ಆ್ಯಪ್ನಗರ

ಡಿಕೆ ಶಿವಕುಮಾರ್‌ ಬಳಿ 800 ಕೋಟಿ ರೂ.ಗಿಂತಲೂ ಹೆಚ್ಚು ಆಸ್ತಿಯಿರಬಹುದು!

ಶಾಸಕ ಡಿಕೆ ಶಿವಕುಮಾರ್ ಅತ್ಯಂತ ಪವರ್‌ಫುಲ್‌ ವ್ಯಕ್ತಿಯಾಗಿದ್ದು, ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇದೆ. ಹಾಗಾಗಿ ಅವರಿಗೆ ಜಾಮೀನು ನೀಡಬಾರದು ಎಂದು ಇಡಿ ಪರ ವಕೀಲ ವಾದಿಸಿದ್ದಾರೆ.

Vijaya Karnataka Web 21 Sep 2019, 1:26 pm
ಹೊಸದಿಲ್ಲಿ: ಡಿಕೆ ಶಿವಕುಮಾರ್ ತಪ್ಪಿತಸ್ಥ ಎನ್ನಲು ಪ್ರಬಲ ಸಾಕ್ಷ್ಯಗಳಿವೆ, ಅವರನ್ನು ಜಾಮೀನನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ ಎಂದು ಜಾರಿ ನಿರ್ದೇಶನಾಲಯದ ಪರ ವಾದಿಸುತ್ತಿರುವ ಎಎಸ್‌ಜಿ ನಟರಾಜ್‌ ವಾದಿಸಿದ್ದಾರೆ.
Vijaya Karnataka Web DK Shivkumar


ದೆಹಲಿಯ ಅವೆನ್ಯೂ ರಸ್ತೆಯಲ್ಲಿರುವ ಇ.ಡಿ. ವಿಶೇಷ ನ್ಯಾಯಾಲಯದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಶನಿವಾರ ಕೋರ್ಟ್‌ನಲ್ಲಿ ಇಡಿ ಪರ ವಾದ ಮಂಡಿಸಿದ ಎಎಸ್‌ಜಿ ನಟರಾಜ್, ಡಿ ಕೆ ಶಿವಕುಮಾರ್ ಅವರಿಗೆ ಸಾಕ್ಷ್ಯ ತಿರುಚುವ ಕೆಟ್ಟ ಪ್ರವೃತ್ತಿ ಇದೆ. ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಚಟ ಇದೆ. ಹೀಗಾಗಿ ಅವರಿಗೆ ಜಾಮೀನು ನೀಡುವಾಗ ಪರಿಶೀಲಿಸಿ ಎಂದು ವಾದ ಮಂಡಿಸಿದ್ದಾರೆ.

ಡಿಕೆಶಿಯನ್ನು ರಾಜಕೀಯವಾಗಿ ಮುಗಿಸಲು ಪಿತೂರಿ: ಕೊತ್ತೂರು ಮಂಜುನಾಥ್‌

ಅವರ ಬಳಿ 800 ಕೋಟಿ ರೂಗಿಂತ ಹೆಚ್ಚು ಆಸ್ತಿ ಇರಬಹುದು, ಪವರ್‌ಫುಲ್ ಮತ್ತು ಪ್ರಬಲ ವ್ಯಕ್ತಿಯಾಗಿರುವ ಅವರು ಸಾಕ್ಷ್ಯ ನಾಶ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಿದ ಉದಾಹರಣೆ ಇದೆ. ಇಂತಹ ವ್ಯಕ್ತಿಗೆ ಜಾಮೀನು ಕೊಡುವುದು ಸರಿಯಲ್ಲ ಎಂದು ಅವರು ವಾದಿಸಿದ್ದಾರೆ.

ಇಡಿ ವಶದಲ್ಲಿರುವಾಗಲೇ ಸೂಕ್ತ ಉತ್ತರ ನೀಡಿಲ್ಲ. ಇಂಡಿ ಬಂಧನವೇ ಅವರಿಗೆ ಯಾವುದೇ ಪರಿಣಾಮ ನೀಡಿಲ್ಲ ಅಂದ ಮೇಲೆ ಜಾಮೀನು ಸಿಕ್ಕ ಮೇಲೆ ಅವರಿಂದ ತನಿಖೆಗೆ ಎಷ್ಟು ರೀತಿಯಲ್ಲಿ ಸಹಕಾರ ಸೀಗಬಹುದು ಎಂದು ವಾದಿಸಿರುವ ಅವರು ಡಿಕೆಶಿ ಅವರಿಗೆ ಜಾಮೀನು ನೀಡಲೇ ಬಾರದು ಎಂದು ವಾದಿಸಿದ್ದಾರೆ.

ಐಟಿ ಪ್ರಮುಖ ಐಟಿ ಕಲೆ ಹಾಕಿರುವ ಬಿಳಿ ಹಾಳೆಯ ಮೇಲಿರುವ ಅಂಶಗಳನ್ನು ನೀವು ಗಮನಿಸಬೇಕು, ಮುಂದಿನ ವಿಚಾರಣೆಗೆ ಇದು ಸಹಾಯಕವಾಗಬಹುದು, ಎಂದವರು ಮನವಿ ಮಾಡಿದ್ದಾರೆ.

ಕನಕಪುರ ಬಂಡೆ, ಕನಕಪುರ ಕೆಂಪೇಗೌಡ ಟೈಟಲ್‍ಗಳಿಗೆ ಭಾರಿ ಡಿಮ್ಯಾಂಡ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ