ಆ್ಯಪ್ನಗರ

ಭೂಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

ಸಿದ್ದೇಶ್ವರ ಶುಗರ್ಸ್‌ ಕಾರ್ಖಾನೆ ನಿರ್ಮಾಣಕ್ಕೆ ಬಸವನಬಾಗೇವಾಡಿಯ ತೆಲಗಿ ಮತ್ತು ಅಂಡಲಗೇರಿ ಗ್ರಾಮಗಳಲ್ಲಿನ ಭೂಮಿಯನ್ನು ಕೆಐಎಡಿಬಿ ಯಿಂದ ...

Vijaya Karnataka 10 Mar 2019, 5:00 am
ಬೆಂಗಳೂರು: ಸಿದ್ದೇಶ್ವರ ಶುಗರ್ಸ್‌ ಕಾರ್ಖಾನೆ ನಿರ್ಮಾಣಕ್ಕೆ ಬಸವನಬಾಗೇವಾಡಿಯ ತೆಲಗಿ ಮತ್ತು ಅಂಡಲಗೇರಿ ಗ್ರಾಮಗಳಲ್ಲಿನ ಭೂಮಿಯನ್ನು ಕೆಐಎಡಿಬಿ ಯಿಂದ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.
Vijaya Karnataka Web 0903-2-2-100 (2)


ನಗರದ ಆನಂದರಾವ್‌ ವೃತ್ತದ ಬಳಿಯ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ರೈತರು, ''ತೆಲಗಿ ಮತ್ತು ಅಂಡಲಗೇರಿ ಗ್ರಾಮದ 20 ರೈತರ 130.05 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತು. 21 ಕೋಟಿ ರೂ. ಪರಿಹಾರ ನೀಡುವುದಾಗಿ ಆಶ್ವಾಸನೆ ಕೊಟ್ಟು, ಕೇವಲ 40 ಲಕ್ಷ ಮಾತ್ರ ನೀಡಿದ್ದಾರೆ. ಬಾಕಿ ಪರಿಹಾರ ಹಣ ಕೇಳಿದರೆ ಬೆದರಿಸಲಾಗುತ್ತಿದೆ,'' ಎಂದು ಪ್ರತಿಭಟನಾ ನಿರತರು ದೂರಿದರು.

''ಸಿದ್ದೇಶ್ವರ ಸಕ್ಕರೆ ಕಂಪನಿಯ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಈವರೆಗೆ ಕಾರ್ಖಾನೆ ನಿರ್ಮಾಣವಾಗಿಲ್ಲ, ರೈತರಿಗೆ ಪರಿಹಾರವನ್ನೂ ಕೊಟ್ಟಿಲ್ಲ. ಕೆಐಎಡಿಬಿ ಯಿಂದ ಹಲವು ಬಾರಿ ಸಚಿವರಿಗೆ ನೋಟಿಸ್‌ ನೀಡಿದ್ದರೂ, ಉತ್ತರಿಸಿಲ್ಲ. ಕೂಡಲೇ ಸಿದ್ದೇಶ್ವರ ಶುಗರ್ಸ್‌ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು,'' ಎಂದು ಎಸ್‌.ಕೆ.ಬೆಳ್ಳುಬ್ಬಿ ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ