ಆ್ಯಪ್ನಗರ

40 ಮಂದಿ ಪ್ರಾಣ ಉಳಿಸಿ ಜೀವ ತ್ಯಜಿಸಿದ ಚಾಲಕ

ರಾಜ್ಯ ರಸ್ತೆ ಸಾರಿಗೆ ಬಸ್‌ನ ಚಾಲಕರೊಬ್ಬರು ತೀವ್ರ ಹೃದಯಾಘಾತವಾದರೂ, ಚಲಿಸುತ್ತಿದ್ದ ಬಸ್‌ ಅನ್ನು ಸುರಕ್ಷಿತವಾಗಿ ನಿಲ್ಲಿಸಿ, ಪ್ರಾಣಬಿಟ್ಟ ಮನಕಲಕುವ ...

Vijaya Karnataka Web 26 Apr 2018, 3:39 pm
ಕೋಲಾರ: ರಾಜ್ಯ ರಸ್ತೆ ಸಾರಿಗೆ ಬಸ್‌ನ ಚಾಲಕರೊಬ್ಬರು ತೀವ್ರ ಹೃದಯಾಘಾತವಾದರೂ, ಚಲಿಸುತ್ತಿದ್ದ ಬಸ್‌ ಅನ್ನು ಸುರಕ್ಷಿತವಾಗಿ ನಿಲ್ಲಿಸಿ, ಪ್ರಾಣಬಿಟ್ಟ ಮನಕಲಕುವ ಘಟನೆ ಕೋಲಾರದ ನರಸಾಪುರ ಸಮೀಪ ಬುಧವಾರ ನಡೆದಿದೆ.
Vijaya Karnataka Web 40 ಮಂದಿ ಪ್ರಾಣ ಉಳಿಸಿದ ಚಾಲಕ


ಬಸ್‌ ಚಾಲಕನ ಸಮಯೋಚಿತ ಕೆಲಸದಿಂದ 40 ಮಂದಿ ಪ್ರಯಾಣಿಕರ ಪ್ರಾಣ ಉಳಿದಿದೆ. ಬೆಂಗಳೂರಿನ ಕೇಂದ್ರೀಯ ವಿಭಾಗದ 4ನೇ ಘಟಕದ ಐರಾವತ ಬಸ್‌ ಚಾಲಕ ಎಂ.ಜಯಶೀಲನ್‌ ಮೃತಪಟ್ಟ ಚಾಲಕ.

ಬೆಂಗಳೂರಿನಿಂದ ಚೆನ್ನೈಗೆ ಹೊರಟಿದ್ದ ಐರಾವತ ಬಸ್‌ ಚಾಲಕ ಜಯಶೀಲನ್‌ ಅವರಿಗೆ ಕೋಲಾರ ತಾಲೂಕಿನ ನರಸಾಪುರದ ಕಾಮತ್‌ ಉಪಾಹಾರದ ಬಳಿ ತೀವ್ರ ಹೃದಯಾಘಾತವಾಗಿದೆ. ನೋವನ್ನು ನುಂಗಿಕೊಂಡು ವೇಗದಲ್ಲಿದ್ದ ಬಸ್‌ ಅನ್ನು ನಿಲ್ಲಿಸಿದ ಬಳಿಕವೇ ಜಯಶೀಲನ್‌ ಪ್ರಾಣ ಬಿಟ್ಟಿದ್ದಾರೆ. ತನ್ನ ಪ್ರಾಣ ಅಪಾಯದಲ್ಲಿದ್ದ ಸಂದರ್ಭದಲ್ಲೂ ಜಯಶೀಲನ್‌ ಅವರು ತೋರಿದ ಕರ್ತವ್ಯಪ್ರಜ್ಞೆಯಿಂದ ಬಸ್‌ನಲ್ಲಿದ್ದ ಅಷ್ಟೂ ಪ್ರಯಾಣಿಕರ ಜೀವ ಉಳಿಯಿತು. ಘಟನೆ ಬಳಿಕ ಮತ್ತೊಂದು ಬಸ್‌ನಲ್ಲಿ ಪ್ರಯಾಣಿಕರನ್ನು ಕಳುಹಿಸಿಕೊಡಲಾಯಿತು. ವೇಮಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ