ಆ್ಯಪ್ನಗರ

ಗಮನಿಸಿ, ಕೋಳಿ ಮಾಂಸ ತಿನ್ನುವುದರಿಂದ ಕೊರೊನಾ ಹರಡಲ್ಲ!

ಕೋಳಿ ಮಾಂಸವನ್ನು ಸಾಮಾನ್ಯವಾಗಿ 100 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಬೇಯಿಸಲಾಗುತ್ತದೆ. ಇಷ್ಟು ಉಷ್ಣತೆಯಲ್ಲಿ ಸೂಕ್ಷ್ಮಾಣು ಜೀವಿಗಳು ಬದುಕಲು ಸಾಧ್ಯವಿಲ್ಲ ಎಂದು ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.

Vijaya Karnataka Web 16 Feb 2020, 8:23 am
ಬೆಂಗಳೂರು: ಕೋಳಿ ಮಾಂಸದಲ್ಲಿ ಕೊರೊನಾ (ಕೋವಿಡ್‌) ಸೋಂಕು ಇದೆ ಎಂಬ ವದಂತಿಯನ್ನು ನಂಬಬಾರದು ಎಂದು ರಾಜ್ಯ ಸರಕಾರ ಮನವಿ ಮಾಡಿದೆ. ಕೋವಿಡ್‌ ಸೋಂಕು ಕೋಳಿಯಿಂದ ಹರಡುತ್ತಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ದೇಶದಲ್ಲಿ ಕೋಳಿಯಿಂದ ಈ ಸೋಂಕು ಹರಡಿರುವ ಕುರಿತು ಯಾವುದೇ ದಾಖಲೆ ಇಲ್ಲ. ಇದಕ್ಕೆ ವೈಜ್ಞಾನಿಕ ಆಧಾರವೂ ಇಲ್ಲ. ಕೋಳಿ ಮಾಂಸವನ್ನು ಸಾಮಾನ್ಯವಾಗಿ 100 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಬೇಯಿಸಲಾಗುತ್ತದೆ. ಇಷ್ಟು ಉಷ್ಣತೆಯಲ್ಲಿ ಸೂಕ್ಷ್ಮಾಣು ಜೀವಿಗಳು ಬದುಕಲು ಸಾಧ್ಯವಿಲ್ಲ ಎಂದು ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಇಂತಹ ತಪ್ಪು ಸಂದೇಶಗಳು ಉತ್ತಮ ಪೌಷ್ಟಿಕಾಂಶವಿರುವ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಯ ಮೇಲೆ ನಕಾರಾತ್ಮಕ ಪರಿಣಾಮವಾಗುವ ಸಾಧ್ಯತೆ ಇದೆ. ಅಪೌಷ್ಟಿಕತೆಯ ಸಮಸ್ಯೆ ಇರುವಂತಹ ಸಂದರ್ಭದಲ್ಲಿ ವದಂತಿಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸುತ್ತವೆ. ಹೀಗಾಗಿ ಯಾರೂ ವದಂತಿ ಹರಡಬಾರದು ಹಾಗೂ ನಂಬಬಾರದು ಎಂದು ಸರಕಾರ ಕೋರಿದೆ.

ಚೀನಾ, ಥಾಯ್ಲೆಂಡ್‌, ಸಿಂಗಾಪುರ ಸೇರಿ ಸೋಂಕು ಪೀಡಿತ ಹಲವು ರಾಷ್ಟ್ರಗಳಿಂದ ಜನವರಿ ಮಧ್ಯಭಾಗದಿಂದ ಇದುವರೆಗೂ ದಿಲ್ಲಿಗೆ ಬಂದಿಳಿದಿರುವ 5,700 ಭಾರತೀಯರ ಪೈಕಿ, 17 ಜನರಲ್ಲಿ ಕೊರೊನಾ ವೈರಸ್‌ನ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರನ್ನು ತೀವ್ರ ನಿಗಾ ವ್ಯವಸ್ಥೆಯಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ದಿಲ್ಲಿ ಆರೋಗ್ಯ ಇಲಾಖೆ ಹೇಳಿದೆ. ಸದ್ಯ ಭಾರತದಲ್ಲಿ ಕೇರಳದಲ್ಲಿ ಮಾತ್ರ ಮೂವರಿಗೆ ವೈರಸ್‌ ಸೋಂಕು ತಗುಲಿದ್ದು, ಚಿಕಿತ್ಸೆಯಿಂದ ಪೂರ್ಣ ಗುಣಮುಖರಾದ ಬಳಿಕ ಅವರನ್ನು ಮನೆಗೆ ಕಳುಹಿಸಲಾಗಿದೆ.

ಜಪಾನ್‌ ಹಡಗಿನ ಬಂಧಿಗಳಿಗೆ ಶೀಘ್ರ ಮುಕ್ತಿ: ಮೂವರು ಭಾರತೀಯರ ಆರೋಗ್ಯದಲ್ಲಿ ಗಣನೀಯ ಸುಧಾರಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ