ಆ್ಯಪ್ನಗರ

ಅತೃಪ್ತರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಜಾರಿ ಎಚ್ಚರಿಕೆ ?

ಅತೃಪ್ತರು ಮರಳಿ ಬಾರದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಕ್ರಮ ಜರುಗಿಸುವುದಾಗಿ ದೋಸ್ತಿ ನಾಯಕರು ಎಚ್ಚರಿಸಿದ್ದಾರೆ ಡಿಸಿಎಂ ಜಿ...

Vijaya Karnataka 9 Jul 2019, 9:00 am
ಬೆಂಗಳೂರು : ಅತೃಪ್ತರು ಮರಳಿ ಬಾರದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಕ್ರಮ ಜರುಗಿಸುವುದಾಗಿ ದೋಸ್ತಿ ನಾಯಕರು ಎಚ್ಚರಿಸಿದ್ದಾರೆ.
Vijaya Karnataka Web 0707-2-2-KSG_01


ಡಿಸಿಎಂ ಜಿ.ಪರಮೇಶ್ವರ ನಿವಾಸದಲ್ಲಿ ನಡೆದ ಸಭೆಯಲ್ಲೆ ಈ ಬಗ್ಗೆ ಸಮಾಲೋಚಿಸಲಾಗಿತ್ತು. ನಂತರ ಪರಮೇಶ್ವರ ಸೇರಿದಂತೆ ಸಚಿವರಾದ ಎಂ.ಬಿ.ಪಾಟೀಲ್‌, ಕೃಷ್ಣ ಬೈರೇಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕುಮಾರಕೃಪಾ ಅತಿಥಿ ಗೃಹದಲ್ಲಿ ಮತ್ತೊಂದು ಸುತ್ತಿನ ಸಭೆ ಸೇರಿ ಕಾನೂನು ಪರಾಮರ್ಶೆ ನಡೆಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರನ್ನು ತಮಿಳುನಾಡು ಮಾದರಿಯಲ್ಲಿ ಅನರ್ಹಗೊಳಿಸುವ ಬಗ್ಗೆಯೂ ಪರಿಶೀಲಿಸಲಾಯಿತು.

ಕಳೆದ ಬಜೆಟ್‌ ಅಧಿವೇಶನದ ವೇಳೆ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ನಾಲ್ವರ ವಿರುದ್ಧ ಸಲ್ಲಿಸಿದ್ದ ದೂರು ಇನ್ನೂ ಸ್ಪೀಕರ್‌ ಅಂಗಳದಲ್ಲಿದ್ದು ಇತ್ಯರ್ಥ ಬಾಕಿಯಿದೆ. ರಮೇಶ್‌ ಜಾರಕಿಹೊಳಿ ಹಾಗೂ ಮಹೇಶ್‌ ಕುಮಟಳ್ಳಿ ಈಗ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮತ್ತೊಂದು ದೂರು ಸಲ್ಲಿಸಲು ಕೈ ನಾಯಕರು ಯೋಚಿಸಿದ್ದಾರೆ ಎನ್ನಲಾಗಿದೆ. ಜತೆಗೆ ಮೊದಲ ಕಂತಿನಲ್ಲಿ ಇಬ್ಬರನ್ನು ಅನರ್ಹಗೊಳಿಸಿ ಅತಂತ್ರ ಸ್ಥಿತಿಯಲ್ಲಿಡುವುದು ದೋಸ್ತಿಗಳ ತಂತ್ರವಾಗಿದೆ. ಅನರ್ಹಗೊಂಡ ಶಾಸಕರು ಮುಂದಿನ ಸರಕಾರದಲ್ಲಿ ಸಚಿವರಾಗುವಂತಿಲ್ಲ,ಜತೆಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದುಬಂದರಷ್ಟೇ ಸಚಿವರಾಗುವ ಅವಕಾಶವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ