ಆ್ಯಪ್ನಗರ

ಮುನಿರತ್ನ ಕೇಬಲ್‌ ಟೆಲಿವಿಷನ್‌ ಸೇವೆ ಸ್ಥಗಿತಗೊಳಿಸಿ - ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು

​ಬಿಜೆಪಿ ಅಭ್ಯರ್ಥಿ ಮುನಿರತ್ನ ತಮ್ಮ ಫೋಟೋ ಹಾಕಿಕೊಂಡು ಸೆಟ್‌ಟಾಪ್‌ ಬಾಕ್ಸ್‌ ಹಂಚುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಆಯೋಗ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆಗ್ರಹಿಸಿದ್ದಾರೆ.

Vijaya Karnataka 26 Oct 2020, 8:26 pm
ಬೆಂಗಳೂರು: ಆರ್‌.ಆರ್‌. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಸೆಟ್‌ಟಾಪ್‌‌ ಬಾಕ್ಸ್‌ ವಿತರಣೆ ಮಾಡುತ್ತಿದ್ದು ತಕ್ಷಣವೇ ಮುನಿರತ್ನ ಅವರು ಪ್ರಸಾರ ಮಾಡುತ್ತಿರುವ ಕೇಬಲ್‌ ಟೆಲಿವಿಷನ್‌ ಸೇವೆ ಸ್ಥಗಿತಗೊಳಿಸಬೇಕೆಂದು ಕಾಂಗ್ರೆಸ್‌ ಆಗ್ರಹಿಸಿದೆ.
Vijaya Karnataka Web DK Shivakumar


ಈ ಸಂಬಂಧ ಮುಖ್ಯ ಚುನಾವಣಾಧಿಕಾರಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಅವರು ದೂರು ಸಲ್ಲಿಸಿದ್ದು ಇದೊಂದು ರೀತಿ ಮತದಾರರಿಗೆ ಆಮಿಷವೊಡ್ಡಿದಂತೆ. ಚಂದಾ ಹಣವನ್ನು ಸಹ ಬಿಜೆಪಿ ಅಭ್ಯರ್ಥಿ ಮನ್ನಾ ಮಾಡಿದ್ದಾರೆ, ಇದಕ್ಕಾಗಿ 5 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಮತದಾರರಿಗೆ ಹಂಚಿಕೆ ಮಾಡಿರುವ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಅಭ್ಯರ್ಥಿ ಹೆಸರು ಹಾಗೂ ಭಾವಚಿತ್ರ ಪ್ರಸಾರವಾಗುತ್ತಿದೆ. ತಕ್ಷಣವೇ ಇದಕ್ಕೆ ತಡೆ ಹಾಕಬೇಕೆಂದು ಮನವಿ ಮಾಡಲಾಗಿದೆ.

ಆಯೋಗ ಬದುಕಿದೆಯಾ?

ಬಿಜೆಪಿ ಅಭ್ಯರ್ಥಿ ತಮ್ಮ ಫೋಟೋ ಹಾಕಿಕೊಂಡು ಸೆಟ್‌ಟಾಪ್‌ ಬಾಕ್ಸ್‌ ಹಂಚುತ್ತಿರುವುದನ್ನು ಒಪ್ಪಿಕೊಂಡಿರುವುದರಿಂದ ಆಯೋಗ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆಗ್ರಹಿಸಿದ್ದಾರೆ.

ನೀವು ಮಾಡುತ್ತಿರುವುದು ಜಾತಿ ರಾಜಕಾರಣವಲ್ಲವೇ..? ಬಿಜೆಪಿಗೆ ಡಿಕೆ ಶಿವಕುಮಾರ್‌ ಪ್ರಶ್ನೆ
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜರಾಜೇಶ್ವರಿ ನಗರದಲ್ಲಿ ಅಭ್ಯರ್ಥಿ ತಮ್ಮ ಕಂಪನಿ ಹೆಸರಲ್ಲಿ ಸೆಟ್‌ಟಾಪ್‌‌ ಬಾಕ್ಸ್‌ ಕೊಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಚುನಾವಣಾ ಆಯೋಗ ಬದುಕಿದ್ದರೆ, ಕಾನೂನಿಗೆ ರಕ್ಷ ಣೆ ಕೊಡುವುದಾದರೆ ತಕ್ಷಣ ಕ್ರಮ ಕೈಗೊಳ್ಳಲಿ. ಈ ವಿಚಾರದಲ್ಲಿ ಯಾರು ದೂರು ನೀಡಬೇಕಾದ ಅಗತ್ಯವಿಲ್ಲ. ಅಭ್ಯರ್ಥಿ ಅದು ನನ್ನ ವ್ಯವಹಾರವೆಂದು ಒಪ್ಪಿಕೊಂಡಿದ್ದಾರೆ. ಅದು ವ್ಯವಹಾರವಾಗಿದ್ದರೆ ತಮ್ಮ ಫೋಟೋ ಹಾಕಿಕೊಂಡು ಕೊಡಲು ನೀತಿ ಸಂಹಿತೆಯಲ್ಲಿ ಅವಕಾಶ ಇಲ್ಲ. ಅವರ ಈ ಹೇಳಿಕೆಯೇ ಅವರು ಸೆಟ್‌ಟಾಪ್‌ ಬಾಕ್ಸ್‌ ಕೊಡುತ್ತಿರುವುದು ಸತ್ಯ ಎಂದು ಹೇಳುತ್ತಿದೆ. ಕೂಡಲೇ ಬಿಜೆಪಿ ಅಭ್ಯರ್ಥಿ ಪರ ಐಪಿಸಿ 171 ಎ, ಬಿ, ಸಿ, ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿ ಕಾಯಿದೆ ಅಡಿಯಲ್ಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

‘ನನ್ನ ವಿರುದ್ಧ ಕೇವಲ ಸದಾನಂದಗೌಡರು, ಅಶ್ವತ್ಥ್‌‌ ನಾರಾಯಣ, ಅಶೋಕ್‌, ಸಿ.ಟಿ. ರವಿ, ಎಸ್‌.ಟಿ. ಸೋಮಶೇಖರ್‌ ಇವರೇ ಏಕೆ ಟೀಕೆ ಮಾಡುತ್ತಿದ್ದಾರೆ. ಕೇವಲ ಒಂದು ಸಮುದಾಯದ ನಾಯಕರೇ ಏಕೆ ಟೀಕೆ ಮಾಡುತ್ತಿದ್ದಾರೆ? ಯಡಿಯೂರಪ್ಪನವರು ಏಕೆ ಮಾತನಾಡುತ್ತಿಲ್ಲ. ನಾನು ಯಾವ ವಿಚಾರದಲ್ಲಿ ಜಾತಿ ರಾಜಕಾರಣ ಮಾಡುತ್ತಿದ್ದೇನೆ? ನನ್ನ ವಿರುದ್ಧ ಒಂದು ಸಮುದಾಯದ ನಾಯಕರೇ ಏಕೆ ಟೀಕಿಸುತ್ತಿದ್ದಾರೆ, ಇದು ಜಾತಿ ರಾಜಕಾರಣ ಅಲ್ಲವೇ? ನನಗೆ ಕಾಂಗ್ರೆಸ್ಸೇ ಜಾತಿ ಎಂದು ಶಿವಕುಮಾರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ