ಆ್ಯಪ್ನಗರ

ಉದ್ಧವ್ ರಾಜ್ಯದ ಭೂಮಿಯನ್ನು ವಶಪಡಿಸಿಕೊಳ್ಳುವುದು ಭ್ರಮೆ, ದಿನೇಶ್ ಗುಂಡೂರಾವ್ ಕಿಡಿ

ರಾಜ್ಯದ ಗಡಿಯನ್ನು ವಶಪಡಿಸಿಕೊಳ್ಳುವುದು ಮಹಾರಾಷ್ಟ್ರದ ಭ್ರಮೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ಅವರು ಹೀಗೆ ತಿರುಗೇಟು ನೀಡಿದ್ದಾರೆ.

Vijaya Karnataka Web 18 Jan 2021, 1:07 pm
ಬೆಂಗಳೂರು: ರಾಜ್ಯದ ಭೂಮಿಯನ್ನು ವಶಪಡಿಸಿಕೊಳ್ಳುವುದು ಉದ್ಧವ್ ಠಾಕ್ರೆ ಭ್ರಮೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಗಡಿ ವಿಚಾರವಾಗಿ ಮಹರಾಷ್ಟ್ರ ಸಿಎಂ ಉದ್ಧವ್ ಹೇಳಿಕೆ ಹಿನ್ನೆಲೆಯಲ್ಲಿ ಟ್ವಿಟ್ಟರ್‌ ಮೂಲಕ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web Dinesh Gundu Rao


ಸದ್ಯ ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಒಂದು ರಾಜ್ಯದ ಮುಖ್ಯಮಂತ್ರಿಯಾದ ಉದ್ಧವ್ ಠಾಕ್ರೆಗೆ ಕೋರ್ಟ್‌ನಲ್ಲಿರುವ ಪ್ರಕರಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂಬ ಕನಿಷ್ಟ ಜ್ಞಾನವೂ ಇಲ್ಲವೆ? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದ ಸಿಎಂ ಉದ್ಧವ್‌ ಠಾಕ್ರೆ‌, ನೆರೆಯ ರಾಜ್ಯದಿಂದ ಮತ್ತೆ ಕ್ಯಾತೆ!


ಉದ್ಧವ್ ರಾಜ್ಯದ ಭೂಮಿಯನ್ನು ವಶಪಡಿಸಿಕೊಳ್ಳುವುದು ಭ್ರಮೆ.ರಾಜ್ಯದ ಒಂದೇ ಒಂದು ಇಂಚು ಭೂಮಿಯೂ ಅನ್ಯರ ಪಾಲಾಗಲು ಸಾಧ್ಯವಿಲ್ಲ. ಕರ್ನಾಟಕ ಅಕ್ರಮಿತ ಪ್ರದೇಶ ಎಂಬ ಉದ್ಧವ್ ಹೇಳಿಕೆಯೇ ಅಸಂಬದ್ಧ. ಕರ್ನಾಟಕ ಯಾವ ಪ್ರದೇಶವನ್ನು ಅತಿಕ್ರಮಿಸಿಕೊಂಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.


1956ರ ರಾಜ್ಯ ಪುನರ್ವಿಂಗಡನೆ ಸಂದರ್ಭದಲ್ಲಿ ಬೆಳಗಾವಿ ನ್ಯಾಯಬದ್ಧವಾಗಿಯೇ ಅಂದಿನ ಮೈಸೂರು ಸಂಸ್ಥಾನದ ಭಾಗವಾಗಿದೆ. ಮಹಾಜನ್ ಆಯೋಗದ ವರದಿಯೂ ಅದನ್ನು ಸ್ಪಷ್ಟಪಡಿಸಿದೆ. ಹೀಗಿರುವಾಗ ಮಹಾರಾಷ್ಟ್ರದ ಕೀಟಲೆಗೆ ಅರ್ಥವಿದೆಯೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ