ಆ್ಯಪ್ನಗರ

ಎಚ್ಚರ, ವಿದ್ಯಾವಂತರೇ ಸೈಬರ್​ ಹ್ಯಾಕರ್​ಗಳ ಟಾರ್ಗೆಟ್: ಹೆಚ್ಚುತ್ತಿದೆ ಖದೀಮರ ಮೋಸದ ಜಾಲ!

ಸೈಬರ್ ಬಲೆಗೆ ಬೀಳುವುದರಲ್ಲಿ ಸುಶಿಕ್ಷಿತರ ಸಂಖ್ಯೆಯೇ ಹೆಚ್ಚಾಗಿದೆ. ಅದೆಷ್ಟೋ ವಿದ್ಯಾವಂತರು ಸೈಬರ್ ಖದೀಮರ ಜಾಲಕ್ಕೆ ಬಿದ್ದು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಬೇಕಾಬಿಟ್ಟಿಯಾಗಿ ದೊರೆಯುವ ಸಿಮ್ ಕಾರ್ಡ್ ನಿಂದ ಈ ಅಪರಾಧಗಳು ಹೆಚ್ಚಾಗುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯ.

Vijaya Karnataka Web 15 Sep 2020, 6:43 am
ಬೆಂಗಳೂರು: ಸೈಬರ್‌ ಬಲೆಗೆ ಬೀಳುವವರಲ್ಲಿ ಐಪಿಎಸ್‌ ಅಧಿಕಾರಿಗಳು, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ನಿವೃತ್ತ ಅಧಿಕಾರಿಗಳು ಸೇರಿದ್ದಾರೆ. ಶಿಕ್ಷಿತರು, ಅನಕ್ಷರಸ್ಥರು ಸೇರಿ ಎಲ್ಲ ವರ್ಗದ ಜನರು ಸೈಬರ್‌ ಖದೀಮರ ಬಲೆಗೆ ಬಿದ್ದು ಕೊಟ್ಯಂತರ ರೂ. ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ನಾಗರಿಕರು ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಅಪರಾಧಗಳು ಮುಂದುವರಿದಿವೆ.
Vijaya Karnataka Web cyber attack


ಕಾರ್ಡ್‌ ಮಾರಾಟಕ್ಕೆ ಕಡಿವಾಣ ಬೇಕು
ದೇಶಾದ್ಯಂತ ಆನ್‌ಲೈನ್‌ ವಂಚನೆಯಲ್ಲಿ ಪ್ರಧಾನವಾಗಿ ಉಪಯೋಗವಾಗುವುದು ಬೇಕಾಬಿಟ್ಟಿಯಾಗಿ ದೊರೆಯುವ ಸಿಮ್‌ ಕಾರ್ಡ್‌ಗಳು. ಹೀಗಾಗಿ ಎಲ್ಲೆಂದರಲ್ಲಿ ಸಿಮ್‌ ಕಾರ್ಡ್‌ ಮಾರಾಟವನ್ನು ನಿಲ್ಲಿಸಬೇಕು ಎನ್ನುವುದು ತಜ್ಞರು ನೀಡುವ ಸಲಹೆ.

ಆಧಾರ್‌ ಕಾರ್ಡ್‌ ಆಧರಿಸಿ ಒಬ್ಬ ವ್ಯಕ್ತಿ ಹೆಸರಿನಲ್ಲಿ ಒಂದು ಅಥವಾ ಎರಡು ಸಿಮ್‌ಕಾರ್ಡ್‌ ಮಾತ್ರ ನೀಡಬೇಕು. ಹೆಚ್ಚುವರಿ ಸಿಮ್‌ ಕಾರ್ಡ್‌ಗಳು ಬೇಕಿದ್ದಲ್ಲಿ ಅದಕ್ಕೆ ಸೂಕ್ತ ಕಾರಣ ನೀಡುವ ದಾಖಲೆಗಳನ್ನು ಒದಗಿಸುವುದು, ಡೆಪಾಸಿಟ್‌ ಇಡುವುದೂ ಸೇರಿದಂತೆ ಇನ್ನಿತರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು. ಏಕೆಂದರೆ, ಬಹುತೇಕ ಅಕ್ರಮಗಳು ಸಿಮ್‌ಕಾರ್ಡ್‌ ಮತ್ತು ಸ್ಮಾರ್ಟ್‌ಫೋನ್‌ಗಳಿಂದ ನಡೆಯುತ್ತಿವೆ.
ಸೆನ್‌ ಠಾಣೆಗಳಲ್ಲಿ ತಂತ್ರಜ್ಞ ಅಧಿಕಾರಿಗಳ ಕೊರತೆ : ಸೈಬರ್‌, ನಾರ್ಕೋಟಿಕ್‌ ಪ್ರಕರಣ ಹೆಚ್ಚಳ!

ಅಮಾಯಕರ ಹೆಸರಿನಲ್ಲಿ ಅಕ್ರಮ

ಅಮಾಯಕ ವ್ಯಕ್ತಿಗಳು, ವೃದ್ಧರ ಹೆಸರಿನಲ್ಲಿ ಸಿಮ್‌ಕಾರ್ಡ್‌ ಖರೀದಿಸುವ ಆರೋಪಿಗಳು, ಅವರಿಗೆ ಒಂದಷ್ಟು ಹಣ ನೀಡುತ್ತಾರೆ. ಆ ಸಿಮ್‌ ಬಳಸಿ ವಂಚಿಸುತ್ತಾರೆ. ಪೊಲೀಸರು, ಆ ಸಂಖ್ಯೆ ಯಾರ ಹೆಸರಿನಲ್ಲಿ ಇದೆ ಎಂದು ಹುಡುಕಿಕೊಂಡು ಹೋದರೆ ಅವರು ಅಮಾಯಕರಾಗಿರುತ್ತಾರೆ. ಹೀಗಾಗಿ, ವಂಚನೆಯಲ್ಲಿ ಅವರು ನೇರವಾಗಿ ಭಾಗಿಯಾಗದೇ ಇರುವ ಕಾರಣ ಅವರನ್ನು ಆರೋಪಿಗಳಾಗಿ ಮಾಡಬಹುದೇ ಹೊರತು ಪ್ರಮುಖ ಆರೋಪಿ ಆಗುವುದಿಲ್ಲ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.
ಎಚ್ಚರ..! ಕೊರೊನಾ ವೈರಸ್‌ ಹೆಸರಲ್ಲಿ ದೇಶಾದ್ಯಂತ ಸೈಬರ್ ದಾಳಿಗೆ ಸ್ಕೆಚ್..

ರಾಜ್ಯಾದ್ಯಂತ ಡ್ರಗ್ಸ್‌ ಜಾಲ ಕಾರ್ಯಾಚರಣೆ ನಡೆಯುತ್ತಿದ್ದು, ನಾರ್ಕೋಟಿಕ್‌ ಠಾಣೆಯ ಪೊಲೀಸರಿಗೆ ವಿಶೇಷ ತರಬೇತಿ ರಾಜ್ಯಾದ್ಯಂತ ನಡೆಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ತನಿಖೆ ನಡೆಯುವ ವಿಶ್ವಾಸವಿದೆ.
ಪ್ರವೀಣ್‌ ಸೂದ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ(ಡಿಜಿಪಿ)

ಮೊಬೈಲ್‌ ಕರೆ ನಂಬಿ ಏಕಾಏಕಿ ಮಾಹಿತಿ ಕೊಟ್ಟು ಮೋಸ ಹೋಗಬೇಡಿ , ಎಚ್ಚರ!
ಉ. ಭಾರತದಲ್ಲಿರುವ ಆರೋಪಿಗಳು
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಾಖಲಾಗುವ ವಂಚನೆ ಕೇಸ್‌ಗಳ ಆರೋಪಿಗಳು ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಜಾರ್ಖಂಡ್‌ ಸೇರಿದಂತೆ ಇನ್ನಿತರ ಉತ್ತರ ಭಾರತ ರಾಜ್ಯಗಳಲ್ಲಿರುತ್ತಾರೆ. ಅಲ್ಲಿಗೆ ಹೋಗಿ ಆರೋಪಿಗಳನ್ನು ಬಂಧಿಸುವುದು ಸುಲಭದ ಕೆಲಸವಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಯೊಂದಿಗೆ ಹೋಗಬೇಕು. ಸ್ಥಳೀಯ ಪೊಲೀಸರ ಸಹಕಾರ ಸಿಗಬೇಕು. ಆಗ ಮಾತ್ರ ಕೆಲವು ಆರೋಪಿಗಳು ಸಿಗುತ್ತಾರೆ. ಉಳಿದ ಆರೋಪಿಗಳು ಮತ್ತೆ ಬೇರೆ ಬೇರೆ ಕಡೆಗಳಲ್ಲಿ ಚದುರಿರುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ