ಆ್ಯಪ್ನಗರ

ಬಿಜೆಪಿಯಿಂದ ಹೆಲಿಕಾಪ್ಟರ್‌ ಬಳಕೆ: ಠೇವಣಿ ಹಣ ಇರಿಸಲು ಆದೇಶ

ಹೆಲಿಕಾಪ್ಟರ್‌ ಬಳಕೆ ಸಂಬಂಧ ಬಾಕಿ ಹಣ ಪಾವತಿಸಲು ಎರಡು ವಾರಗಳಲ್ಲಿ 20 ಲಕ್ಷ ರೂ. ಮೊತ್ತವನ್ನು ಠೇವಣಿ ಇರಿಸುವಂತೆ ಬಿಜೆಪಿಗೆ ಹೈಕೋರ್ಟ್‌ ಆದೇಶಿಸಿದೆ.

Vijaya Karnataka 1 Aug 2019, 5:00 am
ಬೆಂಗಳೂರು : ಹೆಲಿಕಾಪ್ಟರ್‌ ಬಳಕೆ ಸಂಬಂಧ ಬಾಕಿ ಹಣ ಪಾವತಿಸಲು ಎರಡು ವಾರಗಳಲ್ಲಿ 20 ಲಕ್ಷ ರೂ. ಮೊತ್ತವನ್ನು ಠೇವಣಿ ಇರಿಸುವಂತೆ ಬಿಜೆಪಿಗೆ ಹೈಕೋರ್ಟ್‌ ಆದೇಶಿಸಿದೆ.
Vijaya Karnataka Web deposit money court insist to bjp
ಬಿಜೆಪಿಯಿಂದ ಹೆಲಿಕಾಪ್ಟರ್‌ ಬಳಕೆ: ಠೇವಣಿ ಹಣ ಇರಿಸಲು ಆದೇಶ


ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ ದಾಖಲಿಸಿದ್ದ ರಿಟ್‌ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಕೃಷ್ಣ ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠವು ಬುಧವಾರ ಆದೇಶ ಮಾಡಿದೆ.

ದಿಲ್ಲಿಯ ಒಎಸ್‌ಎಸ್‌ ಏರ್‌ ಮ್ಯಾನೇಜ್‌ಮೆಂಟ್‌ ಪ್ರೈ.ಲಿ. ಕಂಪನಿಯು ತನ್ನ ಹೆಲಿಕಾಪ್ಟರ್‌ ಹಾಗೂ ವಿಮಾನ ಸೇವೆಯನ್ನು 2014ರಲ್ಲಿ ಬಿಜೆಪಿ ಪಕ್ಷಕ್ಕೆ ನೀಡಿತ್ತು. ಹಣ ಪಾವತಿ ವಿಚಾರದಲ್ಲಿ ಐದು ವರ್ಷದಿಂದ ತಗಾದೆ ಇತ್ತು. ಈ ಸಿವಿಲ್‌ ದಾವೆಯನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡುವಂತೆ ಅಧೀನ ನ್ಯಾಯಾಲಯಕ್ಕೆ ನ್ಯಾಯಪೀಠವು ನಿರ್ದೇಶನವನ್ನು ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ