ಆ್ಯಪ್ನಗರ

ಕಬಾಬ್‌ ಅಂಗಡಿಯವನ ಬದುಕು ಕಸಿದ ಗಲಭೆ

ಕಾವಲ್‌ಬೈರಸಂದ್ರದಲ್ಲಿ ಮತಾಂಧರು ನಡೆಸಿದ ಪೈಶಾಚಿಕ ಕೃತ್ಯ ಬಡ ಕುಟುಂಬದ ವ್ಯಕ್ತಿಯೊಬ್ಬರ ಬದುಕನ್ನು ಕಸಿದಿದೆ. ನಿತ್ಯವೂ ಕಬಾಬ್‌ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದ ಕುಟುಂಬವೀಗ ಬೀದಿಗೆ ಬಿದ್ದಿದೆ.

Vijaya Karnataka Web 14 Aug 2020, 8:05 am
ಬೆಂಗಳೂರು: ಕಾವಲ್‌ಬೈರಸಂದ್ರದಲ್ಲಿ ಮತಾಂಧರು ನಡೆಸಿದ ಪೈಶಾಚಿಕ ಕೃತ್ಯ ಬಡ ಕುಟುಂಬದ ವ್ಯಕ್ತಿಯೊಬ್ಬರ ಬದುಕನ್ನು ಕಸಿದಿದೆ. ಆ ಕುಟುಂಬವೀಗ ಬೀದಿಗೆ ಬಿದ್ದು ಉದ್ಯೋಗ ಇಲ್ಲದೆ ಪರದಾಡುವ ಸ್ಥಿತಿಗೆ ಬಂದು ನಿಂತಿದೆ.
Vijaya Karnataka Web kebab


ಶಾಸಕರ ಅಕ್ಕನ ಮನೆಗೆ ಬೆಂಕಿ ಇಟ್ಟ ವೇಳೆ ಸಮೀಪದ ದಿಲೀಪ್‌ ಬಾರ್‌ಗೂ ಪುಂಡರ ಗುಂಪು ನುಗ್ಗಿ ಅಲ್ಲಿದ್ದ ನಗದು, ವಸ್ತುಗಳನ್ನು ಲೂಟಿ ಮಾಡಿದೆ. ಬಾರ್‌ ಮುಂದೆ ನಿತ್ಯವೂ ಕಬಾಬ್‌ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದ ಪ್ರಕಾಶ್‌ ಎಂಬಾತನನ್ನು ಗುಂಪು ಬೆದರಿಕೆ ಹಾಕಿದೆ. ಪುಂಡರ ಸಿಟ್ಟಿಗೆ ತುತ್ತಾಗುವುದು ಬೇಡೆವೆಂದು ಪ್ರಕಾಶ್‌ ಕಬಾಬ್‌ ಮಾಡುವ ಬಾಣಲಿ, ಇತರೆ ಪಾತ್ರೆ ಸಹಿತ ಕಚ್ಚಾವಸ್ತುಗಳನ್ನು ತಕ್ಷಣವೇ ಬಾರ್‌ ಹಿಂಭಾಗದಲ್ಲಿ ಇಟ್ಟು ಮನೆಯಲ್ಲಿ ಸೇರಿಕೊಂಡರು.

ಪ್ರಕಾಶ್‌ ಮನೆಯತ್ತ ತೆರಳುತ್ತಿದ್ದಂತೆ ಪುಂಡರು ಬಾರ್‌ ಒಳಗಿದ್ದ ವಸ್ತುಗಳನ್ನು ದೋಚಿ ಬೆಂಕಿ ಹಚ್ಚಿತು. ಇದರ ಜತೆಗೆ ಕಬಾಬ್‌ ಮಾಡಲು ಇರಿಸಿದ್ದ ಪಾತ್ರೆಗಳನ್ನು ಪುಂಡರು ಹೊರಗೆಳೆದು ಬೆಂಕಿಗೆ ಹಾಕಿದ್ದಾರೆ. ಅನಿಲ ಸಿಲಿಂಡರ್‌ ಹೊತ್ತೊಧಿಯ್ದಿಧಿದ್ದಾಧಿರೆ. ಇದರಿಂದ ಬೇರೆ ಕಡೆಯೂ ಅಂಗಡಿ ಹಾಕಲು ಯಾವ ಸಾಮಗ್ರಿಯೂ ಇಲ್ಲ. ಬದುಕಿಗೆ ಆಧಾರವಾಗಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿ ನಿರುದ್ಯೋಗಿಯಾಗಿರುವೆ ಎಂದು 'ವಿಕ' ಬಳಿ ಅಳಲು ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ