ಆ್ಯಪ್ನಗರ

'ಅನರ್ಹ'ರ ಕೈಯಲ್ಲಿ ಕಮಲ, ಎದೆಯಲ್ಲಿ ತಳಮಳ! ಗೆಲುವಿನ ಭರವಸೆ ತುಂಬಿ ಕಟೀಲ್ ಸಾಂತ್ವನ

ಅಂತೂ ಇಂತೂ ಅನರ್ಹ ಶಾಸಕರು ಬಿಜೆಪಿ ಸೇರಿದ್ದಾರೆ. ಕಳೆದ ಮೂರು ತಿಂಗಳಿನಿಂದ ಅನಧಿಕೃತವಾಗಿ ಬಿಜೆಪಿಯವರಾಗಿಯೇ ಇದ್ದ ಅನರ್ಹ ಶಾಸಕರು, ಇದೀಗ ಅಧಿಕೃತವಾಗಿ ಕಮಲ ಹಿಡಿದಿದ್ದಾರೆ. ಗೆಲುವಿನ ಭರವಸೆಯಲ್ಲಿದ್ದರೂ ಭಯ ಇದ್ದೇ ಇದೆ!

Vijaya Karnataka Web 14 Nov 2019, 12:56 pm
ಬೆಂಗಳೂರು: ಕೇಸರಿ ಶಾಲು ಹೊದ್ದು, ಕಮಲ ಬಾವುಟ ಹಿಡಿದ ಅನರ್ಹ ಶಾಸಕರಿಗೆ ಬಿಜೆಪಿ ಆತ್ಮೀಯವಾಗಿ ಬರಮಾಡಿಕೊಂಡಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನದ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅನರ್ಹರನ್ನು ಪಕ್ಷಕ್ಕೆ ಬರಮಾಡಿಕೊಂಡರು.
Vijaya Karnataka Web disqualified jds and congress mlas joined bjp
'ಅನರ್ಹ'ರ ಕೈಯಲ್ಲಿ ಕಮಲ, ಎದೆಯಲ್ಲಿ ತಳಮಳ! ಗೆಲುವಿನ ಭರವಸೆ ತುಂಬಿ ಕಟೀಲ್ ಸಾಂತ್ವನ


ಬಿಜೆಪಿ ಸೇರಿದ ಅನರ್ಹರು: ರೋಷನ್ ಬೇಗ್ ಬಿಟ್ಟು ಮಿಕ್ಕೆವರೆಲ್ಲರನ್ನೂ ಬರಮಾಡಿಕೊಂಡ ಯಡಿಯೂರಪ್ಪ

‘ಭಯ ಬೇಡ, ನಾನಿದ್ದೇನೆ’: ಅನರ್ಹರಿಗೆ ಕಟೀಲ್ ಭರವಸೆ!

17 ಅನರ್ಹ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಅನರ್ಹ ಶಾಸಕರು ಅಧಿಕೃತವಾಗಿ ನಮ್ಮ ಕುಟುಂಬ ಸೇರಿದ್ದಾರೆ ಎಂದು ಹೇಳಿದ್ದಾರೆ. ನಿಮ್ಮನ್ನು ಗೆಲ್ಲಿಸುವ ಭರವಸೆ ನನ್ನದು ಎಂದ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನು ನಿಮಗೆ ಈ ಭರವಸೆ ನೀಡುತ್ತಿದ್ದೇನೆ ಎಂದರು. ಬಿಜೆಪಿ ಕಾರ್ಯಕರ್ತರು ನಿಮ್ಮ ಜೊತೆ ಹೊಂದಿಕೊಳ್ಳುತ್ತಾರೆ, ಯಾವುದೇ ಆತಂಕ ಬೇಡ ಎಂದು ಅನರ್ಹ ಶಾಸಕರಿಗೆ ನಳೀನ್ ಕುಮಾರ್ ಕಟೀಲ್ ಭರವಸೆ ತುಂಬಿದರು.

ಸುಪ್ರೀಂ ಕೋರ್ಟ್‌ನಲ್ಲಿ ಗೆದ್ದ ಅನರ್ಹರಿಗೆ ಜನತಾ ನ್ಯಾಯಾಲಯದಲ್ಲಿ ಅಗ್ನಿಪರೀಕ್ಷೆ

‘ಅಪಾರ್ಥ ಮಾಡ್ಕೋಬೇಡಿ’: ಯಡಿಯೂರಪ್ಪ

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪ, 17 ಅನರ್ಹ ಶಾಸಕರನ್ನು ಭಾವಿ ಶಾಸಕರು, ಭಾವಿ ಸಚಿವರು ಎಂದೇ ಸಂಬೋಧಿಸಿದರು. ಬಳಿಕ ತರಾತುರಿಯಲ್ಲಿ ಅನರ್ಹ ಶಾಸಕರನ್ನು ಪಕ್ಷಕ್ಕೆ ಸ್ವಾಗತಿಸಿ ತುಮಕೂರಿಗೆ ಹೊರಟರು. ತುಮಕೂರಿನಲ್ಲಿ ಸಹಕಾರ ಇಲಾಖೆ ರಾಜ್ಯಮಟ್ಟದ ಕಾರ್ಯಕ್ರಮ ಇರುವ ಕಾರಣ, ಯಡಿಯೂರಪ್ಪ ತುರ್ತಾಗಿ ತುಮಕೂರಿಗೆ ಹೊರಟರು. ತಮ್ಮ ತರಾತುರಿಯನ್ನು ಅಪಾರ್ಥ ಮಾಡಿಕೊಳ್ಳಬೇಡಿ ಎಂದೂ ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಆದ್ರೂ.. ಅನರ್ಹರಿಗೆ ಏನೋ ತಳಮಳ..

ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದರೂ ಕೂಡಾ, ವೇದಿಕೆ ಮೇಲಿದ್ದರೂ ಕೂಡಾ ಅನರ್ಹ ಶಾಸಕರಿಗೆ ಅದೇನೋ ತಳಮಳ ಕಾಡುತ್ತಿತ್ತು. ಅನರ್ಹರು ಟೆನ್ಶನ್‌ನಲ್ಲಿದ್ದಾರೆ ಅನ್ನೋದು ಅವರ ಮುಖಭಾವದಲ್ಲೇ ವ್ಯಕ್ತವಾಗುತ್ತಿತ್ತು. ಕೆಪಿಜೆಪಿಯಿಂದ ಕಾಂಗ್ರೆಸ್‌ಗೆ ಹಾರಿ ಅನರ್ಹರಾದ ಆರ್‌. ಶಂಕರ್ ಅವರಂತೂ ಯಡಿಯೂರಪ್ಪ ಹಿಂದಿಂದೆಯೇ ಓಡಾಡುತ್ತಿದ್ದರು. ಯಡಿಯೂರಪ್ಪ ಮಾತಿಗೆ ಸಿಗದಿದ್ದಾಗ ಆರ್. ಅಶೋಕ್ ಜೊತೆ ಮಾತುಕತೆ ನಡೆಸಿದರು. ಅವಸರ ಅವಸರವಾಗಿ ತುಮಕೂರಿಗೆ ಹೊರಟ ಸಿಎಂ, ಬಳಿಕ ಮಾತಾಡೋದಾಗಿ ಶಂಕರ್‌ಗೆ ಹೇಳಿದ್ರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾರ್ಯಕ್ರಮಕ್ಕೆ ಲಕ್ಷ್ಮಣ ಸವದಿ ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು. ಕಾಗವಾಡ ಕ್ಷೇತ್ರದ ಟಿಕೆಟ್ ಪೈಪೋಟಿ ಎಷ್ಟರ ಮಟ್ಟಿಗೆ ಕಾವೇರುತ್ತೆ ಅನ್ನೋದಕ್ಕೆ ಸವದಿ ಗೈರು ಹಾಜರಿಯೇ ಸಾಕ್ಷಿಯಾಗಿತ್ತು.

ಅನರ್ಹರಿಗೆ ಸಿಕ್ತು ‘ಸುಪ್ರೀಂ’ ರಿಲ್ಯಾಕ್ಸ್ : ಮುಂದಿನ ಕಮಲ ಪಯಣ ಸುಗಮವೇ !

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ