ಆ್ಯಪ್ನಗರ

ಇ-ಸಿಗರೇಟು ನಿಷೇಧ ಪ್ರಶ್ನಿಸಿದ್ದ ಸಂಸ್ಥೆಗೆ 1 ಲಕ್ಷ ದಂಡ, ಅರ್ಜಿ ವಜಾ

ರಾಜ್ಯದಲ್ಲಿ ಇ-ಸಿಗರೇಟ್‌ ನಿಷೇಧಿಸಿ 2016ರಲ್ಲಿ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌, ...

Vijaya Karnataka 28 Aug 2019, 5:00 am
ಬೆಂಗಳೂರು: ರಾಜ್ಯದಲ್ಲಿ ಇ-ಸಿಗರೇಟ್‌ ನಿಷೇಧಿಸಿ 2016ರಲ್ಲಿ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌, ಅರ್ಜಿ ಹೂಡಿದ್ದ ಸಂಸ್ಥೆಗೆ 1 ಲಕ್ಷ ರೂ. ದಂಡ ವಿಧಿಸಿದೆ.
Vijaya Karnataka Web highcourt


ಮುಂಬೈ ಮೂಲದ ಕೌನ್ಸಿಲ್‌ ಫಾರ್‌ ಹಾರ್ಮ್‌ ರೆಡ್ಯೂಸ್‌ ಅಲ್ಟರ್ನೆಟಿವ್‌ ಕಂಪನಿ ದಂಡನೆಗೆ ಒಳಗಾಗಿರುವ ಸಂಸ್ಥೆ.

2016ರ ಜು.15ರಂದು ರಾಜ್ಯ ಸರಕಾರ ಇ-ಸಿಗರೇಟ್‌ ನಿಷೇಧಿಸಿದ್ದ ಆದೇಶವನ್ನು ಪ್ರಶ್ನಿಸಿ ಆ ಸಂಸ್ಥೆ ಸಲ್ಲಿಸಿದ್ದ ಪಿಐಎಲ್‌ ಸಿಜೆ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತು.

ವಾದ ಆಲಿಸಿದ ಪೀಠ, ''ಇದು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ ಅರ್ಜಿಯಲ್ಲ. ಇದು ಉತ್ಪಾದಕರ ಪರವಾಗಿ ಸಲ್ಲಿಕೆ ಮಾಡಿರುವ ಅರ್ಜಿ. ಯಾವುದೇ ಕಾರಣಕ್ಕೂ ಪರಿಗಣಿಸಲು ಸಾಧ್ಯವೇ ಇಲ್ಲ,'' ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ಆದರೂ ಸಹ ಅರ್ಜಿದಾರರ ಪರ ವಕೀಲರು, ''ರಾಜ್ಯ ಸರಕಾರಕ್ಕೆ ಇ-ಸಿಗರೇಟು ನಿಷೇಧಿಸುವ ಶಾಸನಾತ್ಮಕ ಅಧಿಕಾರವಿಲ್ಲ.ಅದು ತನ್ನ ವ್ಯಾಪ್ತಿ ಮೀರಿ ನಿರ್ಧಾರ ಕೈಗೊಂಡಿದೆ,'' ಎಂದರು.

ಸರಕಾರದ ಪರ ಕಿರಣ್‌ ಕುಮಾರ್‌, ಇ-ಸಿಗರೇಟು ಆರೋಗಕ್ಕೆ ಎಷ್ಟು ಹಾನಿಕಾರಕ ಎಂಬುದರ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬಿಡುಗಡೆ ಮಾಡಿರುವ ಶ್ವೇತಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ನಂತರ ನ್ಯಾಯಪೀಠ ಅರ್ಜಿದಾರರು ಮಂಡಿಸಿದ ಎಲ್ಲ ಅಂಶಗಳನ್ನು ಉಲ್ಲೇಖಿಸಿ, ''ಯಾವುದೇ ರೀತಿಯಲ್ಲೂ ಇದು ಪಿಐಎಲ್‌ ಆಗಿಲ್ಲ, ಅರ್ಜಿದಾರರ ಪರ ವಕೀಲರು ಬಹಿರಂಗವಾಗಿಯೇ ಉತ್ಪಾದಕರಿಗೆ ತೊಂದರೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ಅರ್ಜಿದಾರರಿಗೆ ಒಂದು ಲಕ್ಷ ರೂ. ದಂಡ ವಿಧಿಸಲಾಗುವುದು,'' ಎಂದು ಆದೇಶ ನೀಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ