಬೀದರ್‌ನಲ್ಲಿ 290, ತುಮಕೂರಿನಲ್ಲಿ 245, ಬಳ್ಳಾರಿಯಲ್ಲಿ 159, ದಕ್ಷಿಣ ಕನ್ನಡದಲ್ಲಿ 140, ಹಾಸನದಲ್ಲಿ 132, ಧಾರವಾಡದಲ್ಲಿ 127, ವಿಜಯಪುರದಲ್ಲಿ 122, ಕೋಲಾರದಲ್ಲಿ 116, ಉಡುಪಿಯಲ್ಲಿ 110, ಬೆಳಗಾವಿಯಲ್ಲಿ 107 ಹೊಸ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣಗಳು ದೃಢಪಟ್ಟಿವೆ.

85 ಸಾವಿರ ದಾಟಿದ ಸಕ್ರಿಯ ಪ್ರಕರಣ

ಹೊಸ ಪ್ರಕರಣಗಳಿಗೆ ಹೋಲಿಸಿದರೆ ಚೇತರಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದೆ. ಬುಧವಾರ ರಾಜ್ಯದಲ್ಲಿ 4,364 ಸೋಂಕಿತರು ಗುಣಮುಖರಾಗಿದ್ದು, ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 9,96,367ಕ್ಕೆ ಏರಿಕೆಯಾಗಿದೆ.

ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಭಾರಿ ಏರಿಕೆಯಾಗಿದ್ದು 85,480ಕ್ಕೆ ತಲುಪಿದೆ. ಇವರಲ್ಲಿ ಬರೋಬ್ಬರಿ 506 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಗರಿಷ್ಠ 184 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದರೆ, ಕಲಬುರಗಿಯಲ್ಲಿ 44, ಕೋಲಾರದಲ್ಲಿ 41, ಮೈಸೂರಿನಲ್ಲಿ 31 ರೋಗಿಗಳು ಐಸಿಯುಗೆ ದಾಖಲಾಗಿದ್ದಾರೆ.

ನಿಧಾನಗೊಂಡ ಲಸಿಕೆ ಅಭಿಯಾನ

ರಾಜ್ಯದಲ್ಲಿ ಲಸಿಕೆ ಅಭಿಯಾನ ನಿಧಾನಗೊಂಡಿದ್ದು, ಬುಧವಾರ ಕೇವಲ 20,513 ಡೋಸ್‌ ಲಸಿಕೆ ನೀಡಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 61,26,622 ಡೋಸ್‌ ಲಸಿಕೆ ನೀಡಿದಂತಾಗಿದೆ. ಮಂಗಳವಾರವೂ ರಾಜ್ಯದಲ್ಲಿ ಸುಮಾರು 8 ಸಾವಿರ ಡೋಸ್‌ ಲಸಿಕೆ ಮಾತ್ರ ನೀಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ