ಆ್ಯಪ್ನಗರ

ಪೊಲೀಸರಿಗೆ 'ಯು ಆರ್‌ ಅಂಡರ್‌ ಕ್ವಾರಂಟೈನ್‌' ಎನ್ನುತ್ತಿರುವ ಕೊರೊನಾ ಸೋಂಕು!

ಮಹಾರಾಷ್ಟ್ರದಲ್ಲಿ ಇದುವರೆಗೆ 1,758 ಪೊಲೀಸರಿಗೆ ಸೋಂಕು ತಗುಲಿದ್ದು 18 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ರಾಜ್ಯದ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅವರಿಗೆ ಸೂಕ್ತ ತರಬೇತಿ, ರಕ್ಷಣಾ ಪರಿಕರ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.

Vijaya Karnataka Web 25 May 2020, 7:17 am
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಪೊಲೀಸರೂ ಸೋಂಕಿಗೆ ಒಳಗಾಗುತ್ತಿರುವುದು ಆತಂಕ ಮೂಡಿಸಿದೆ. ಭಾನುವಾರ ಒಂದೇ ದಿನ ಕರಾವಳಿಯ ನಾಲ್ವರು ಮತ್ತು ಹಾಸನದ ಒಬ್ಬ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಠಾಣೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಜತೆಗೆ 150ಕ್ಕೂ ಅಧಿಕ ಮಂದಿ ಪೊಲೀಸರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
Vijaya Karnataka Web Karnataka Police


ಕೊರೊನಾ ವಾರಿಯರ್ಸ್‌ಗಳಾಗಿ ಬೀದಿ ಬೀದಿಗಳಲ್ಲಿ ಕಾರ್ಯಾಚರಿಸುತ್ತಿರುವ ಪೊಲೀಸ್‌ ಸಿಬ್ಬಂದಿ ಎಷ್ಟೊಂದು ಅಪಾಯವನ್ನು ಎದುರಿಸುತ್ತಿದ್ದಾರೆ ಎನ್ನುವುದಕ್ಕೆ ಈ ಪ್ರಕರಣಗಳು ಸಾಕ್ಷಿಯಾಗಿವೆ. ಕರಾವಳಿಯ ನಾಲ್ಕೂ ಸೋಂಕುಗಳಿಗೆ ಮುಂಬಯಿಯಿಂದ ವಲಸೆ ಬಂದವರ ಸಂಪರ್ಕವೇ ಕಾರಣವಾಗಿದೆ. ಅವರ ದಾಖಲೆ ಪರಿಶೀಲನೆ, ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡುವ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ.

ಯು ಆರ್‌ ಅಂಡರ್‌ ಕ್ವಾರಂಟೈನ್‌!

16 ಪೊಲೀಸರಿಗೆ ಸೋಂಕು

ಬಾಗಲಕೋಟೆ - 04
ಉಡುಪಿ - 03
ಬೆಂಗಳೂರು ನಗರ - 02
ಬೆಂಗಳೂರು ಗ್ರಾಮಾಂತರ, ಮಂಡ್ಯ, ಕಲಬುರಗಿ, ದಕ್ಷಿಣ ಕನ್ನಡ, ಹಾಸನ, ವಿಜಯಪುರ, ದಾವಣಗೆರೆ ತಲಾ ಒಂದು

ಉಡುಪಿ: ಕಾರ್ಕಳದಲ್ಲಿ ಇಬ್ಬರು ಪೊಲೀಸರಿಗೆ ಕೊರೊನಾ ದೃಢ‌; ಸಿಐ ಕಚೇರಿ, 3 ಠಾಣೆ ಸೀಲ್‌ಡೌನ್!

ಅಪಾಯದಲ್ಲಿದ್ದಾರೆ ರಕ್ಷಕರು
- ಚೆಕ್‌ಪೋಸ್ಟ್‌ಗಳಲ್ಲಿ, ಠಾಣೆಗಳಲ್ಲಿ ದಾಖವೆ ಪರಿಶೀಲನೆ ವೇಳೆ ಸುರಕ್ಷತಾ ಕ್ರಮಗಳಿಲ್ಲ.
- ಆಧಾರ್‌ ಕಾರ್ಡ್‌ಗಳನ್ನು ನೇರವಾಗಿ ಕೈಯಲ್ಲೇ ಸ್ವೀಕರಿಸಲಾಗುತ್ತಿದೆ.
- ಕ್ವಾರಂಟೈನ್‌ ಕೇಂದ್ರಗಳಿಗೆ ಪದೇಪದೆ ಭೇಟಿ ಅನಿವಾರ್ಯತೆಯಿಂದ ಆತಂಕ ಉಂಟಾಗಿದೆ.
- ಕಳ್ಳರು, ಸಮಾಜಘಾತುಕರನ್ನು ಹಿಡಿಯುವಾಗಲೇ ಕೆಲವರಿಗೆ ಸೋಂಕು ತಗುಲಿದೆ.
- ಕೆಲವು ವಿಷಯಗಳ ಬಗ್ಗೆ ಬೆಂಗಳೂರಿನಲ್ಲಿ ತರಬೇತಿ ನೀಡಿದ್ದರೂ ಎಲ್ಲರಿಗೂ ತಲುಪಿಲ್ಲ

ಪೊಲೀಸರ ರಕ್ಷಣೆ ಹೇಗೆ?
- ಬೀದಿಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಸುರಕ್ಷತೆಗಾಗಿ ಪಿಪಿಇ ಕಿಟ್‌ ಧರಿಸುವುದು ಕಷ್ಟ. ಆದರೆ, ಚೆಕ್‌ ಪೋಸ್ಟ್‌, ಠಾಣೆಗಳಲ್ಲಿ ದಾಖಲೆ ಪರಿಶೀಲನೆ ಮಾಡುವವರು ಧರಿಸಬಹುದು.
- ಪೊಲೀಸರಾದರೂ ಆಗಾಗ ಸ್ಯಾನಿಟೈಸರ್‌ಗಳನ್ನು ಬಳಸಿದರೆ ಸೋಂಕು ತಡೆಯಬಹುಹು.
- ದಾಖಲೆ ಪರಿಶೀಲನೆಗೆ ಡಿಜಿಟಲ್‌ ವ್ಯವಸ್ಥೆ

ಪೂರ್ವಸಿದ್ದತೆ ಇಲ್ಲದ ಲಾಕ್‌ಡೌನ್‌ ಮಾನವ ನಿರ್ಮಿತ ದುರಂತ: ರಾಮಚಂದ್ರ ಗುಹಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ