ಆ್ಯಪ್ನಗರ

ಸಚಿವಾಲಯ ಸಿಬ್ಬಂದಿ ‘ಇ-ಲೀವ್‌’ ಜಾರಿ; ಆನ್‌ಲೈನ್‌ನಲ್ಲಿ ರಜೆ ಅಂಗೀಕಾರ

ಸಚಿವಾಲಯದ ಸಿಬ್ಬಂದಿ ವರ್ಗ ರಜೆ ಪಡೆಯುವ ವಿಧಾನ ಹೊಸ ವರ್ಷದ ಮೊದಲ ದಿನದಿಂದಲೇ ಬದಲಾಗಲಿದ್ದು, ರಜೆ ಪಡೆಯುವ ಮತ್ತು ಅಂಗೀಕಾರ ವಿಧಾನ ಆನ್‌ಲೈನ್‌ ಆಗಲಿದೆ

Vijaya Karnataka Web 24 Dec 2019, 10:49 pm
ಬೆಂಗಳೂರು: ಸಚಿವಾಲಯದ ಸಿಬ್ಬಂದಿ ವರ್ಗ ರಜೆ ಪಡೆಯುವ ವಿಧಾನ ಹೊಸ ವರ್ಷದ ಮೊದಲ ದಿನದಿಂದಲೇ ಬದಲಾಗಲಿದ್ದು, ರಜೆ ಪಡೆಯುವ ಮತ್ತು ಅಂಗೀಕಾರ ವಿಧಾನ ಆನ್‌ಲೈನ್‌ ಆಗಲಿದೆ.
Vijaya Karnataka Web ವಿಧಾನಸೌಧ
ವಿಧಾನಸೌಧ


ಜ.1 ರಿಂದ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕಾಗಿ 'ಇ-ಲೀವ್‌' ತಂತ್ರಾಂಶವನ್ನು ಕಡ್ಡಾಯವಾಗಿ ಜಾರಿ ಮಾಡಲಾಗುತ್ತಿದೆ. ರಜೆ ವ್ಯವಸ್ಥೆಯಲ್ಲಿಪಾರದರ್ಶಕತೆ ತರುವ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಆದೇಶದಲ್ಲಿತಿಳಿಸಲಾಗಿದೆ.

ಗ್ರೂಪ್‌ 'ಸಿ' ವರ್ಗದ ವಾಹನ ಚಾಲಕರು ಹಾಗೂ ಗ್ರೂಪ್‌ 'ಡಿ' ವರ್ಗದ ಸಿಬ್ಬಂದಿ ಇ-ಕಚೇರಿ ತಂತ್ರಾಂಶ ಉಪಯೋಗ ಮಾಡದ ಕಾರಣ ಈ ಸಿಬ್ಬಂದಿ ಮಾತ್ರ ಸದ್ಯದ ಹಸ್ತಚಾಲಿತ ವ್ಯವಸ್ಥೆಯಲ್ಲೇ ರಜೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ