ಆ್ಯಪ್ನಗರ

‘ಕೃಷಿ ಮಸೂದೆ ಅನ್ನದಾತನ ಹೊಟ್ಟೆ ಬಗೆಯುವುದರಲ್ಲಿ ಅನುಮಾನವೇ ಇಲ್ಲ’; ದಿನೇಶ್ ಗುಂಡೂರಾವ್

ವಿಜಯ ಕರ್ನಾಟಕ ವೆಬ್‌ತಾಣದ ಸುದ್ದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಗುತ್ತಿಗೆದಾರನಂತೆ ವರ್ತಿಸುತ್ತಿದೆ. ರೈತ ವಿರೋಧಿ ಕೃಷಿ ಮಸೂದೆಗಳನ್ನು ಮಂಡಿಸುವ ಮೂಲಕ ರೈತರ ಅಸ್ತಿತ್ವವನ್ನೇ ನಾಶ ಮಾಡುವ ಹುನ್ನಾರ ನಡೆಸುತ್ತಿದೆ. ರೈತರನ್ನು ದಾರಿ ತಪ್ಪಿಸಿ ಮಂಡಿಸಿರುವ ಮಸೂದೆಗಳು ಕೆಲವೇ ದಿನಗಳಲ್ಲಿ ಅನ್ನದಾತನ ಹೊಟ್ಟೆ ಬಗೆಯುವದರಲ್ಲಿ ಅನುಮಾನವೇ ಇಲ್ಲ ಎಂದು ಕಿಡಿಕಾರಿದ್ದಾರೆ.

Vijaya Karnataka Web 21 Sep 2020, 5:50 pm
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ರೈತ ಮಸೂದೆಗೆ ವಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ರಣ್‌ದೀಪ್ ಸೀಂಗ್ ಸುರ್ಜೇವಾಲ ಸೇರಿದಂತೆ ಇತ್ತ ರಾಜ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಇದು ರೈತರ ಪಾಲಿಗೆ ಮರಣ ಶಾಸನ ಎಂದು ಕಿಡಿಕಾರಿದ್ದಾರೆ.
Vijaya Karnataka Web dinesh gundu Rao


‘ನಮ್ಮ ನಡುವೆ ಗಲಾಟೆ ಏನಿಲ್ಲ, ಅವರೇನೋ ಪದ ಬಳಕೆ ಮಾಡಿದ್ದು ನಂಗೆ ಬೇಜಾರಾಯ್ತು’; ಸಚಿವ ನಾರಾಯಣ ಗೌಡ ಸ್ಪಷ್ಟನೆ

ಈ ಮಧ್ಯೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಈ ಕಾಯ್ದೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಜಯ ಕರ್ನಾಟಕ ವೆಬ್‌ತಾಣದ ಸುದ್ದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಗುತ್ತಿಗೆದಾರನಂತೆ ವರ್ತಿಸುತ್ತಿದೆ. ರೈತ ವಿರೋಧಿ ಕೃಷಿ ಮಸೂದೆಗಳನ್ನು ಮಂಡಿಸುವ ಮೂಲಕ ರೈತರ ಅಸ್ತಿತ್ವವನ್ನೇ ನಾಶ ಮಾಡುವ ಹುನ್ನಾರ ನಡೆಸುತ್ತಿದೆ. ರೈತರನ್ನು ದಾರಿ ತಪ್ಪಿಸಿ ಮಂಡಿಸಿರುವ ಮಸೂದೆಗಳು ಕೆಲವೇ ದಿನಗಳಲ್ಲಿ ಅನ್ನದಾತನ ಹೊಟ್ಟೆ ಬಗೆಯುವದರಲ್ಲಿ ಅನುಮಾನವೇ ಇಲ್ಲ ಎಂದು ಕಿಡಿಕಾರಿದ್ದಾರೆ.
‘ಕೃಷಿ ಮಸೂದೆ ಅಂಗೀಕಾರ ರೈತರ ಪಾಲಿಗೆ ಮರಣ ಶಾಸನ..!’; ಸಿದ್ದರಾಮಯ್ಯ

ನಿನ್ನೆಯಷ್ಟೇ ಈ ಕೃಷಿ ಮಸೂದೆಯ ವಿರುದ್ಧ ಕಿಡಿಕಾರಿದ್ದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ರೈತರ ವಿರುದ್ಧದ ಡೆತ್‌ ವಾರೆಂಟ್ ಆಗಿದೆ. ಭೂಮಿಯಿಂದ ಚಿನ್ನವನ್ನು ಬೆಳೆಯುವ ರೈತ ರಕ್ತ ಕಣ್ಣೀರು ಹರಿಸುವಂತೆ ಮೋದಿ ಸರ್ಕಾರ ಮಾಡಿದೆ ಎಂದು ಕಿಡಿಕಾರಿದ್ದರು. ಇನ್ನೊಂದೆಡೆ ಎಲ್ಲಾ ವಿರೋಧಗಳ ಮಧ್ಯೆಯೂ ಕೇಂದ್ರ ಸರ್ಕಾರ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ