ಆ್ಯಪ್ನಗರ

ಅನಂತ್‌ ಸಾವಿನಲ್ಲಿ ಖುಷಿ ಕಂಡ ವಿಕೃತರು, ಅವಹೇಳನಕಾರಿ ಫೇಸ್‌ಬುಕ್‌ ಪೋಸ್ಟ್‌ಗೆ ವ್ಯಾಪಕ ಖಂಡನೆ

ಅನಂತಕುಮಾರ್‌ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಹಾಕಿದ ಮಂಗಳೂರು ಮುಸ್ಲಿಂ ಸಂಘಟನೆಗೆ ವ್ಯಾಪಕ ಖಂಡನೆ

Vijaya Karnataka Web 12 Nov 2018, 12:39 pm
ಬೆಂಗಳೂರು: ಕೇಂದ್ರ ಸಚಿವ ಅನಂತ ಕುಮಾರ್‌ ನಿಧನಕ್ಕೆ ನಾಡೇ ಕಂಬನಿ ಮಿಡಿದಿದ್ದರೆ, ಮಂಗಳೂರು ಮುಸ್ಲಿಮ್ಸ್ ಎಂಬ ಫೇಸ್‌ಬುಕ್ ಪುಟವೊಂದರಲ್ಲಿ ಸಂಘಟನೆಯೊಂದು ಅವಹೇಳನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಿ ವಿಕೃತಿ ಮೆರೆದಿದೆ.
Vijaya Karnataka Web Anant kumar


ಅನಂತ್‌ ಕುಮಾರ್‌ ಅವರನ್ನು ಕೋಮುವಾದಿ ಎಂದಿರುವ ಸಂಘಟನೆ, 'ಜಾತಿ ಜಾತಿ ರಾಮ ರಾಮ ಅನ್ನುತ್ತಲೇ ಹೊಗೆ ಹಾಕಿಕೊಂಡ ಕೋಮುವಾದಿ ಅನಂತಕುಮಾರ್ ದೇಶ ಹಾಳು ಮಾಡಲು ಇನ್ನೊಮ್ಮೆ ಹುಟ್ಟಬೇಡ' ಎಂಬ ಒಕ್ಕಣೆಯೊಂದಿಗೆ ಪೋಸ್ಟ್‌ ಮಾಡಿದೆ.

ಈ ಪೋಸ್ಟ್‌ಗೆ ಫೇಸ್‌ಬುಕ್‌ ಬಳಕೆದಾರರು ಸಂಘಟನೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅವಾಚ್ಯ ಶಬ್ಧಗಳಿಂದ ಸಂಘಟನೆಯನ್ನು ನಿಂದಿಸಿದ್ದಾರೆ.
ಅಲ್ಲದೆ ಇಂತಹ ಪೋಸ್ಟ್‌ ಮಾಡಿರುವುದು ಅಕ್ಷಮ್ಯ ಎಂದು ಮುಸ್ಲಿಂ ಸಮುದಾಯದ ಪ್ರಜ್ಞಾವಂತರೇ ಪ್ರತಿಕ್ರಿಯೆ ನೀಡಿದ್ದು, ಫೇಸ್‌ ಬುಕ್‌ ಖಾತೆಗೂ ಮಂಗಳೂರು ಮುಸ್ಲಿಮರಿಗೂ ಯಾವುದೇ ಸಂಬಂಧ ಇಲ್ಲ ಎಂದು ಕಮೆಂಟ್‌ ಮಾಡಿದ್ದಾರೆ.

ಪೋಸ್ಟ್‌ ಹಾಗೂ ಪ್ರತಿಕ್ರಿಯೆಗಳ ಕೆಲವು ಸ್ಯಾಂಪಲ್‌ಗಳು ಇಲ್ಲಿವೆ ನೋಡಿ:

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ