ಆ್ಯಪ್ನಗರ

ಮೈಸೂರಿನಲ್ಲಿ ಮತ್ತೆ 4 ಜನರಿಗೆ ಕೋವಿಡ್‌ 19: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 388ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಹೊಸದಾಗಿ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೈಸೂರಿನಲ್ಲೇ 4 ಸೋಂಕು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ.

Vijaya Karnataka Web 19 Apr 2020, 1:12 pm
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಹೆಚ್ಚುತ್ತಲೇ ಇದೆ. ಶನಿವಾರ ಸಂಜೆ 5 ಗಂಟೆಯಿಂದ ಭಾನುವಾರ ಮಧ್ಯಹ್ನದವರೆಗೆ ರಾಜ್ಯದಲ್ಲಿ ನಾಲ್ವರು ಕೊರೊನಾ ವೈರಸ್‌ ಸೋಂಕಿತರು ಪತ್ತೆಯಾಗಿದ್ದಾರೆ. ಈ ಹಿನ್ನೆಲೆ ರಾಜ್ಯದಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ 388ಕ್ಕೆ ಏರಿಕೆಯಾಗಿದೆ.
Vijaya Karnataka Web corona virus et


ಕಳೆದ 3 - 4 ದಿನಗಳಿಂದ ರಾಜ್ಯದಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಆದರೆ, ಶನಿವಾರ ಸಂಜೆ 5 ಗಂಟೆಯಿಂದ ಭಾನುವಾರ ಮಧ್ಯಾಹ್ನ 12 ಗಂಟೆಯವರೆಗೆ ಹೊಸದಾಗಿ 4 ಸೋಂಕಿತರು ಮಾತ್ರ ಪತ್ತೆಯಾಗಿದೆ. ಇದು ರಾಜ್ಯದ ಜನತೆಗೆ ಹಾಗೂ ಸರಕಾರಕ್ಕೆ ಕೊಂಚ ನೆಮ್ಮದಿ ತರುವ ವಿಚಾರ.

ಹೊಸದಾಗಿ ಪತ್ತೆಯಾಗಿರುವ ನಾಲ್ಕೂ ಪ್ರಕರಣಗಳು ಮೈಸೂರಿನದ್ದೇ ಆಗಿರುವುದು ಜಿಲ್ಲೆಗೆ ಮತ್ತಷ್ಟು ಆತಂಕ ತಂದಿದೆ. ಈ ಪೈಕಿ ಇಬ್ಬರು ನಂಜನಗೂಡು ನಂಜಿನ ಸಂಪರ್ಕ ಹೊಂದಿದ್ದರೆ, ಉಳಿದ ಇಬ್ಬರು ದಿಲ್ಲಿಗೆ ಹೋಗಿ ಬಂದವರಾಗಿದ್ದಾರೆ.

ರಾಜ್ಯದಲ್ಲಿ ಕೊರೊನಾ ಹೊಸ ದಾಖಲೆ, ಒಂದೇ ದಿನ 44 ಜನರಿಗೆ ಸೋಂಕು!

ಆದರೆ, ಮೈಸೂರು ಹೊರತುಪಡಿಸಿ ರಾಜ್ಯದ ಇತರೆ ಯಾವ ಜಿಲ್ಲೆಗಳಲ್ಲೂ ಹೊಸದಾಗಿ ಸೋಂಕು ಪತ್ತೆಯಾಗಿಲ್ಲ.

ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಿಕೆ: ಯಾರು ಯಾರಿಗೆಲ್ಲ ವಿನಾಯಿತಿ?

ಸೋಂಕಿತರ ವಿವರ
P-385 - ಇವರು ಮೈಸೂರು ಮೂಲದ 46 ವರ್ಷದ ಪುರುಷ. ರಾಷ್ಟ್ರ ರಾಜಧಾನಿ ದಿಲ್ಲಿಗೆ ಪ್ರಯಾಣ ಬೆಳೆಸಿದ್ದ ಈ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸದ್ಯ ನಿಗದಿತ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ.

P-386 - ಇವರು ಸಹ ದಿಲ್ಲಿಗೆ ಪ್ರಯಾಣ ಮಾಡಿದ್ದವರು ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 20 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಸದ್ಯ ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೊಂದೆಡೆ, P-387 ನಂಜನಗೂಡಿನ 39 ವರ್ಷದ ಸೋಂಕಿತರಾಗಿದ್ದು, P52ರ ದ್ವಿತೀಯ ಸಂಪರ್ಕದಿಂದ ಮಹಾಮಾರಿ ಕೊರೊನಾ ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಅಲ್ಲದೆ, P-388 ಸಹ ನಂಜನಗೂಡಿನ 23 ವರ್ಷದ ಮಹಿಳೆಯಾಗಿದ್ದು, ಇವರು P319ರ ಸಂಪರ್ಕ ಹೊಂದಿದ್ದರು ಎಂದು ರಾಜ್ಯ ಸರಕಾರ ಮಾಹಿತಿ ನೀಡಿದೆ. ಸದ್ಯ, ಇಬ್ಬರೂ ಸಹ ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ