ಆ್ಯಪ್ನಗರ

ಮಂಗಗಳಿಂದ ಬಾಂಬ್ ಎಸೆತ; ಮೂವರಿಗೆ ಗಾಯ

ಕೋತಿಗಳು ಕಚ್ಚಾ ಬಾಂಬ್ ಇದ್ದ ಪಾಲಿಥಿನ್ ಕವರ್‌ನ್ನು ಜನವಸತಿ ಪ್ರದೇಶದಲ್ಲಿ ಎಸೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಫತೇಪುರದಲ್ಲಿ ನಡೆದಿದೆ.

TIMESOFINDIA.COM 21 Jul 2018, 12:07 pm
ಕಾನ್ಪುರ: ಕೋತಿಗಳಿದ್ದಲ್ಲಿ ಕೀಟಲೆ ಸಾಮಾನ್ಯ. ಆದರೆ ಈ ಕೀಟಲೆ ಬುದ್ಧಿಯಿಂದ ಅವುಗಳು ಮನುಷ್ಯನಿಗೆ ಅಪಾಯ ತಂದಿಟ್ಟ ನಿದರ್ಶನಗಳು ಸಹ ನಮ್ಮ ಮುಂದಿವೆ. ಗುರುವಾರ ಉತ್ತರ ಪ್ರದೇಶದಲ್ಲಿ ನಡೆದಿದ್ದು ಸಹ ಅದೇ. ಕೋತಿಗಳು ಕಚ್ಚಾ ಬಾಂಬ್ ಇದ್ದ ಪಾಲಿಥಿನ್ ಕವರ್‌ನ್ನು ಜನವಸತಿ ಪ್ರದೇಶದಲ್ಲಿ ಎಸೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಫತೇಪುರದಲ್ಲಿ ನಡೆದಿದೆ.
Vijaya Karnataka Web Monkey


ಮನು ಕಾ ಪುರ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಗು ಸೇರಿದಂತೆ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕೋತಿಗಳು ಎಲ್ಲಿಂದಲೋ ಎತ್ತಿಕೊಂಡು ಬಂದ ಕವರ್‌ನಲ್ಲಿ ಯಾವುದಾದರೂ ವಸ್ತುವಿಗೆ ತಾಗಿದಾಗ ಸ್ಫೋಟಗೊಳ್ಳುವಂಥ ಬಾಂಬ್ ರೀತಿಯ ಸ್ಫೋಟಕ ವಸ್ತುವಿತ್ತು. ಅದನ್ನಿಟ್ಟುಕೊಂಡು ಮನೆಯ ಟೆರೇಸ್‌ನಲ್ಲಿ ಆಟವಾಡುತ್ತಿದ್ದ ಮಂಗಗಳು ಆಕಸ್ಮಿಕವಾಗಿ ಅದನ್ನು ಮನೆಯ ಹೊರಭಾಗದಲ್ಲಿ ಶಾಲಾ ಬಸ್‌ಗಾಗಿ ಕಾಯುತ್ತಿದ್ದ ಗುಲಾಬ್ ಗುಪ್ತಾ (60) ಮತ್ತು ಅವರ 5 ವರ್ಷದ ಮೊಮ್ಮಗ ಸಾಮ್ರಾಟ್ ಮೇಲೆ ಎಸೆದಿವೆ.

ಸಾಮ್ರಾಟ್‌ಗೆ ಹೆಚ್ಚಿನ ಗಾಯಗಳಾಗಿದ್ದು, ಆತನ ಅಜ್ಜ ಮತ್ತು ಪಕ್ಕದಲ್ಲಿ ಹಾದು ಹೋಗುತ್ತಿದ್ದ ದಾರಿಹೋಕನಿಗೂ ಸಹ ಗಾಯಗಳಾಗಿವೆ. ಮೂವರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ