ಆ್ಯಪ್ನಗರ

‘ಬಲಗೈ ಉಂಗುರ ರಹಸ್ಯ’ ಶ್ರೀರಾಮುಲುಗೆ ಲಕ್ಷ್ಮಣ ಸವದಿ ನೀಡಿದ ಸಲಹೆ ಏನು?

ಬಲಗೈ ಉಂಗುರದ ಕುರಿತಾಗಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವ ಶ್ರೀರಾಮುಲು ನಡುವೆ ಸ್ವಾರಸ್ಯಕರ ಚರ್ಚೆ ನಡೆದಿದೆ. ಸಿಎಂ ಜೊತೆಗಿನ ಶಾಸಕರ ಸಭೆಗೂ ಮುನ್ನ ಶ್ರೀರಾಮುಲು ಹಾಗೂ ಸವದಿ ಉಂಗುರದ ಬಗ್ಗೆ ಚರ್ಚೆ ನಡೆಸಿದರು.

Vijaya Karnataka Web 4 Jan 2021, 3:59 pm
ಬೆಂಗಳೂರು: ‘ಬಲಗೈ ಉಂಗುರ’ ಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಹಾಗೂ ಡಿಸಿಎಂ ಲಕ್ಷ್ಮಣ ಸವದಿ ನಡುವೆ ನಡೆದ ಮಾತುಕತೆ ಪ್ರಸಂಗ ಕುತೂಹಲ ಕೆರಳಿಸಿದೆ. ನಗರದ ಕ್ಯಾಪಿಟಲ್‌ ಹೋಟೆಲ್‌ನಲ್ಲಿ ಸೋಮವಾರ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಶ್ರೀರಾಮು ಹಾಗೂ ಲಕ್ಷ್ಮಣ ಸವದಿ ಬಲಗೈ ಉಂಗುರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು.
Vijaya Karnataka Web ramulu


ಸಚಿವ ಶ್ರೀರಾಮುಲು ಬಲಗೈ ಮಧ್ಯಬೆರಳಿನಲ್ಲಿದ್ದ ಉಂಗುರದ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಕುತೂಹಲದಿಂದ ಮಾಹಿತಿ ಪಡೆದುಕೊಂಡರು. ದೊಡ್ಡ ಹಸಿರು ವರ್ಣದ ಹರಳು ಇದ್ದ ಉಂಗುರವನ್ನು ಸಚಿವ ಶ್ರೀರಾಮುಲು ಧರಿಸಿದ್ದರು. ಈ ಉಂಗುರದ ಬಗ್ಗೆ ಸವದಿ ಮಾಹಿತಿ ಪಡೆದುಕೊಂಡರು.

ಬಿಜೆಪಿ ಶಾಸಕರ ಸಭೆ: 'ಕಲ್ಯಾಣ ಕರ್ನಾಟಕ' ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ! ಭರವಸೆ ನೀಡಿದ ಬಿಎಸ್‌ವೈ

ಸಿಎಂ‌ ಬಿಎಸ್‌ ಯಡಿಯೂರಪ್ಪ ಎದುರೇ ರಾಮುಲು ಕೈಯನ್ನು ಹಿಡಿದುಕೊಂಡ ಸವದಿ ಉಂಗುರದ ಕುರಿತಾಗಿ ವಿಚಾರಣೆ ನಡೆಸಿದರು. ಉಂಗುರವನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು, ಯಾವ ಹರಳಿನ ಉಂಗುರವಿದು ಮುಂತಾದ ಪ್ರಶ್ನೆಗಳನ್ನು ಕೇಳಿದರು. ಅಲ್ಲದೆ ರಾಶಿ, ನಕ್ಷತ್ರದ ಆಧಾರದ ಮೇಲೆ ಹರಳನ್ನು ಧರಿಸಬೇಕು ಎಂಬ ಸಲಹೆಯನ್ನು ನೀಡಿದರು.

ಅಷ್ಟೇ ಅಲ್ಲದೆ, ಯಾವ ಜ್ಯೋತಿಷಿ ಬಳಿ ಮಾತುಕತೆ ನಡೆಸಿ, ಇದನ್ನು ಧರಿಸಿದ್ದೀರಿ? ಸುಖಾಸುಮ್ಮನೆ ಹರಳು ಹಾಕಿಕೊಳ್ಳನಬಾರದು ಎಂಬ ಸಲಹೆಯನ್ನು ಡಿಸಿಎಂ ಲಕ್ಷ್ಮಣ ಸವದಿ ಸಚಿವರಾದ ಶ್ರೀರಾಮುಲಿಗೆ ನೀಡಿದ್ದಾರೆ. ಸುಮಾರು ನಾಲ್ಕೈದು ನಿಮಿಷಗಳ ಕಾಲ ರಾಮುಲು ಕೈ ಹಿಡಿದು ಉಂಗುರದ ಕುರಿತು ಮಾತನಾಡಿದ್ದು ಕುತೂಹಲ ಕೆರಳಿಸಿದೆ.

ಶ್ರೀರಾಮುಲು ಡಿಸಿಎಂ ಆಕಾಂಕ್ಷಿಯಾಗಿದ್ದು ಕೋವಿಡ್‌ ಸಂದರ್ಭದಲ್ಲಿ ಆರೋಗ್ಯ ಖಾತೆಯನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಡಿಸಿಎಂ ಆಗಬೇಕು ಎಂದು ದೇವರಲ್ಲಿ ಹರಕೆ ಹೊತ್ತುಕೊಂಡಿದ್ದ ಸುದ್ದಿಯೂ ಚರ್ಚೆಗೆ ಗ್ರಾಸವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ