ಆ್ಯಪ್ನಗರ

‘ಮೋದಿಯವರೇ ಇದು ಡಬಲ್‌ ಎಂಜಿನ್‌ ಸರ್ಕಾರವೋ, ಡಕೋಟ ಎಂಜಿನ್ ಸರ್ಕಾರವೋ ಹೇಳಿ’; ದಿನೇಶ್‌ ಗುಂಡೂರಾವ್‌

ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಕಿಡಿಕಾರಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರೋದ್ರಿಂದ ಇದು ಡಬಲ್‌ ಎಂಜಿನ್ ಸರ್ಕಾರ ಎಂದಿದ್ದ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.

Vijaya Karnataka Web 9 Nov 2020, 11:21 am
ಬೆಂಗಳೂರು: ನರೇಂದ್ರ ಮೋದಿಯವರೇ ನೀವು ಹೇಳಿದ 'ಡಬಲ್ ಎಂಜಿನ್' ಸರ್ಕಾರ ಎಂದರೆ ಇದೇನಾ? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
Vijaya Karnataka Web dinesh gundu
Dinesh Gundu Rao


ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು ವರ್ಷ ಕಳೆದರೂ ಟೇಕಾಫ್‌ ಆಗದ ಕಾರಣ ವಿಜಯ ಕರ್ನಾಟಕ ವಿಸ್ತೃತ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಮುಖಂಡ ದಿನೇಶ್ ಗುಂಡೂರಾವ್, ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಕಿಡಿಕಾರಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರೋದ್ರಿಂದ ಇದು ಡಬಲ್‌ ಎಂಜಿನ್ ಸರ್ಕಾರ ಎಂದಿದ್ದ ಮೋದಿಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ ಕೈ ಹಿಡಿಯಲಿದ್ದಾರೆ ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್, ಸೋಮವಾರ ಅಧಿಕೃತ

ಈ ಕುರಿತು ತಮ್ಮ ಟ್ವೀಟ್‌ನಲ್ಲಿ ಗುಂಡೂರಾವ್ ಅವರು, ‘ನರೇಂದ್ರ ಮೋದಿಯವರೇ ನೀವು ಹೇಳಿದ 'ಡಬಲ್ ಎಂಜಿನ್' ಸರ್ಕಾರ ಎಂದರೆ ಇದೇನಾ? ರಾಜ್ಯದಲ್ಲಿ ನಿಮ್ಮ BSY ಆಡಳಿತದ ಸಾಧನೆ ನೋಡಿದ ಮೇಲೆ ಈ ಸರ್ಕಾರವನ್ನು 'ಡಬಲ್ ಎಂಜಿನ್' ಸರ್ಕಾರ ಎನ್ನಬೇಕೋ ಅಥವಾ 'ಡಕೋಟ ಎಂಜಿನ್' ಸರ್ಕಾರ ಎನ್ನಬೇಕೋ ನೀವೇ ಸ್ಪಷ್ಟಪಡಿಸಿ. ಕಿಲುಬುಗಟ್ಟಿರುವ ನಿಮ್ಮ ಈ ಡಕೋಟ ಎಂಜಿನ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿದೆಯೇ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.


ಟೇಕಾಫ್ ಆಗದ ಸರ್ಕಾರ: ವರ್ಷ ಕಳೆದರೂ ಟ್ರ್ಯಾಕ್ ಗೆ ಬರದ ಆಡಳಿತ!

‘ಟೇಕಾಫ್ ಆಗದ ಸರ್ಕಾರ: ವರ್ಷ ಕಳೆದರೂ ಟ್ರ್ಯಾಕ್ ಗೆ ಬರದ ಆಡಳಿತ’ ಎನ್ನುವ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿದ್ದ ವಿಜಯ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಉಂಟಾದ ಆಡಳಿತಾತ್ಮಕ ವೈಫಲ್ಯಗಳ ಬಗ್ಗೆ ವಿಸ್ತೃತವಾಗಿ ತಿಳಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ