ಆ್ಯಪ್ನಗರ

ಜು. 27ರಿಂದ ಶಾಲೆ ಆರಂಭಕ್ಕೆ ಹರಿಯಾಣ ಸಿದ್ಧ! ಕರ್ನಾಟಕದ ಕಥೆ ಏನು?

ಹರಿಯಾಣ ಶಿಕ್ಷಣ ಇಲಾಖೆ ಜುಲೈ 27 ರಿಂದ 2020-21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಿಸಲು ಸಿದ್ಧತೆಮಾಡಿಕೊಂಡಿದೆ. ಆದರೆ, ಕರ್ನಾಟಕಲ್ಲಿ ಶಾಲೆಗಳ ಪುನಾರಂಭ ಯಾವಾಗ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಕುರಿತ ವರದಿ ಇಲ್ಲಿದೆ.

Authored byಬಾನುಪ್ರಸಾದ ಕೆ.ಎನ್\u200c. | Vijaya Karnataka Web 2 Jul 2020, 5:46 pm
ಚಂಡೀಗಢ: ಜುಲೈ 1 ರಿಂದ 26ರವರೆಗೆ ರಾಜ್ಯದ ಎಲ್ಲ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಿರುವ ಹರಿಯಾಣ ಶಿಕ್ಷಣ ಇಲಾಖೆ ಜುಲೈ 27 ರಿಂದ 2020-21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಿಸಲು ಸಿದ್ಧತೆಮಾಡಿಕೊಂಡಿದೆ.
Vijaya Karnataka Web school reopen new


ಈ ಕುರಿತು ಆದೇಶವನ್ನು ಇಲಾಖೆ ಬುಧವಾರ ಹೊರಡಿಸಿದೆ. ಕಾಲೇಜುಗಳಿಗೆ ಕೂಡ ಜು.31ರವರೆಗೆ ರಜೆ ಘೋಷಿಸಲಾಗಿದ್ದು, ಚಾಲ್ತಿಯಲ್ಲಿರುವ ಆನ್‌ಲೈನ್‌ ತರಗತಿಗಳನ್ನು (ಇ-ಲರ್ನಿಂಗ್‌) ನಡೆಸಲು ಮಾತ್ರ ಅವಕಾಶ ನೀಡಲಾಗಿದೆ.

ಕಳೆದ ಮಂಗಳವಾರ ಪಂಜಾಬ್‌ ಹಾಗೂ ಹರಿಯಾಣ ಹೈಕೋರ್ಟ್‌ ಖಾಸಗಿ ಶಾಲೆಗಳಿಗೆ ಟ್ಯೂಷನ್‌ ಶುಲ್ಕವನ್ನು ವಸೂಲಿ ಮಾಡಲು ಅವಕಾಶ ನೀಡಿತ್ತು. ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ಕ್ಲಾಸ್‌ ನಡೆಸಿದ್ದರ ಹೊರತಾಗಿ ಶುಲ್ಕ ಪಡೆಯುವಂತೆ ಸೂಚಿಸಿತ್ತು.

ಅನ್‌ಲಾಕ್‌ 2ರಲ್ಲಿ ಸೂಚನೆಯಿದೆ:
ಮಂಗಳವಾರ ಗೃಹ ಸಚಿವಾಲಯದಿಂದ ಹೊರಬಿದ್ದ ಅನ್‌ಲಾಕ್‌ 2 ಮಾರ್ಗಸೂಚಿಗಳ ಪ್ರಕಾರ ಜು.31ರವರೆಗೆ ದೇಶಾದ್ಯಂತ ಶಾಲಾ-ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಂತಿಲ್ಲಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೂ, ಹರಿಯಾಣ ಸರಕಾರ ತರಾತುರಿಯಲ್ಲಿದೆ ಎಂದು ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.

ಕರ್ನಾಟಕದ ಕಥೆ ಏನು?
ಕರ್ನಾಟಕ ಸರಕಾರ ಕೂಡ ಶಾಲೆಗಳನ್ನು ಜುಲೈ 1ರಿಂದಲೇ ಹಂತ ಹಂತವಾಗಿ ಪುನಾರಂಭಿಸಲು ಆದೇಶ ಹೊರಡಿಸಿತ್ತು. ಆದರೆ, ಇದಕ್ಕೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಶಾಲೆಗಳ ಪುನಾರಂಭವನ್ನು ಮುಂದೂಡಲಾಗಿತ್ತು.

4- 7ನೇ ತರಗತಿಗಳು ಜುಲೈ 1ರಿಂದ, 1-3ನೇ ತರಗತಿಗಳು ಜುಲೈ 15ರಿಂದ, 8-10 ನೇ ತರಗತಿಗಳು ಜುಲೈ 15ರಿಂದ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳು ಜುಲೈ 20ರಿಂದ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಸ್ತಾವಿಸಿತ್ತು. ಆದರೆ ಈ ಕುರಿತು ಪೋಷಕರ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಯುತ್ತಿದೆ.

ಪೋಷಕರ ಅಭಿಪ್ರಾಯ ಏನು?
  • *ಶಾಲೆಗಳ ಆರಂಭಕ್ಕೆ ಅವಸರದ, ಗೊಂದಲದ ನಿರ್ಧಾರ ಸರಿಯಲ್ಲ
  • *ಶಾಲೆಗಳು 2-3 ತಿಂಗಳು ತಡವಾಗಿ ಆರಂಭವಾದರೆ ಜಗತ್ತು ಮುಳುಗಲ್ಲ
  • *ಮಕ್ಕಳ ಆರೋಗ್ಯ ದೃಷ್ಟಿಯಿಂದ ಸರ್ಕಾರ ಯೋಚಿಸಿ ಸ್ಪಷ್ಟ ನಿರ್ಧಾರಕ್ಕೆ ಬರಬೇಕು
  • *ತಕ್ಷಣಕ್ಕೆ ಶಾಲೆಗಳ ಪ್ರಾರಂಭ ಬೇಡ – ಬಹುತೇಕ ಪೋಷಕರ ಮಾತು
  • *ಕೊರೊನಾ ಕಡಿಮೆ ಆಗೋವರೆಗೂ ಶಾಲೆಗಳ ಪ್ರಾರಂಭ ಬೇಡ.
  • *ಮಾದರಿ 1 : ಸಾಮಾಜಿಕ ಅಂತರದೊಂದಿಗೆ ಶಾಲೆ ಆರಂಭಕ್ಕೆ ವಿರೋಧ
  • *ಮಾದರಿ 2 : ಪಾಳಿಯ ಲೆಕ್ಕದಲ್ಲಿ ಬೇಕಿದ್ರೆ ತರಗತಿ ಪ್ರಾರಂಭಕ್ಕೆ ಒಲವು (ಕೊರೋನಾ ಕಂಟ್ರೋಲ್ ನಂತರ)
  • *ಮಾದರಿ 3 : ದಿನ ಬಿಟ್ಟು ದಿನ ತರಗತಿ ಮಾಡೋ ವ್ಯವಸ್ಥೆಗೆ ಒಲವು (ಕೊರೋನಾ ಕಂಟ್ರೋಲ್ ನಂತರ)
ಇದೇನೆ ಇದ್ದರೂ, ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದೆ. ಹೀಗಿರುವಾಗ ಆತುರದಲ್ಲಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಅದರಲ್ಲಿ ಮಕ್ಕಳಿಗೆ ಸಂಬಂಧಪಟ್ಟಿ ವಿಚಾರಿದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ.
ಲೇಖಕರ ಬಗ್ಗೆ
ಬಾನುಪ್ರಸಾದ ಕೆ.ಎನ್\u200c.
ವಿಜಯ ಕರ್ನಾಟಕ ಡಿಜಿಟಲ್\u200c ಪತ್ರಕರ್ತ. ವಿಜ್ಞಾನ ತಂತ್ರಜ್ಞಾನ, ರಾಷ್ಟ್ರೀಯ- ಅಂತಾರಾಷ್ಟ್ರೀಯ, ಸಾಹಿತ್ಯ-ಕಲೆ, ಶಿಕ್ಷಣ, ಆಸಕ್ತಿಯ ವಿಷಯಗಳು... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ