ಆ್ಯಪ್ನಗರ

ನಿಮ್ಮ ಮತ ಮಾರಿಕೊಂಡವರನ್ನು ಮತ್ತೆ ಬೆಂಬಲಿಸಬೇಡಿ: ಡಿಕೆ ಶಿವಕುಮಾರ್

ರಾಜ್ಯದಲ್ಲಿ ಉಪಚುನಾವಣಾ ಕಣ ರಂಗೇರುತ್ತಿದ್ದು ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಭರದ ಪ್ರಚಾರ ನಡೆಸುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಡಿಕೆ ಪ್ರಚಾರ ನಡೆಸಿದ್ದು ಅನರ್ಹ ಶಾಸಕರ ವಿರುದ್ಧ ಹರಿಹಾಯ್ದರು.

Vijaya Karnataka Web 29 Nov 2019, 8:26 pm
ಬೆಂಗಳೂರು: ಇವತ್ತಿನ ಚುನಾವಣಾ ಪ್ರಚಾರಕ್ಕೆ ಆಗಮಿಸಲು ರಾಜಕಾರಣಿಯಾಗಿ ನಮಗೆಲ್ಲ ನಾಚಿಕೆಯಾಗುತ್ತದೆ. ಇವತ್ತು ಯಾಕೆ ಈ ಚುನಾವಣೆ ಬಂದಿದೆ? ಯಾಕೆ ಈ ಮತದಾರರಿಗೆ ಈ ಸಂಕಷ್ಟ? ಇದನ್ನೆಲ್ಲಾ ನೀವು ಗಮನಿಸಬೇಕು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಅನರ್ಹ ಶಾಸಕರ ಮೇಲೆ ಮತ್ತೆ ಚಾಟಿ ಬೀಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಅವರು ಅನರ್ಹ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
Vijaya Karnataka Web dk shivakumar slams at disqualified mlas
ನಿಮ್ಮ ಮತ ಮಾರಿಕೊಂಡವರನ್ನು ಮತ್ತೆ ಬೆಂಬಲಿಸಬೇಡಿ: ಡಿಕೆ ಶಿವಕುಮಾರ್


ಈ ಚುನಾವಣೆಯನ್ನು ನಾವ್ಯಾರು ಬಯಸಿರಲಿಲ್ಲ. ನಾವು ದಳದವರು ಸೇರಿ ಆಡಳಿತ ಮಾಡುತ್ತಿದ್ದೆವು. ನಮ್ಮ ಪಕ್ಷದನಾಯಕರು ದಳದೊಂದಿಗೆ ಸರ್ಕಾರ ಮಾಡಲು ಸೂಚನೆ ನೀಡಿದರು. ನಾವು 124 ಜನ ಶಾಸಕರು ರಾಜ್ಯಪಾಲರಿಗೆ ಅಫಿಡವಿಟ್ ಕೊಟ್ಟು ಕುಮಾರಸ್ವಾಮಿ ನೇತೃತ್ವದಲ್ಲಿ ಸರಕಾರ ಮಾಡಿದೆವು. ಅಂದಿನಿಂದ ಇವತ್ತಿನವರಗೂ 7 ಬಾರಿ ಸರಕಾರ ಉರುಳಿಸಲು ಪ್ರಯತ್ನ ಮಾಡಿದರು.

ನಳಿನ್‌ಗೆ ಸಿದ್ದು ‘ಪಂಪ್‌ವೆಲ್’ ಟ್ವೀಟ್ ಗುದ್ದು!

ನೀವು ಜನರ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಬಂದಿದ್ದರೆ ನಾವು ಕೇಳುತ್ತಿರಲಿಲ್ಲ. ಆದರೆ ನೀವು ಅಧಿಕಾರಕ್ಕೆ ಬಂದ ಮಾರ್ಗ ಇದೆಯಲ್ಲಾ ಅದು ದೇಶದ ಪ್ರಜಾಪ್ರಭುತ್ವದಲ್ಲಿ ಇರಲಿಲ್ಲ. ಯಡಿಯೂರಪ್ಪ ಅವರೇ ಈ ಬಗ್ಗೆ ಭಾಷಣ ಮಾಡಿದ್ದಾರೆ. ನಮಗೂ ಇದಕ್ಕೂ ಸಂಬಂಧ ಇಲ್ಲ. ಅತೃಪ್ತರು ಬೇಸರವಾಗಿ ಪಕ್ಷ ಬಿಡುತ್ತಿದ್ದಾರೆ ಅಂತಿದ್ದೋರು, ಈಗ ಹೇಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂದು ಬಿಡಿಬಿಡಿಯಾಗಿ ವಿವರಿಸುತ್ತಿದ್ದಾರೆ. ಈ ತ್ಯಾಗಿಗಳಿಂದ ನಮ್ಮ ಸರ್ಕಾರ ಇದೆ ಅಂತಾ ಅವರ ಬಾಯಿಂದಲೇ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕ್ಷೇತ್ರ ಪರಿಚಯ: ಯಶವಂತಪುರದಲ್ಲಿ 'ಕೈ' ಲೆಕ್ಕಕ್ಕಿಲ್ಲ! ಸೋಮಶೇಖರ್ v/s ಜವರಾಯಿ ಗೌಡ ಪೈಕಿ ಗೆಲ್ಲೋರು ಯಾರು

ಈ ಕ್ಷೇತ್ರದ ಮಾಜಿ ಶಾಸಕರು ಮಾಜಿಯಾಗೇ ಉಳಿಯಲಿದ್ದಾರೆ. ಅವರು ಕುಮಾರಸ್ವಾಮಿ, ದೇವೇಗೌಡರ ಆಶೀರ್ವಾದದಿಂದ ಗೆದ್ದಿರೋರು. ನೀವು ಅವರಿಗೇ ದ್ರೋಹ ಮಾಡಿದ್ದೀರಿ. ನಿಮ್ಮನ್ನು ಜನ ಕ್ಷಮಿಸುವುದಿಲ್ಲ. ತಾಯಿಯಂತೆ ಸಾಕಿದ ಪಕ್ಷಕ್ಕೆ ನೀವು ಅನ್ಯಾಯ ಮಾಡಿದ್ದೀರಿ, ನೀವು ರಾಜೀನಾಮೆ ನೀಡುವ ಮುನ್ನ ಮತದಾರರನ್ನು ಕೇಳಲಿಲ್ಲ, ಆದರೆ ನೀವು ಚುನಾವಣೆಯಲ್ಲಿ ನಿಂತಾಗ ನಿಮ್ಮ ಹಿಂದೆ ಪಕ್ಷದ ಬಾವುಟ ಹಿಡಿದ ಕಾರ್ಯಕರ್ತರನ್ನು ಕೇಳಿದ್ದೀರಾ? ನಾನು ಇವತ್ತು ವ್ಯಾಪಾರಕ್ಕಿದ್ದೇನೆ ಖರೀದಿ ಮಾಡಿ ಅಂತಾ ಹೇಳಿದ್ರಾ? ಎಂದು ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ವಿರುದ್ಧ ಹರಿಹಾಯ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ