ಆ್ಯಪ್ನಗರ

ರಾಜ್ಯದಲ್ಲಿ ಇಳಿಯುತ್ತಿದೆ ಕೊರೊನಾ ಅಬ್ಬರ..! 7000+ ಹೊಸ ಕೇಸ್, ಬೆಂಗಳೂರಿನಲ್ಲಿ ಸೋಂಕು ತೀವ್ರ

ಕರ್ನಾಟಕದಲ್ಲಿ ಕೊರೊನಾ ವೈರಸ್‌ನ ಅಬ್ಬರ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಭಾನುವಾರ 7,012 ಹೊಸ ಪಾಸಿಟಿವ್‌ ಕೇಸ್‌ಗಳು ವರದಿಯಾಗಿವೆ. 8,344 ಜನ ಸೋಂಕಿನಿಂದ ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Vijaya Karnataka Web 18 Oct 2020, 7:29 pm
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ನ ಅಬ್ಬರ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಭಾನುವಾರ 7,012 ಹೊಸ ಪಾಸಿಟಿವ್‌ ಕೇಸ್‌ಗಳು ವರದಿಯಾಗಿವೆ. 8,344 ಜನ ಸೋಂಕಿನಿಂದ ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 51 ಜನ ವೈರಸ್‌ಗೆ ಬಲಿಯಾಗಿದ್ದಾರೆ.
Vijaya Karnataka Web coronavirus in karnataka 7012 positive cases reported in last 24 hours
ರಾಜ್ಯದಲ್ಲಿ ಇಳಿಯುತ್ತಿದೆ ಕೊರೊನಾ ಅಬ್ಬರ..! 7000+ ಹೊಸ ಕೇಸ್, ಬೆಂಗಳೂರಿನಲ್ಲಿ ಸೋಂಕು ತೀವ್ರ


ಹೊಸ ಪ್ರಕರಣಗಳೊಂದಿಗೆ ಕರ್ನಾಟಕದಲ್ಲಿ ಪಾಸಿಟಿವ್‌ ಕೇಸ್‌ಗಳ ಸಂಖ್ಯೆ 7,65,586ಕ್ಕೆ ಏರಿದೆ. 6,45,825 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು, ರಾಜ್ಯದಲ್ಲಿ 10,478 ಕೊರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ. 1,09,264 ಪ್ರಕರಣಗಳು ಸಕ್ರಿಯವಾಗಿದ್ದು, 945 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರವೂ ಸೋಂಕಿನ ಅಬ್ಬರ ಮುಂದುವರೆದಿದೆ. 3,535 ಕೊರೊನಾ ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,07,540ಕ್ಕೆ ಏರಿದೆ. ಇದರಲ್ಲಿ 2,39,579 ಜನ ಗುಣಮುಖರಾಗಿದ್ದರೆ, 64,435 ಪ್ರಕರಣಗಳು ಸಕ್ರಿಯವಾಗಿದ್ದು, 3,525 ಜನ ಕೊರೊನಾ ಕಾರಣದಿಂದ ಸಿಲಿಕಾನ್‌ ಸಿಟಿಯಲ್ಲಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಮುಂದುವರೆದ ಕೊರೊನಾ ಅಬ್ಬರ..! ಬೆಂಗಳೂರು, ಮೈಸೂರಲ್ಲಿ ಸೋಂಕು ಯಥಾಸ್ಥಿತಿ

ಬೆಂಗಳೂರು ಹೊರತುಪಡಿಸಿದರೆ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಿನ ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿವೆ. ಎರಡು ಜಿಲ್ಲೆಗಳಲ್ಲಿ 404 ಮತ್ತು 308 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನು, ಬಾಗಲಕೋಟೆಯಲ್ಲಿ 138, ಬಳ್ಳಾರಿ 171, ಬೆಳಗಾವಿ 71, ಬೆಂಗಳೂರು ಗ್ರಾಮಾಂತರ 288, ಬೀದರ್‌ 07, ಚಾಮರಾಜನಗರ 60, ಚಿಕ್ಕಬಳ್ಳಾಪುರ 86, ಚಿಕ್ಕಮಗಳೂರು 119, ಚಿತ್ರದುರ್ಗ 226, ದಕ್ಷಿಣ ಕನ್ನಡ 183 ಹಾಗೂ ದಾವಣಗೆರೆಯಲ್ಲಿ 84 ಕೇಸ್‌ಗಳು ಕಂಡುಬಂದಿವೆ.

ರಾಜ್ಯದಲ್ಲಿ 11 ಸಾವಿರದ ಗಡಿಯಲ್ಲಿ ಹೊಸ ಸೋಂಕು..! ಸತತ 3ನೇ ದಿನವೂ ಬೆಂಗಳೂರಲ್ಲಿ 5,000+ ಕೇಸ್‌

ಧಾರವಾಡದಲ್ಲಿ 135, ಗದಗ 53, ಹಾಸನ 257, ಹಾವೇರಿ 24, ಕಲಬುರಗಿ 67, ಕೊಡಗು 72, ಕೋಲಾರ 71, ಕೊಪ್ಪಳ 35, ರಾಯಚೂರು 44, ರಾಮನಗರ 32, ಶಿವಮೊಗ್ಗ 103, ತುಮಕೂರು 99, ಉಡುಪಿ 129, ಉತ್ತರ ಕನ್ನಡ 92, ವಿಜಯಪುರ 95 ಹಾಗೂ ಯಾದಗಿರಿಯಲ್ಲಿ 24 ಹೊಸ ಕೇಸ್‌ಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ತಗ್ಗಿದ ಕೊರೊನಾ ಅಬ್ಬರ..! ಬೆಂಗಳೂರಲ್ಲಿ 3 ಲಕ್ಷ ದಾಟಿದ ಸೋಂಕು, 7000+ ಹೊಸ ಕೇಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ