ಆ್ಯಪ್ನಗರ

ವೈದ್ಯರು ಸಮಾಜಮುಖಿಯಾಗಿ ಕೆಲಸ ಮಾಡಬೇಕು : ಹಿರೇಮಗಳೂರು ಕಣ್ಣನ್‌ ಸಲಹೆ

ವಿಪ್ರ ವೈದ್ಯರು ಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಇಡೀ ದೇಶದ ಒಳಿತಿಗೆ ಶ್ರಮಿಸಬೇಕು ಎಂದು ಕನ್ನಡ ಪೂಜಾರಿ, ಚಿಂತಕ ಹಿರೇಮಗಳೂರು ಕಣ್ಣನ್‌ ಹೇಳಿದರು.

Vijaya Karnataka 29 Apr 2019, 5:00 am
ಬೆಂಗಳೂರು: ವಿಪ್ರ ವೈದ್ಯರು ಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಇಡೀ ದೇಶದ ಒಳಿತಿಗೆ ಶ್ರಮಿಸಬೇಕು ಎಂದು ಕನ್ನಡ ಪೂಜಾರಿ, ಚಿಂತಕ ಹಿರೇಮಗಳೂರು ಕಣ್ಣನ್‌ ಹೇಳಿದರು.
Vijaya Karnataka Web doctors will do pro society work
ವೈದ್ಯರು ಸಮಾಜಮುಖಿಯಾಗಿ ಕೆಲಸ ಮಾಡಬೇಕು : ಹಿರೇಮಗಳೂರು ಕಣ್ಣನ್‌ ಸಲಹೆ


ವಿಪ್ರ ವೈದ್ಯ ವೇದಿಕೆ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಂಟಿಯಾಗಿ ಆಯೋಜಿಸಿದ್ದ ವೈದ್ಯ ಸಮ್ಮೇಳನದಲ್ಲಿ 'ಜೀವನದಲ್ಲಿನ ಮಾನವೀಯ ಮೌಲ'ಗಳ ಕುರಿತು ಮಾತನಾಡಿ ''ಬ್ರಾಹ್ಮಣರೆಲ್ಲಾ ಒಗ್ಗೂಡಿದರೆ ಇಡೀ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಹಾಗೆಯೇ, ವಿಪ್ರ ವೈದ್ಯರೆಲ್ಲಾ ಸಂಘಟಿತರಾಗಿ ಸಮಾಜದ ಆರೋಗ್ಯ ರಕ್ಷಣೆಗೆ ಟೊಂಕಕಟ್ಟಿ ನಿಲ್ಲಬೇಕು''ಎಂದರು.

''ನಗರದ ಬದುಕು ಹೆಚ್ಚು ಹೆಚ್ಚು ಕಾಯಿಲೆಗಳನ್ನು ತಂದೊಡ್ಡುತ್ತಿದೆ. ಹಾಗಾಗಿ, ಹೆಚ್ಚಿನ ಜನರು ಆಸ್ಪತ್ರೆಗಳಿಗೆ ಭೇಟಿ ನೀಡುವ ಸ್ಥಿತಿ ಎದುರಾಗಿದ್ದು, ಆರೋಗ್ಯ ಸೇವೆ ದುಬಾರಿಯಾಗುತ್ತಿದೆ. ಇಂತಹ ಹೊತ್ತಿನಲ್ಲಿ ವೈದ್ಯರು ಹಣದ ಬಗ್ಗೆ ತಲೆಕೆಡಿಸಿಕೊಳ್ಳದೆ ಮಾನವೀಯ ನೆಲೆಯಲ್ಲಿ ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕು'' ಎಂದು ಸಲಹೆ ಮಾಡಿದರು.

''ಜಿಲ್ಲೆಗಳಲ್ಲಿರುವ ವಿಪ್ರ ವೈದ್ಯರು ವಾರಾಂತ್ಯದಲ್ಲಿ ವಿಪ್ರ ಸಮುದಾಯದ 10 ಬಡ ಕುಟುಂಬಗಳ ಮನೆಗೆ ಭೇಟಿ ನೀಡಿ ಆರೋಗ್ಯ, ಸೌಖ್ಯ ವಿಚಾರಿಸಿದರೆ, ಆ ಹತ್ತು ಕುಟುಂಬಗಳು ಸಮಾಜದ 100 ಕುಟುಂಬಗಳ ಆರೋಗ್ಯ ರಕ್ಷಣೆಗೆ ಮುಂದಾಗುತ್ತವೆ'' ಎಂದು ಹೇಳಿದರು.

ವಿಪ್ರ ವೈದ್ಯ ವೇದಿಕೆಯ ಅಧ್ಯಕ್ಷ ಡಾ.ಆರ್‌.ಮುರಳೀಧರ್‌ ''ವಿಪ್ರ ಸಮಯದಾಯದ ವೈದ್ಯರನ್ನೆಲ್ಲಾ ಒಂದೆಡೆ ಸೇರಿಸಿ ಆ ಮೂಲಕ ಸಮುದಾಯ ಮತ್ತು ಸಮಾಜದ ಅಭಿವೃದ್ಧಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ವೇದಿಕೆ ಸಂಘಟಿಸಲಾಗಿದೆ,''ಎಂದರು.

ಚೆನ್ನೈನ ಖ್ಯಾತ ನರರೋಗ ತಜ್ಞ ಪ್ರೊ. ಎ.ವಿ.ಶ್ರೀನಿವಾಸನ್‌ ಬುದ್ಧಿ, 'ಭಕ್ತಿ ಮತ್ತು ಪ್ರಜ್ಞೆ' ಕುರಿತು ಉಪನ್ಯಾಸ ನೀಡಿದರು. ''ಭಾರತ ಎಂಬ ಪದದಲ್ಲಿಯೇ ಅಗಾಧ ಶಕ್ತಿ ಅಡಗಿದೆ. ಜ್ಞಾನ ,ಭಕ್ತಿ, ಯೋಗ ಮತ್ತು ಪ್ರಜ್ಞೆಯ ಮೂಲಕ ನಾವು ಮನಸ್ಸಿನ ಚಿತ್ತ ಕಾಯ್ದುಕೊಂಡರೆ ದೇಹವೂ ಆರೋಗ್ಯದಿಂದ ಇರುತ್ತದೆ'' ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೆಂಕಟನಾರಾಯಣ, ವಿಪ್ರ ವೈದ್ಯ ವೇದಿಕೆಯ ಪ್ರಧಾನ ಕಾರ‍್ಯದರ್ಶಿ ಡಾ.ಶರಣ್‌ ಶ್ರೀನಿವಾಸನ್‌, ಉಪಾಧ್ಯಕ್ಷ ಡಾ.ಭಾನು ಪ್ರಕಾಶ್‌, ಎಕೆಬಿಎಂಎಸ್‌ನ ವೃತ್ತಿಪರರ ವೇದಿಕೆ ಅಧ್ಯಕ್ಷ ವೈ.ಎನ್‌.ಶರ್ಮ ಮತ್ತಿತರರಿದ್ದರು.

ಮಾತ್ರೆ ದೇವೋಭವ:

ಎಂದಿನಂತೆ ನಿರರ್ಗಳವಾಗಿ ತಮ್ಮ ಹಾಸ್ಯಭರಿತ ನುಡಿಗಳನ್ನಾಡಿದ ಹಿರೇಮಗಳೂರು ಕಣ್ಣನ್‌ ''ಮೊದಲು ಮಾತೃದೇವೋಭವ ಎನ್ನುತ್ತಿದ್ದೆವು, ಈಗ ಮಾತ್ರೆ ದೇವೋಭವ ಎನ್ನುವ ಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಶುಗರ್‌ ಕಂಟ್ರೋಲ್‌ ದೇವರು ಬಂದರೂ ಅಚ್ಚರಿ ಇಲ್ಲ. ಆಗ ಜನರು ತಮ್ಮ ಮಾತ್ರೆಗಳನ್ನು ಆ ದೇವರ ಮುಂದಿಟ್ಟು ನೈವೇದ್ಯ ಮಾಡಿಸುತ್ತಾರೆ. ಆಗ ಜನರು ತಿರುಪತಿ ತಿಮ್ಮಪ್ಪನ ಬಳಿ ಹೋಗೋದನ್ನೇ ಬಿಟ್ಟುಬಿಡ್ತಾರೆ''ಎಂದು ಚಟಾಕಿ ಹಾರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ