ಆ್ಯಪ್ನಗರ

ಉದ್ಯಮಿಗಳ ಕೊರೊನಾ ಪರೀಕ್ಷೆ, ಕ್ವಾರಂಟೈನ್‌ಗೆ ಬೇರೆ ಮಾದರಿ: ಡಿಜಿಪಿ ಪ್ರವೀಣ್‌ ಸೂದ್‌

ಉದ್ಯಮಿಗಳಿಗೆ ಕ್ವಾರಂಟೈನ್‌ ಮತ್ತು ಪರೀಕ್ಷೆ ವಿಚಾರದಲ್ಲಿ ಬೇರೊಂದು ಮಾದರಿ ಅನುಸರಿಸಲಾಗುವುದು ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

Vijaya Karnataka Web 1 Jun 2020, 8:47 pm
ಬೆಂಗಳೂರು: ಉದ್ಯಮಿಗಳಿಗೆ ಕ್ವಾರಂಟೈನ್‌ ಮತ್ತು ಪರೀಕ್ಷೆ ವಿಚಾರದಲ್ಲಿ ಬೇರೊಂದು ಮಾದರಿ ಅನುಸರಿಸಲಾಗುವುದು ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.
Vijaya Karnataka Web dgp praveen sood


''ಈ ಮೊದಲು ಹೊರದೇಶ ಮತ್ತು ಹೊರ ರಾಜ್ಯಗಳಿಂದ ಬರುವವರಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಅವಧಿ ಕಡ್ಡಾಯವಾಗಿತ್ತು. ಈ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಬದಲಿಗೆ ಕೇವಲ 7 ದಿನ ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿದ್ದು ಉಳಿದ ಏಳು ದಿನಗಳ ಕಾಲ ಹೋಂ ಕ್ವಾರಂಟೈನ್‌ ಗೆ ಒಳಪಡಬಹುದಾಗಿದೆ,'' ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

''ಯಾರಲ್ಲಾದರೂ ಕೊರೋನಾ ಲಕ್ಷಣಗಳು ಕಂಡು ಬಂದರೆ ಮಾತ್ರ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಇಲ್ಲವಾದಲ್ಲಿ ಯಾರನ್ನೂ ಪರೀಕ್ಷೆಗೆ ಒಳಪಡಿಸುವುದಿಲ್ಲ,'' ಎಂದು ತಿಳಿಸಿದ್ದಾರೆ.

ಅಪ್ಪಳಿಸಲು ರೆಡಿಯಾಗ್ತಿದೆ 'ನಿಸರ್ಗಾ' ಸೈಕ್ಲೋನ್‌: ಮಹಾರಾಷ್ಟ್ರ, ಗುಜರಾತ್‌ಗೆ ರೆಡ್ ಅಲರ್ಟ್!

20 ಮಂದಿ ಕ್ವಾರಂಟೈನ್‌ ಗೆ
ಡಿಜಿ-ಐಜಿಪಿ ಕಚೇರಿಯ ಭದ್ರತಾ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ 20 ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸುವ ಸಾಧ್ಯತೆಗಳಿವೆ. ಈಗಾಗಲೇ ಆ 20 ಸಿಬ್ಬಂದಿಯ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಆರೋಗ್ಯ ಇಲಾಖೆಗೆ ಕಳುಹಿಸಿಕೊಡಲಾಗಿದೆ.

ಅಪ್ಪಳಿಸಲು ರೆಡಿಯಾಗ್ತಿದೆ 'ನಿಸರ್ಗಾ' ಸೈಕ್ಲೋನ್‌: ಮಹಾರಾಷ್ಟ್ರ, ಗುಜರಾತ್‌ಗೆ ರೆಡ್ ಅಲರ್ಟ್!

ಈಗಾಗಲೇ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಸಮಸ್ಯೆ ಇರುವವರಿಗೆ ಕಚೇರಿಗೆ ಬರುವ ಅಗತ್ಯವಿಲ್ಲ, ಇತರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ