ಆ್ಯಪ್ನಗರ

ಪಿರಿಯಾ ಪಟ್ಟಣ: ಆನೆ ದಾಳಿಗೆ ಬೇಸತ್ತು ಸಾವಿರ ಬಾಳೆ ಗಿಡ ನಾಶ

ಇತ್ತೀಚೆಗೆ ವಿದ್ಯಾವಂತರು, ಇತರೆ ಉದ್ಯೋಗಿಗಳು ಕೂಡ ಜಮೀನು ಖರೀದಿಸಿ ವ್ಯವಸಾಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಕಷ್ಟ ಪಟ್ಟು ಬೆಳೆದ ಬೆಳೆ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಕಾಡು ಪ್ರಾಣಿಗಳಿಗೆ ಆಹಾರವಾಗುತ್ತಿದ್ದು, ರೈತರನ್ನು ಧೃತಿಗೆಡುವಂತೆ ಮಾಡಿದೆ

Vijaya Karnataka Web 28 Jul 2020, 12:30 pm
ಪಿರಿಯಾಪಟ್ಟಣ: ಆನೆ ದಾಳಿಯಿಂದ ಬೇಸತ್ತ ತಾಲೂಕಿನ ರೈತರೊಬ್ಬರು 1000 ಬಾಳೆ ಗಿಡಗಳನ್ನು ಸೋಮವಾರ ನಾಶಪಡಿಸಿದ್ದು, ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್‌ ಆಗಿದ್ದು, ರೈತರ ಬಗ್ಗೆ ಕನಿಕರ ವ್ಯಕ್ತವಾಗಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಪಿರಿಯಾಪಟ್ಟಣ ತಾಲೂಕಿನ ಬೂದಿ ತಿಟ್ಟು ಗ್ರಾಮದ ವಕೀಲ ಮತ್ತು ರೈತ ಕರುಣಾಕರ್‌ ತಮ್ಮ ತೋಟದಲ್ಲಿಎರಡು ಎಕರೆಯಲ್ಲಿ ಬಾಳೆ ಗಿಡಗಳನ್ನು ಬೆಳೆದಿದ್ದು, ಕಾಡಂಚಿನ ಗ್ರಾಮವಾದ್ದರಿಂದ ಕಾಡಾನೆ ಹಾವಳಿ ಹೆಚ್ಚಾಗಿದೆ. ಶನಿವಾರ ರಾತ್ರಿ ಕೂಡ ದಾಳಿ ಇಟ್ಟು ಗೊನೆಗೆ ಬಂದ ಬಾಳೆಗಿಡಗಳು ನಾಶಪಡಿಸಿವೆ. ನಿತ್ಯ ಆನೆ ಹಾವಳಿಯಿಂದ ಬೇಸತ್ತ ಕರುಣಾಕರ್‌ ಗಿಡಗಳನ್ನು ನಾಶಪಡಿಸಿದ್ದಾರೆ.

''ಇತ್ತೀಚೆಗೆ ವಿದ್ಯಾವಂತರು, ಇತರೆ ಉದ್ಯೋಗಿಗಳು ಕೂಡ ಜಮೀನು ಖರೀದಿಸಿ ವ್ಯವಸಾಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಕಷ್ಟ ಪಟ್ಟು ಬೆಳೆದ ಬೆಳೆ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಕಾಡು ಪ್ರಾಣಿಗಳಿಗೆ ಆಹಾರವಾಗುತ್ತಿದ್ದು, ರೈತರನ್ನು ಧೃತಿಗೆಡುವಂತೆ ಮಾಡಿದೆ'' ಎಂದು ಕರುಣಾಕರ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ