ಆ್ಯಪ್ನಗರ

ಇಂದು ಡಿಕೆಶಿ ಜಾಮೀನು ಅರ್ಜಿ ವಿಚಾರಣೆ

ಅಕ್ರಮ ಹಣ ವರ್ಗಾವಣೆ ಆರೋಪದಡಿ ತಿಹಾರ್‌ ಜೈಲುಪಾಲಾಗಿರುವ ಡಿಕೆ...

Vijaya Karnataka 21 Sep 2019, 5:00 am
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಆರೋಪದಡಿ ತಿಹಾರ್‌ ಜೈಲುಪಾಲಾಗಿರುವ ಡಿ.ಕೆ. ಶಿವಕುಮಾರ್‌ ಜಾಮೀನು ಅರ್ಜಿ ವಿಚಾರಣೆಯನ್ನು ದಿಲ್ಲಿಯ ರೋಸ್‌ ಅವೆನ್ಯೂ ವಿಶೇಷ ನ್ಯಾಯಾಲಯ ಶನಿವಾರ ನಡೆಸಲಿದೆ.
Vijaya Karnataka Web dks income


ಇ.ಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌, ಡಿಕೆಶಿ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ- ಪ್ರತಿವಾದ ಮುಂದುವರಿಸಲಿದ್ದಾರೆ.

ಗುರುವಾರ ಎರಡು ಗಂಟೆಗಳ ಕಾಲ ಕೆ.ಎಂ. ನಟರಾಜ್‌ ವಾದ ಮಂಡಿಸಿ, ''ಈ ಪ್ರಕರಣ ಘೋಷಿತ ಅಪರಾಧವಾಗಿದ್ದು ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು,'' ಎಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತ್ಯುತ್ತರಿಸಲು 2ಗಂಟೆಗೂ ಹೆಚ್ಚು ಕಾಲಾವಕಾಶ ಬೇಕೆಂದು ಸಿಂಘ್ವಿ ಮನವಿ ಮಾಡಿದ ಹಿನ್ನೆಲೆಯಲ್ಲಿವಿಚಾರಣೆಯು ಶನಿವಾರಕ್ಕೆ ಮುಂದೂಡಲಾಗಿತ್ತು.

ಡಿಕೆಶಿ ಭೇಟಿಯಾದ ಡಿಕೆಸು

ಕಳೆದ ಎರಡು ದಿನಗಳಿಂದ ತಿಹಾರ್‌ ಜೈಲಿನ ಬ್ಯಾರಕ್‌ ನಂ.7ರಲ್ಲಿರುವ ಮಾಜಿ ಸಚಿವ ಡಿಕೆಶಿ ಅವರನ್ನು ಸಹೋದರ ಡಿ.ಕೆ ಸುರೇಶ್‌ ಶುಕ್ರವಾರ ಭೇಟಿಯಾಗಿ ಚರ್ಚಿಸಿದರು. ಗುರುವಾರ ಕೋರ್ಟ್‌ ಹಾಲ್‌ನಲ್ಲಿನಡೆದ ವಾದ, ಪ್ರತಿವಾದಗಳ ವಿಷಯವನ್ನು ಡಿಕೆಸಿ ಜತೆ ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ