ಆ್ಯಪ್ನಗರ

ಸದ್ಯಕ್ಕೆ ಶಾಲೆ ಆರಂಭ ಬೇಡವೆಂದು ಸಂಪುಟ ಸಭೆಯಲ್ಲಿ ಅಭಿಪ್ರಾಯ

ಪ್ರಾಸಂಗಿಕವಾಗಿ ಈ ವಿಚಾರ ಸಂಪುಟ ಸಭೆಯಲ್ಲಿಪ್ರಸ್ತಾಪವಾಯಿತು. ಎಚ್ಚರಿಕೆಯಿಂದ ಕೋವಿಡ್‌ ನಿರ್ವಹಣೆ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಶಾಲೆ ಆರಂಭಿಸಲು ಆತುರ ಪಡಬೇಕಾಗಿಲ್ಲ. ಇನ್ನೂ ಸ್ವಲ್ಪ ದಿನ ಕಾಯ್ದು ತೀರ್ಮಾನ ಕೈಗೊಳ್ಳುವುದು ಸೂಕ್ತ

Vijaya Karnataka Web 12 Nov 2020, 9:53 pm
ಬೆಂಗಳೂರು: ಕೋವಿಡ್‌ ಭೀತಿ ಇನ್ನೂ ಇರುವುದರಿಂದ ಸದ್ಯಕ್ಕೆ ಶಾಲೆ ಪ್ರಾರಂಭಿಸುವುದು ಬೇಡ ಎಂಬ ಅಭಿಪ್ರಾಯ ಸಂಪುಟ ಸಭೆಯಲ್ಲಿವ್ಯ ಕ್ತವಾಗಿದೆ.
Vijaya Karnataka Web ವಿಧಾನಸೌಧ
ವಿಧಾನಸೌಧ


ಪ್ರಾಸಂಗಿಕವಾಗಿ ಈ ವಿಚಾರ ಸಂಪುಟ ಸಭೆಯಲ್ಲಿಪ್ರಸ್ತಾಪವಾಯಿತು. ಎಚ್ಚರಿಕೆಯಿಂದ ಕೋವಿಡ್‌ ನಿರ್ವಹಣೆ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಶಾಲೆ ಆರಂಭಿಸಲು ಆತುರ ಪಡಬೇಕಾಗಿಲ್ಲ. ಇನ್ನೂ ಸ್ವಲ್ಪ ದಿನ ಕಾಯ್ದು ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂಬ ಸಲಹೆಯನ್ನು ಹಿರಿಯ ಸಚಿವರು ನೀಡಿದರು ಎಂದು ತಿಳಿದು ಬಂದಿದೆ.

ಸಿಎಂಗೆ ಅಭಿನಂದನೆ

ಉಪ ಚುನಾವಣೆ ಮತ್ತು ಎಂಎಲ್ಸಿ ಚುನಾವಣೆ ಕ್ಲೀನ್‌ ಸ್ವೀಪ್‌ ಹಿನ್ನೆಲೆಯಲ್ಲಿ ಸಂಪುಟದ ಸದಸ್ಯರು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಂಪುಟ ಸಭೆಯಲ್ಲಿ ಸಚಿವರು ಸಿಎಂರನ್ನು ಅಭಿನಂದಿಸಿದರು. ಇದು ಸಂಘಟಿತ ಹೋರಾಟದ ಫಲ. ಎಲ್ಲರಿಗೂ ಕೃತಜ್ಞತೆ ಎಂದು ಸಿಎಂ ಹೇಳಿದರು. ಒಗ್ಗಟ್ಟಿನಿಂದ ಕೆಲಸ ಮಾಡುತ್ತಿರುವುದೇ ಬಿಜೆಪಿ ಶಕ್ತಿಯಾಗಿದೆ. ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಉಪ ಚುನಾವಣೆ ಶೀಘ್ರದಲ್ಲೇ ಘೋಷಣೆಯಾಗಲಿದೆ. ಅಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಶ್ರಮ ಹಾಕುವಂತೆ ಸಿಎಂ ಸೂಚಿಸಿದರು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ