ಆ್ಯಪ್ನಗರ

ಏಸು ಪ್ರತಿಮೆ; ಇದು ಭಕ್ತರು, ಭಗವಂತನಿಗೆ ಬಿಟ್ಟ ವಿಚಾರ ಎಂದ ಡಿಕೆಶಿ

ಪ್ರತಿಮೆ ನಿರ್ಮಾಣ ಒಳ್ಳೆಯ ಕೆಲಸ. ಹೀಗಾಗಿ ನನ್ನ ಕೈಲಾದ ಸಹಾಯ ಮಾಡಿ, ಮಾರ್ಗದರ್ಶನ ನೀಡಿದ್ದೇನೆ. ನನ್ನ ಕ್ಷೇತ್ರದ ಜನರಲ್ಲಿ ಕೆಲವರು ದೇವಸ್ಥಾನ ಕಟ್ಟಬೇಕು ಎಂದು ಸಹಾಯ ಕೇಳಿದ್ದಾರೆ.

Vijaya Karnataka Web 2 Jan 2020, 9:24 pm
ಬೆಂಗಳೂರು: ಕನಕಪುರದ ಕಪಾಲ ಬೆಟ್ಟದಲ್ಲಿಏಸು ಪ್ರತಿಮೆ ಸ್ಥಾಪನೆ ವಿವಾದ ತೀವ್ರಗೊಳ್ಳುತ್ತಿದ್ದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ವೈರಾಗ್ಯಭಾವ ಪ್ರದರ್ಶಿಸಿದ್ದು, ಅದು ಭಕ್ತನಿಗೂ ಭಗವಂತನಿಗೂ ಬಿಟ್ಟ ವಿಚಾರ ಎಂದು ಎಂದಿದ್ದಾರೆ.
Vijaya Karnataka Web ಏಸು ಪ್ರತಿಮೆ
ಏಸು ಪ್ರತಿಮೆ


ತಮ್ಮ ನಿವಾಸದಲ್ಲಿಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘‘2 ವರ್ಷಗಳ ಹಿಂದೆಯೇ ಏಸು ಪ್ರತಿಮೆ ನಿರ್ಮಾಣ ಪ್ರಯತ್ನ ನಡೆದಾಗ ನಾನೇ ಅವರನ್ನು ತಡೆದು ಕಾನೂನುಬದ್ಧವಾಗಿ ಮಾಡಲು ಮಾರ್ಗದರ್ಶನ ಮಾಡಿದ್ದೆ. ಬಳಿಕ, ಕೈಲಾದ ಸಹಾಯ ಮಾಡಿದೆ. ಈಗ ಬಿಜೆಪಿ ಸರಕಾರದವರು ಏನು ಬೇಕಾದರೂ ಮಾಡಿಕೊಳ್ಳಲಿ. ಭಕ್ತ ಮತ್ತು ಭಗವಂತನಿಗೆ ಬಿಟ್ಟ ವಿಚಾರವದು’’ ಎಂದು ಪ್ರತಿಕ್ರಿಯಿಸಿದರು.

‘‘ರಾಜ್ಯದಲ್ಲಿಏನೇನಾಗುತ್ತಿದೆ ಎಂಬುದನ್ನು ರಾಜ್ಯದ ಜನರು ಮಾತ್ರ ನೋಡುತ್ತಿಲ್ಲ. ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂಜನ ಗಮನಿಸುತ್ತಿದ್ದಾರೆ. ಬಸವ ತತ್ವವನ್ನು ಜಗತ್ತಿಗೇ ಸಾರಬೇಕು ಎನ್ನುವ ನಾವೇ, ಈ ಮಾತನ್ನು ಪಾಲಿಸದಿದ್ದರೆ ಹೇಗೆ? ಅಧಿಕಾರ ಸಿಕ್ಕಾಗ ಉತ್ತಮ ಕೆಲಸ ಮಾಡುವ ಬದಲು ಕೆಟ್ಟ ಉದ್ದೇಶಕ್ಕೆ ಬಳಸಿದರೆ ಹೇಗೆ’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘‘ಅಶೋಕ ಚಕ್ರವರ್ತಿ ಸಾಹೇಬರು, ಅಶ್ವತ್ಥ ನಾರಾಯಣ…, ಈಶ್ವರಪ್ಪ, ರೇಣುಕಾಚಾರ್ಯ ಅವರು ತಮಗೆ ತೋಚಿದಂತೆ ಮಾತನಾಡುತ್ತಿದ್ದಾರೆ. ಅವರು ಏನಾದರೂ ಹೇಳಿಕೊಳ್ಳಲಿ. ಅವರಿಗೆ ಅಧಿಕಾರ ಇದೆ. ಒಳ್ಳೆಯದು ಮತ್ತು ಕೆಟ್ಟದ್ದು ಎರಡಕ್ಕೂ ಅಧಿಕಾರವನ್ನು ಬಳಸಿಕೊಳ್ಳಬಹುದು. ಕಂದಾಯ ಸಚಿವ ಅಶೋಕಣ್ಣಾ ಅವರು ತನಿಖೆ ನಡೆಸಿ, ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಅಲ್ಲಿನ ತಹಶೀಲ್ದಾರ್‌ ವರ್ಗಾವಣೆ ಮಾಡಿದ್ದಾರೆ. ಬಿಜೆಪಿಯವರು ಏನೆಲ್ಲಾ ಮಾಡುತ್ತಾರೆ ಮಾಡಲಿ. ನಾನಂತೂ ತಲೆಕೆಡಿಸಿಕೊಳ್ಳುವುದಿಲ್ಲ’’ ಎಂದರು.

‘‘ಏಸು ಪ್ರತಿಮೆ ನಿರ್ಮಾಣವಾಗುತ್ತಿರುವ ಜಾಗಕ್ಕೆ ಅನೇಕ ವರ್ಷಗಳ ಚರಿತ್ರೆ ಇದೆ. ಅಲ್ಲಿ ಏಸು ವಿಗ್ರಹ, ಶಿಲುಬೆ ಎಲ್ಲವೂ ಮುಂಚಿನಿಂದಲೂ ಇವೆ ಮತ್ತು ಜನ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಕೆಲವರು ದೇವಾಲಯ ಕಟ್ಟಲು, ಮತ್ತೆ ಕೆಲವರು ಚರ್ಚ್‌ ಕಟ್ಟಬೇಕು ಎಂದು ನೆರವು ಕೇಳಿ ಬಂದಾಗ ಸಹಾಯ ಮಾಡಿಕೊಂಡೇ ಬಂದಿದ್ದೇನೆ. ಜಾತಿ, ಧರ್ಮ ನೋಡಿ ಈ ಕೆಲಸ ಮಾಡಿಲ್ಲ’’ ಎಂದು ಹೇಳಿದರು.

ನೊಟೀಸ್‌ಗಳಿಗೆ ಉತ್ತರ ಕೊಟ್ಟು ಸಾಕಾಗಿದೆ

ಕೆಪಿಸಿಸಿ ಅಧ್ಯಕ್ಷರಾಗುವುದು ಯಾವಾಗ? ಎಂಬ ಪ್ರಶ್ನೆಗೆ ಬೇಸರದಿಂದಲೇ ಡಿಕೆಶಿ ಪ್ರತಿಕ್ರಿಯಿಸಿದರು. ‘‘ಅಧಿಕಾರ ಮತ್ತೊಂದು ವಿಚಾರದ ಬಗ್ಗೆ ಕೇಳಬೇಡಿ. ಬೆಳಗ್ಗೆಯಿಂದ ಸಂಜೆ ವರೆಗೆ ಬರುವ ಐಟಿ ನೊಟೀಸ್‌ಗಳಿಗೇ ಉತ್ತರ ಕೊಟ್ಟು ಸಾಕಾಗಿದೆ’’ ಎಂದರು.

‘‘ನನಗೆ ನಾಯಕತ್ವದ ಗಿಫ್ಟ್‌ ಮತ್ತೊಂದರ ಬಗ್ಗೆ ಆತುರ ಇಲ್ಲ. ನೀವೂ ತಲೆಕೆಡಿಸಬೇಡಿ. ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಹೈಕಮಾಂಡ್‌ ಬಳಿ ಏನನ್ನೂ ಕೇಳಲು ಹೋಗಿಲ್ಲ’’ ಎಂದು ಪತ್ರಕರ್ತರತ್ತ ಕೈಮುಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ