ಆ್ಯಪ್ನಗರ

'ರಾಜ್ಯ ಬಜೆಟ್‌ನಲ್ಲಿ SCಗೆ ಶೇ.20, STಗೆ ಶೇ. 10ರಷ್ಟು ಅನುದಾನ ಮೀಸಲಿಡಿ': ದಲಿತ ಸಂಘಟನೆಗಳ ಆಗ್ರಹ

ಬಜೆಟ್‌ನಲ್ಲಿ ಪರಿಶಿಷ್ಟ ಜಾತಿಗೆ ಶೇ.20 ಹಾಗೂ ಪ.ವರ್ಗದವರಿಗೆ ಶೇ.10 ರಷ್ಟು ಅನುದಾನ ಕಾಯ್ದಿರಿಸಬೇಕು. ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಿಕೊಳ್ಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅನ್ನೋದು ಪ್ರಮುಖ ಬೇಡಿಕೆ

Vijaya Karnataka Web 17 Feb 2020, 6:50 pm
ಬೆಂಗಳೂರು: ರಾಜ್ಯ ಸರಕಾರ ಪ್ರಸ್ತುತ ಸಾಲಿನಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡುವುದೂ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
Vijaya Karnataka Web dalit
'ರಾಜ್ಯ ಬಜೆಟ್‌ನಲ್ಲಿ SCಗೆ ಶೇ.20, STಗೆ ಶೇ. 10ರಷ್ಟು ಅನುದಾನ ಮೀಸಲಿಡಿ': ದಲಿತ ಸಂಘಟನೆಗಳ ಆಗ್ರಹ


ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಎನ್‌. ಮೂರ್ತಿ, ‘ಎಸ್‌ಸಿ ಮತ್ತು ಎಸ್‌ಟಿ ವರ್ಗದವರು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ಹೀಗಾಗಿ, ಬಜೆಟ್‌ನಲ್ಲಿ ಪರಿಶಿಷ್ಟ ಜಾತಿಗೆ ಶೇ.20 ಹಾಗೂ ಪ.ವರ್ಗದವರಿಗೆ ಶೇ.10 ರಷ್ಟು ಅನುದಾನ ಕಾಯ್ದಿರಿಸಬೇಕು. ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಿಕೊಳ್ಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಎಸ್‌.ಸಿ.ಪಿ. ಹಾಗೂ ಟಿ.ಎಸ್‌.ಪಿ. ಕಾಯಿದೆಯ 7ಡಿ ಕಲಂ ಅನ್ವಯ ಪ.ಜಾತಿ ಮತ್ತು ಪ.ವರ್ಗಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡುತ್ತಿರುವುದರಿಂದ ಈ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ, 7ಡಿ ಸೆಕ್ಷನ್‌ ರದ್ದುಗೊಳಿಸಬೇಕು. ಸರಕಾರದ ಎಲ್ಲಾ ನಿಗಮಗಳಲ್ಲಿ ಹಾಗೂ 34 ಇಲಾಖೆಗಳಲ್ಲಿ ಪ. ಜಾತಿ ಮತ್ತು ಪ. ವರ್ಗದವರಿಗೆ ಶೇ. 24.1 ರಷ್ಟು ಅವಕಾಶ ಮೀಸಲಿಡಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಸಿಕ ಐದು ಸಾವಿರ ಭತ್ಯೆ ನೀಡುವುದು. ಆದಿಜಾಂಬವ, ಭೋವಿ ಜನಾಂಗ ಸೇರಿದಂತೆ ನಾನಾ ಅಭಿವೃದ್ಧಿ ನಿಗಮಗಳಿಗೆ ಎರಡು ಸಾವಿರ ಕೋಟಿ ರೂ. ಅನುದಾನ ನೀಡಿ ಸಮುದಾಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

ಬಂಜಾರ ಸಮಾಜದ ಅಭಿವೃದ್ಧಿಗೆ 100 ಕೋಟಿ ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ