ಆ್ಯಪ್ನಗರ

DK Shivakumar: ರಾಜ್ಯ ಸಂಪುಟ ಖಾತೆ ಮರುಹಂಚಿಕೆ, ಡಿಕೆಶಿಗಿಲ್ಲ ವೈದ್ಯಕೀಯ ಶಿಕ್ಷಣ

ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಹಲವು ಬಾರಿ ಮುಂದೂಡಲ್ಪಟ್ಟಿದ್ದು, ಗುರುವಾರ ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಶುಕ್ರವಾರ ಸಮ್ಮಿಶ್ರ ಸರಕಾರದ ಪಾಲುದಾರ ಕಾಂಗ್ರೆಸ್‌ ತನ್ನ ಪಾಲಿನ ಖಾತೆಗಳನ್ನು ಪುನರ್ ಹಂಚಿಕೆ ಮಾಡಿದೆ.

Vijaya Karnataka Web 28 Dec 2018, 12:45 pm
ಬೆಂಗಳೂರು: ಸಮ್ಮಿಶ್ರ ಸರಕಾರದ ಖಾತೆ ಹಂಚಿಕೆ ಮತ್ತು ಸಂಪುಟ ಪುನಾರಚನೆ ಗೊಂದಲ ಸದ್ಯಕ್ಕೆ ಬಗೆಹರಿದಿದ್ದು, ಸಚಿವ ಡಿ.ಕೆ. ಶಿವಕುಮಾರ್ ವೈದ್ಯಕೀಯ ಶಿಕ್ಷಣ ಖಾತೆ ಕಳೆದುಕೊಂಡಿದ್ದಾರೆ.
Vijaya Karnataka Web vidhan soudha


ಡಿಕೆ ಶಿವಕುಮಾರ್ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯ ಬದಲಾಗಿ ಅವರಿಗೆ ಕನ್ನಡ ಸಂಸ್ಕೃತಿ ಖಾತೆ ನೀಡಲಾಗಿದೆ.

ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಹಲವು ಬಾರಿ ಮುಂದೂಡಲ್ಪಟ್ಟಿದ್ದು, ಗುರುವಾರ ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಶುಕ್ರವಾರ ಸಮ್ಮಿಶ್ರ ಸರಕಾರದ ಪಾಲುದಾರ ಕಾಂಗ್ರೆಸ್‌ ತನ್ನ ಪಾಲಿನ ಖಾತೆಗಳನ್ನು ಪುನರ್ ಹಂಚಿಕೆ ಮಾಡಿದೆ.




ಒಟ್ಟು 22 ಸಚಿವರ ಖಾತೆ ಹಂಚಿಕೆ ಮತ್ತು ಪುನರ್‌ರಚನೆಯನ್ನು ಶುಕ್ರವಾರ ಅಂತಿಮಗೊಳಿಸಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷ ಕಾಂಗ್ರೆಸ್‌ನ ಸಚಿವರ ಖಾತೆ ಮರುಹಂಚಿಕೆ:
ಡಾ. ಜಿ. ಪರಮೇಶ್ವರ್- ಬೆಂಗಳೂರು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರ, ಐಟಿಬಿಟಿ
ಡಿ. ಕೆ. ಶಿವಕುಮಾರ್- ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರಸಾರ
ಆರ್. ವಿ. ದೇಶಪಾಂಡೆ- ಕಂದಾಯ
ಕೆ. ಜೆ. ಜಾರ್ಜ್- ಬೃಹತ್ ಕೈಗಾರಿಕೆ
ಕೃಷ್ಣ ಬೈರೇಗೌಡ- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್
ಯು. ಟಿ. ಖಾದರ್-ನಗರಾಭಿವೃದ್ಧಿ ಖಾತೆ
ಜಯಮಾಲಾ- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಎಂ. ಬಿ. ಪಾಟೀಲ್- ಗೃಹ ಇಲಾಖೆ
ಸತೀಶ್ ಜಾರಕಿಹೊಳಿ- ಅರಣ್ಯ, ಪರಿಸರ, ಜೀವಿಶಾಸ್ತ್ರ
ಸಿ. ಎಸ್. ಶಿವಳ್ಳಿ- ಪೌರಾಡಳಿತ ಖಾತೆ
ಎಂಟಿಬಿ ನಾಗರಾಜ್- ವಸತಿ ಖಾತೆ
ಇ. ತುಕಾರಾಂ- ವೈದ್ಯಕೀಯ ಶಿಕ್ಷಣ
ಎನ್. ಎಸ್. ಶಿವಶಂಕರ್ ರೆಡ್ಡಿ-ಕೃಷಿ ಇಲಾಖೆ
ಪ್ರಿಯಾಂಕ್ ಖರ್ಗೆ- ಸಮಾಜ ಕಲ್ಯಾಣ
ಜಮೀರ್ ಅಹಮದ್ ಖಾನ್- ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್
ಶಿವಾನಂದ ಪಾಟೀಲ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ವೆಂಕಟರಮಣಪ್ಪ- ಕಾರ್ಮಿಕ ಖಾತೆ
ರಾಜಶೇಖರ್ ಬಿ. ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ
ಸಿ. ಪುಟ್ಟರಂಗಶೆಟ್ಟಿ– ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ
ಪಿ. ಟಿ. ಪರಮೇಶ್ವರ್ ನಾಯ್ಕ್- ಮುಜರಾಯಿ, ಕೌಶಾಲ್ಯಾಭಿವೃದ್ಧಿ
ರಹೀಂ ಖಾನ್- ಯುವ ಸಬಲೀಕರಣ, ಕ್ರೀಡೆ
ಆರ್. ಬಿ. ತಿಮ್ಮಾಪುರ- ಬಂದರು, ಒಳನಾಡು ಸಾರಿಗೆ.

ಖಾತೆಗಳ ಹಂಚಿಕೆಯ ಪಟ್ಟಿ ನನಗೆ ನೀಡಿದ್ದಾರೆ. ಅದನ್ನು ರಾಜ್ಯಪಾಲರಿಗೆ ಕಳುಹಿಸುತ್ತೇನೆ. ಖಾತೆ ಹಂಚಿಕೆ, ನಿಗಮ ಮಂಡಳಿ ನೇಮಕದ ಬಗ್ಗೆ ಯಾವುದೇ ಅಸಮದಾನವಿಲ್ಲ. ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೇ ಅಸಮಾಧಾನವಿಲ್ಲದೆ ಎಲ್ಲ ತೀರ್ಮಾನ ಸುಗಮವಾಗಿ ಆಗುತ್ತೆ.
ಕುಮಾರಸ್ವಾಮಿ, ಮುಖ್ಯಮಂತ್ರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ