ಆ್ಯಪ್ನಗರ

ಲಾಠಿ ಚಾರ್ಜ್‌ಗೆ ನಿರ್ದಿಷ್ಟ ಮಾರ್ಗಸೂಚಿ ಹೊರಡಿಸಲು ಹೈಕೋರ್ಟ್‌ ನಿರ್ದೇಶನ

ಲಾಠಿ ಚಾರ್ಜ್‌ ವಿಚಾರದಲ್ಲಿ ಪೊಲೀಸರು ನಿಯಂತ್ರಣ ವಹಿಸಬೇಕು ಎಂದಿರುವ ಹೈಕೋರ್ಟ್‌, ಯಾವಾಗ ಲಾಠಿ ಚಾರ್ಜ್‌ ಮಾಡಬೇಕೆಂಬ ಬಗ್ಗೆ ರಾಜ್ಯ ವ್ಯಾಪಿ ನಿರ್ದಿಷ್ಟ ಮಾರ್ಗಸೂಚಿ ರೂಪಿಸಿ ಸುತ್ತೋಲೆ ಹೊರಡಿಸಬೇಕು ಎಂದು ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿದೆ.

Vijaya Karnataka 30 Mar 2020, 10:56 pm

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಮಾಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸೋಮವಾರ ವಿಶೇಷ ಕಲಾಪ ನಡೆಸಿ ಲಾಠಿ ಚಾರ್ಜ್‌ಗೆ ನಿರ್ದಿಷ್ಟ ಮಾರ್ಗಸೂಚಿ ರೂಪಿಸಬೇಕು ಎನ್ನುವುದೂ ಸೇರಿದಂತೆ ಸರಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಿತು.
Vijaya Karnataka Web Coronavirus Lathi Charge


ಸಾರ್ವಜನಿಕರ ಮೇಲೆ ಅನಗತ್ಯ ಲಾಠಿ ಚಾರ್ಜ್‌, ಬಡವರು, ನಿರ್ಗತಿಕರಿಗೆ ಆಹಾರ ಪೂರೈಕೆ, ಅಂಗನವಾಡಿ ಕೇಂದ್ರಗಳ ಸ್ಥಗಿತ, ಪೌರಕಾರ್ಮಿಕರ ಸುರಕ್ಷತೆ ಸೇರಿ ನಾನಾ ವಿಚಾರಗಳ ಕುರಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ತುರ್ತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ಹಲವು ನಿರ್ದೇಶನಗಳನ್ನು ನೀಡಿತು.

ಕೊರೊನಾ ಎಫೆಕ್ಟ್: ಪೊಲೀಸ್ ಲಾಠಿ ಚಾರ್ಜ್ ಕುರಿತಾಗಿ ತನಿಖೆಗೆ ಕಾಂಗ್ರೆಸ್ ಆಗ್ರಹ

ಲಾಠಿ ಚಾರ್ಜ್‌ ವಿಚಾರದಲ್ಲಿ ಪೊಲೀಸರು ನಿಯಂತ್ರಣ ವಹಿಸಬೇಕಿದೆ. ಯಾವಾಗ ಲಾಠಿ ಚಾರ್ಜ್‌ ಮಾಡಬೇಕೆಂಬ ಬಗ್ಗೆ ರಾಜ್ಯ ವ್ಯಾಪಿ ನಿರ್ದಿಷ್ಟ ಮಾರ್ಗಸೂಚಿ ರೂಪಿಸಿ ಸುತ್ತೋಲೆ ಹೊರಡಿಸಬೇಕು ಎಂದು ನ್ಯಾಯಪೀಠ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿದೆ.

ಕೊರೊನಾ ಲಾಕ್‌ಡೌನ್‌, ಅನಗತ್ಯ ಲಾಠಿ ಚಾರ್ಜ್‌ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌

ಇನ್ನು, ಬಡವರು, ನಿರ್ಗತಿಕರು ಮತ್ತು ಕೂಲಿಕಾರ್ಮಿಕರಿಗೆ ಆಹಾರ ಸರಬರಾಜು ಮಾಡುವ ಕುರಿತು ಗ್ರಾಮ ಪಂಚಾಯಿತಿಗಳು ಕ್ರಮ ವಹಿಸಬೇಕು. ಪಡಿತರ ಚೀಟಿ ಹೊಂದಿದವರಿಗೆ ಆಹಾರ ಧಾನ್ಯ ಲಭ್ಯವಾಗುವಂತೆ ಸರಕಾರ ನೋಡಿಕೊಳ್ಳಬೇಕು. ಪಡಿತರ ಚೀಟಿ ಇಲ್ಲದ ಕೂಲಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೂ ಆಹಾರ ಒದಗಿಸಬೇಕು. ಆಹಾರ ಧಾನ್ಯ ಕಾಳಸಂತೆ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ವಿಭಾಗೀಯ ಪೀಠ ಸೂಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ