ಆ್ಯಪ್ನಗರ

ಮೈಸೂರು ದಸರಾ ಗಜ ಪಯಣಕ್ಕೆ ಮುಹೂರ್ತ ಫಿಕ್ಸ್‌, ಗಜಪಡೆಗಳ ಫುಲ್‌ ಲಿಸ್ಟ್‌ ಹೀಗಿದೆ

ಮೈಸೂರು ದಸರಾ 2019ಕ್ಕೆ ದಿನಗಣನೆ ಆರಂಭವಾಗಿದೆ. ನಾಡಹಬ್ಬದ ಮೊದಲ ಭಾಗವಾಗಿ ದಸರಾ ಆನೆಗಳ ಪಯಣಕ್ಕೆ ಎಲ್ಲ ಸಿದ್ಧತೆಗಳು ಜೋರಾಗಿ ಸಾಗಿವೆ. ಮುಂದಿನ ವಾರ ಮೊದಲ ತಂಡ ಮೈಸೂರಿಗೆ ಆಗಮಿಸುವ ನಿರೀಕ್ಷೆ ಇದೆ.

Vijaya Karnataka Web 16 Aug 2019, 4:50 pm
ಮೈಸೂರು: ವಿಶ್ವವಿಶ್ಯಾತ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಗಜಪಡೆಗಳ ಪಟ್ಟಿ ಸಿದ್ಧವಾಗಿದೆ ಹಾಗೂ ಈ ಆನೆಗಳು ಯಾವತ್ತು ಸಾಂಸ್ಕೃತಿಕ ನಗರಿಗೆ ಆಗಮಿಸಲಿದೆ ಎಂಬುದು ಕೂಡ ನಿಗದಿಯಾಗಿದೆ.
Vijaya Karnataka Web ಗಜ ಪಯಣ (ಸಂಗ್ರಹ ಚಿತ್ರ)
ಗಜ ಪಯಣ (ಸಂಗ್ರಹ ಚಿತ್ರ)


ದಸರಾ ಗಜಪಯಣ ಆಗಸ್ಟ್ 22ಕ್ಕೆ ನಿಗದಿಯಾಗಿದೆ. ಕಾಡಿನಿಂದ ನಾಡಿನತ್ತ ಹೆಜ್ಜೆಯಿಡಲಿವೆ ದಸರಾ ಗಜಪಡೆ. ಹುಣಸೂರು ತಾಲೂಕಿನ ವೀರನಹೊಸಳ್ಳಿಯಿಂದ ಮೈಸೂರು ಅರಮನೆಗೆ ಗಜಪಡೆಗಳ ಮೊದಲ ತಂಡ ಆಗಮಸಲಿದೆ.

ಆಗಸ್ಟ್ 22ರ ಬೆ.10.30ಕ್ಕೆ ಗಜಪಯಣಕ್ಕೆ ಚಾಲನೆ ದೊರೆಯಲಿದೆ. ದಸರಾ ಗಜಪಡೆಯ ಮೊದಲ ತಂಡದಲ್ಲಿ ಆರು ಆನೆಗಳು ಇರಲಿವೆ. ಚಿನ್ನದ ಅಂಬಾರಿ ಹೊರಲಿರುವ ಸಾರಥಿ ಅರ್ಜುನ ನೇತೃತ್ವದ ಆರು ಆನೆಗಳಿಗೆ ಗಣ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಪ್ರಯಾಣಕ್ಕೆ ಹಸಿರು ನಿಶಾನೆ ತೋರಲಾಗುವುದು.

ಗಜ ಪಡೆಗಳ ಪಯಣಕ್ಕೆ ಈಗಾಗಲೇ ಮೈಸೂರು ದಸರಾ ಸಮಿತಿ ಹಾಗೂ ಅರಣ್ಯ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿವೆ.

ಗಜಪಡೆಗಳ ಲಿಸ್ಟ್ ಫೈನಲ್

ಈ ಬಾರಿ ದಸರಾದಲ್ಲಿ 14 ಆನೆಗಳು ಭಾಗಿಯಾಗಲಿವೆ. ಎರಡು ತಂಡಗಳಾಗಿ ಮೈಸೂರಿಗೆ ಬರಲಿದೆ ಗಜಪಡೆಗಳು. ಮೊದಲ ತಂಡದಲ್ಲಿ 6 ಆನೆಗಳು. ಎರಡನೆ ತಂಡದಲ್ಲಿ 8 ಆನೆಗಳು ಇರಲಿವೆ. ಎರಡು ಆನೆಗಳು ಹೆಚ್ಚುವರಿಯಾಗಿ ದಸರಾದಲ್ಲಿ ಭಾಗಿಯಾಗುತ್ತದೆ.

ಯಾವ ಯಾವ ಆನೆಗಳು...

1, ಅರ್ಜುನ- 59 ವರ್ಷ- ಬಳ್ಳೆ ಆನೆ ಶಿಬಿರ
2. ಬಲರಾಮ - 61 ವರ್ಷ - ಮತ್ತಿಗೋಡು ಆನೆ ಶಿಬಿರ
3. ಅಭಿಮನ್ಯು - 53 ವರ್ಷ - ಮತ್ತಿಗೋಡು ಆನೆ ಶಿಬಿರ
4. ವರಲಕ್ಷೀ - 63 ವರ್ಷ - ಮತ್ತಿಗೋಡು ಆನೆ ಶಿಬಿರ
5. ಕಾವೇರಿ - 41 ವರ್ಷ - ದುಬಾರೆ ಆನೆ ಶಿಬಿರ
6. ವಿಜಯ - 62 ವರ್ಷ - ದುಬಾರೆ ಆನೆ ಶಿಬಿರ
7. ವಿಕ್ರಮ - 46 ವರ್ಷ - ದುಬಾರೆ ಆನೆ ಶಿಬಿರ
8. ಗೋಪಿ - 37 ವರ್ಷ - ದುಬಾರೆ ಆನೆ ಶಿಬಿರ
9. ಧನಂಜಯ - 36 ವರ್ಷ - ದುಬಾರೆ ಆನೆ ಶಿಬಿರ
10. ಈಶ್ವರ - 49 ವರ್ಷ - ದುಬಾರೆ ಆನೆ ಶಿಬಿರ
11. ದುರ್ಗಾಪರಮೇಶ್ವರಿ - 52 ವರ್ಷ - ಕೆ.ಗುಡಿ ಆನೆ ಶಿಬಿರ
12. ಜಯಪ್ರಕಾಶ್ - 57 ವರ್ಷ - ರಾಂಪುರ ಆನೆ ಶಿಬಿರ

ಹೆಚ್ಚುವರಿಯಾಗಿ ಎರಡು ಆನೆ
13. ಲಕ್ಷೀ - 17 ವರ್ಷ - ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ.
14. ರೋಹಿತ್ - 19 ವರ್ಷ - ಬಂಡಿಪುರ ಹುಲಿ ಸಂರಕ್ಷಕ ಅರಣ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ