ಆ್ಯಪ್ನಗರ

ನೀತಿ ಸಂಹಿತೆ ಉಲ್ಲಂಘನೆ ಆರೋಪ; ನಾರಾಯಣಸ್ವಾಮಿ ಬಂಧನ ವಾರಂಟ್‌ ರದ್ದು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ವಿಧಾನಪರಿಷತ್‌ ಸದಸ್ಯ ಹಾಗೂ ಹೆಬ್ಬಾಳದ ಮಾಜಿ ಶಾಸಕ ವೈಎ...

Vijaya Karnataka 18 Dec 2018, 5:00 am
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ವಿಧಾನಪರಿಷತ್‌ ಸದಸ್ಯ ಹಾಗೂ ಹೆಬ್ಬಾಳದ ಮಾಜಿ ಶಾಸಕ ವೈ.ಎ.ನಾರಾಯಣ ಸ್ವಾಮಿ ವಿರುದ್ಧದ ಅಧೀನ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ಬಂಧನ ವಾರೆಂಟ್‌ ಅನ್ನು ಹೈಕೋರ್ಟ್‌ ಸೋಮವಾರ ರದ್ದುಗೊಳಿಸಿದೆ.
Vijaya Karnataka Web y a narayana swamy


ನಾರಾಯಣಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಪಿ.ಎಸ್‌.ದಿನೇಶ್‌ ಕುಮಾರ್‌ ಈ ಆದೇಶ ನೀಡಿದೆ.

ನ್ಯಾಯಾಲಯದ ನಿರ್ದೇಶನದಂತೆ ಹೈಕೋರ್ಟ್‌ ಏಕಸದಸ್ಯಪೀಠದ ಮುಂದೆ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಹಾಜರಾಗಿ ವಿವರಣೆ ನೀಡಿದರು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎಂ.ಟಿ. ನಾಣಯ್ಯ ''ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯನಗರ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಅದರಲ್ಲಿ ಪೊಲೀಸರು ಶಾಸಕರು ತಲೆಮರೆಸಿಕೊಂಡಿದ್ದಾರೆಂದು ಹೇಳಿದ್ದಾರೆ. ಅರ್ಜಿದಾರರ ವಿರುದ್ಧದ ಪ್ರಕರಣ ಸುಳ್ಳು ಆರೋಪಗಳಿಂದ ಕೂಡಿರುವುದರಿಂದ ಅದನ್ನು ರದ್ದುಗೊಳಿಸಬೇಕು''ಎಂದು ಮನವಿ ಮಾಡಿದರು.

ಸಿವಿಲ್‌ ಕೇಸ್‌ ಸೆಟಲ್‌ಮೆಂಟ್‌ ಬೇಡ

''ಸಿವಿಲ್‌ ಪ್ರಕರಣಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡುತ್ತಿರುವ ಪ್ರಕರಣಗಳು ಪ್ರತಿ ದಿನ ಕೋರ್ಟ್‌ ಮುಂದೆ ಬರುತ್ತಿವೆ.ಸಿವಿಲ್‌ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರ ವ್ಯಾಪ್ತಿ ಪೊಲೀಸರಿಗೆ ಇಲ್ಲ. ಇದರಿಂದಲೇ ಸಿವಿಲ್‌ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶಿಸದಂತೆ ಪೊಲೀಸರಿಗೆ ಹಲವು ಬಾರಿ ನಿರ್ದೇಶಿಸಲಾಗಿದ್ದರೂ ಅವರು ತಮ್ಮ ಚಾಳಿ ಬಿಡುತ್ತಿಲ್ಲ ''ಎಂದು ಜಜ್‌ ಅಸಮಾಧಾನ ವ್ಯಕ್ತಪಡಿಸಿದರು.

''ಅಪರಾಧ ಕೃತ್ಯಗಳ ಸಂಬಂಧ ಪೊಲೀಸರು ಕಾನೂನು ಪ್ರಕಾರ ಕ್ರಮ ಜರುಗಿಸಬಹುದು.ಅದರಲ್ಲಿ ಕೊರ್ಟ್‌ ಮಧ್ಯಪ್ರವೇಶಿಸುವುದಿಲ್ಲ. ಆದರೆ, ಸಿವಿಲ್‌ ವ್ಯಾಜ್ಯ, ರಿಯಲ್‌ ಎಸ್ಟೇಟ್‌ ಹಾಗೂ ಭೂ ವ್ಯವಹಾರಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಬಾರದು. ಸಿವಿಲ್‌ ವ್ಯಾಜ್ಯಗಳನ್ನು ಸೆಟಲ್‌ಮೆಂಟ್‌ ಮಾಡಬಾರದು.ಇದೇ ಧೋರಣೆ ಮುಂದುವರಿಸಿದರೆ ಕೋರ್ಟ್‌ ಕಠಿಣ ಕ್ರಮ ಜರುಗಿಸಲಿದೆ ''ಎಂದು ನ್ಯಾಯಮೂರ್ತಿ ಎಚ್ಚರಿಸಿದರು.

--

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ