ಆ್ಯಪ್ನಗರ

ರಾಜ್ಯದಲ್ಲಿ ಇ-ವಿಧಾನ್‌ ಅಳವಡಿಕೆ: ಕಾಗೇರಿ

ರಾಜ್ಯದಲ್ಲಿ ಇ-ವಿಧಾನ್‌ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

Vijaya Karnataka 29 Aug 2019, 5:00 am
ಬೆಂಗಳೂರು: ರಾಜ್ಯದಲ್ಲಿ ಇ-ವಿಧಾನ್‌ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
Vijaya Karnataka Web e vidhan in karnataka kageri
ರಾಜ್ಯದಲ್ಲಿ ಇ-ವಿಧಾನ್‌ ಅಳವಡಿಕೆ: ಕಾಗೇರಿ


ಹೊಸದಿಲ್ಲಿಯಲ್ಲಿ ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಜತೆಗೆ ಕಾಗದ ರಹಿತ ವಿಧಾನಮಂಡಲ ವ್ಯವಸ್ಥೆ ಮಾಡುವ ಬಗ್ಗೆಯೂ ಗಂಭೀರ ಚರ್ಚೆಯಾಯಿತು. ಡಿಜಿಟಲ್‌ ತಂತ್ರಜ್ಞಾನದ ಸಮರ್ಥ ಬಳಕೆ ಮಾಡಿಕೊಳ್ಳಬೇಕು. ಈ ಉದ್ದೇಶಕ್ಕೆ ಇ-ಕಾರ್ಯಾಲಯ, ಇ-ಗ್ರಂಥಾಲಯ ನಿರ್ಮಿಸುವಂತೆಯೂ ಲೋಕಸಭೆ ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್‌ 22 ರಿಂದ 26ರ ವರೆಗೆ ಉಗಾಂಡಾದ ಕಂಪಾಲಾದಲ್ಲಿ 64ನೇ ಕಾಮನ್‌ವೆಲ್ತ್‌ ಪಾರ್ಲಿಮೆಂಟರಿ ಅಸೋಷಿಯೇಷನ್‌ ಸಮ್ಮೇಳನದಲ್ಲಿ ದೇಶದ ನಾನಾ ರಾಜ್ಯಗಳ ಸ್ಪೀಕರ್‌ಗಳು ಭಾಗಿಯಾಗುವಂತೆ ಬಿರ್ಲಾ ಸೂಚಿಸಿದರು,''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ