ಆ್ಯಪ್ನಗರ

ಪದವಿ ಕಾಲೇಜು ಶುಲ್ಕ ನಿಗದಿ

ವಿಕ ಸುದ್ದಿಲೋಕ ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯು ಸರಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿನ ಪದವಿ ಕೋರ್ಸ್‌ಗಳಿಗೆ 2019-20ನೇ ಸಾಲಿಗೆ ಶುಲ್ಕ ನಿಗದಿಪಡಿಸಿದೆ...

Vijaya Karnataka 11 May 2019, 5:00 am
ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯು ಸರಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿನ ಪದವಿ ಕೋರ್ಸ್‌ಗಳಿಗೆ 2019-20ನೇ ಸಾಲಿಗೆ ಶುಲ್ಕ ನಿಗದಿಪಡಿಸಿದೆ.
Vijaya Karnataka Web book


ಪ್ರವೇಶ ಶುಲ್ಕ 80 ರೂ., ಬೋಧನಾ ಶುಲ್ಕ 940 ರೂ., ಪ್ರಯೋಗಾಲಯ ಶುಲ್ಕ 260 ರೂ. (ವಿದ್ಯಾರ್ಥಿನಿಯರಿಗೆ ಶುಲ್ಕ ಮನ್ನಾ), ವೈದ್ಯಕೀಯ ತಪಾಸಣಾ ಶುಲ್ಕ 30 ರೂ, ವರ್ಗಾವಣೆ ಪ್ರಮಾಣ ಪತ್ರ 40 ರೂ, ವಿದ್ಯಾಭ್ಯಾಸ ಪ್ರಮಾಣ ಪತ್ರ ಶುಲ್ಕ 20 ರೂ, ವಾಚನಾಲಯ ಶುಲ್ಕ 70 ರೂ, ಕ್ರೀಡಾ ಶುಲ್ಕ 100 ರೂ, ಗ್ರಂಥಾಲಯ ಶುಲ್ಕ 100 ರೂ. ನಿಗದಿಪಡಿಸಲಾಗಿದೆ.

ಕಾಲೇಜು ಅಭಿವೃದ್ಧಿ ಶುಲ್ಕ (ಸರಕಾರಿ ಕಾಲೇಜುಗಳಿಗೆ ಮಾತ್ರ) 200 ರೂ, ಕರ್ನಾಟಕ ಶಿಕ್ಷಕರ ಕಲ್ಯಾಣ ನಿಧಿ 25 ರೂ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ 25 ರೂ. ಹಾಗೂ ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ರೋವರ್‌ ಮತ್ತು ರೇಂಜರ್‌ ಘಟಕ ಪ್ರಾರಂಭಿಸಲು ಹಾಗೂ ಘಟಕಗಳ ಚಟುವಟಿಕೆ ಶುಲ್ಕ 50 ರೂ. ನಿಗದಿಪಡಿಸಲಾಗಿದೆ. ಇದಲ್ಲದೆ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಶುಲ್ಕ 50 ರೂ, ಎನ್‌ಎಸ್‌ಎಸ್‌ ಶುಲ್ಕ: ಘಟಕ ಇಲ್ಲದ ಕಾಲೇಜುಗಳಲ್ಲಿ 50 ರೂ, ಒಂದು ಘಟಕ ಇರುವ ಕಾಲೇಜುಗಳಲ್ಲಿ 40 ರೂ. ನಿಗದಿಪಡಿಸಲಾಗಿದೆ.

ಆಯಾ ವಿವಿಗಳು ನಿಗದಿಪಡಿಸಿದಂತೆ ವಿಶ್ವವಿದ್ಯಾಲಯ ಪರೀಕ್ಷಾ ಶುಲ್ಕ ಹಾಗೂ ಕ್ರೀಡಾ ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸಲು ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.

2018-19ನೇ ಸಾಲಿನಲ್ಲಿ ಸರಕಾರಿ, ಅರೆ ಸರಕಾರಿ ಹಾಗೂ ವಿವಿಗಳಲ್ಲಿ ಶುಲ್ಕ ವಿನಾಯಿತಿ ನೀಡಲಾಗಿತ್ತು. 2019-20ನೇ ಸಾಲಿನಲ್ಲಿ ಅರೆ ಸರಕಾರಿ ಹಾಗೂ ವಿಶ್ವವಿದ್ಯಾಲಯಗಳ ಶುಲ್ಕವನ್ನು ವಿದ್ಯಾರ್ಥಿನಿಯರಿಂದ ವಸೂಲಿ ಮಾಡಿ, ಪ್ರವೇಶಾತಿ ಮತ್ತು ಪರೀಕ್ಷಾ ಶುಲ್ಕ ವಸೂಲಾತಿ ಪ್ರಕ್ರಿಯೆ ಮುಗಿದ ನಂತರ ಮರುಪಾವತಿಸಲು ಸೂಚಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ