ಆ್ಯಪ್ನಗರ

8:30ರಿಂದ 9:30 'ಅರ್ಥ್‌ ಅವರ್': ವಿದ್ಯುತ್ ಬಳಕೆ ನಿಲ್ಲಿಸಿ, ಭೂಮಿಯ ತಾಪ ಇಳಿಸಿ

ವರ್ಲ್ಡ್‌ ವೈಡ್ ಫಂಡ್‌ ಫಾರ್ ನೇಚರ್‌ (ವಿಶ್ವ ವನ್ಯಜೀವಿ ನಿಧಿ) ಸಂಘಟನೆ ಕರೆಯಂತೆ 2007ರಲ್ಲಿ ಹವಾಮಾನ ಬದಲಾವಣೆ ತಡೆಗಟ್ಟುವ ಪ್ರಯತ್ನವಾಗಿ ಅನಗತ್ಯ ವಿದ್ಯುತ್‌ ದೀಪಗಳು ಮತ್ತು ಇತರ ಉಪಕರಣಗಳನ್ನು ಬಳಸದಿರುವ ಪ್ರತಿಜ್ಞೆ ಕೈಗೊಳ್ಳಲಾಗಿದೆ.

Vijaya Karnataka Web 30 Mar 2019, 6:43 pm
ಬೆಂಗಳೂರು: ಇಂದು ರಾತ್ರಿ 8:30ರಿಂದ 9:30ರ ವರೆಗೆ ಜಗತ್ತಿನಾದ್ಯಂತ 'ಅರ್ಥ್ ಅವರ್' ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಬೆಂಗಳೂರಿನಲ್ಲೂ ಒಂದು ಗಂಟೆ ಕಾಲ ವಿದ್ಯುತ್ ಬಳಕೆ ಸ್ಥಗಿತಗೊಳಿಸಲಾಗುತ್ತದೆ.
Vijaya Karnataka Web Earth Hour

ವರ್ಲ್ಡ್‌ ವೈಡ್ ಫಂಡ್‌ ಫಾರ್ ನೇಚರ್‌ (ವಿಶ್ವ ವನ್ಯಜೀವಿ ನಿಧಿ) ಸಂಘಟನೆ ಕರೆಯಂತೆ 2007ರಲ್ಲಿ ಹವಾಮಾನ ಬದಲಾವಣೆ ತಡೆಗಟ್ಟುವ ಪ್ರಯತ್ನವಾಗಿ ಅನಗತ್ಯ ವಿದ್ಯುತ್‌ ದೀಪಗಳು ಮತ್ತು ಇತರ ಉಪಕರಣಗಳನ್ನು ಬಳಸದಿರುವ ಪ್ರತಿಜ್ಞೆ ಕೈಗೊಳ್ಳಲಾಗಿದೆ.

2007ರಲ್ಲಿ ಮೊದಲ ಬಾರಿ ಅರ್ಥ್‌ ಅವರ್ ಆಚರಿಸಲು ಕರೆ ನೀಡಿದಾಗ ಸಿಡ್ನಿ ನಗರದ 22 ಲಕ್ಷ ಮಂದಿ ಅಗತ್ಯವಿಲ್ಲದ ವಿದ್ಯುತ್ ದೀಪಗಳನ್ನು ಆರಿಸಿ ಸ್ಪಂದಿಸಿದರು.

2008ರಲ್ಲಿ ಜಗತ್ತಿನ ಇತರ ಹಲವು ನಗರಗಳು ಅರ್ಥ್‌ ಅವರ್ ಆಚರಣೆಯಲ್ಲಿ ಭಾಗಿಯಾದವು. ಭಾರತದ ಹಲವು ನಗರಗಳೂ ಅರ್ಥ್ ಅವರ್ ಆಚರಿಸಿದವು.

ಈ ಬಾರಿಯೂ ಅದೇ ರೀತಿ ಅರ್ಥ್ ಅವರ್ ಆಚರಣೆ ಇಂದು ರಾತ್ರಿ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ