ಆ್ಯಪ್ನಗರ

ಹಾಲಿ-ಮಾಜಿ ಶಾಸಕರು ಕೆಲಕಾಲ ಪೋಲಿಸ್‌ ವಶಕ್ಕೆ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಳ್ಳಾರಿ ಗ್ರಾಮಾಂತರ ಶಾಸಕ ಬಿನಾಗೇಂದ್ರ ಮತ್ತು ನೀತಿ ಸಂಹಿತ ಉಲ್ಲಂಘನೆ ವಿಚಾರದಲ್ಲಿ ಮಾಜಿ ಶಾಸಕ ಎಸ್‌ಎ...

Vijaya Karnataka 30 Apr 2019, 5:00 am
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಮತ್ತು ನೀತಿ ಸಂಹಿತ ಉಲ್ಲಂಘನೆ ವಿಚಾರದಲ್ಲಿ ಮಾಜಿ ಶಾಸಕ ಎಸ್‌.ಎ. ರವೀಂದ್ರ ನ್ಯಾಯಾಲಯಕ್ಕೆ ಹಾಜರಾಗದ ಕಾರಣಕ್ಕೆ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೆಲ ಕಾಲ ಪೊಲೀಸರ ವಶಕ್ಕೆ ನೀಡಿತ್ತು.
Vijaya Karnataka Web ex mla mla in police custody
ಹಾಲಿ-ಮಾಜಿ ಶಾಸಕರು ಕೆಲಕಾಲ ಪೋಲಿಸ್‌ ವಶಕ್ಕೆ


ಅಕ್ರಮ ಗಣಿ ಪ್ರಕರಣದಲ್ಲಿ ನಾಗೇಂದ್ರ ಅವರಿಗೆ ಹಲವು ಬಾರಿ ಸಮನ್ಸ್‌ ನೀಡಲಾಗಿತ್ತು. ಆದರೂ ಬರದಿದ್ದಾಗ ವಾರೆಂಟ್‌ ಜಾರಿ ಆಗಿತ್ತು. ವಾರೆಂಟ್‌ ತೆಗೆಸಲು ನ್ಯಾಯಾಲಯಕ್ಕೆ ಹಾಜರಾಗಿದ್ದಾಗ ಅವರನ್ನು ಕೆಲ ಗಂಟೆಗಳ ಕಾಲ ಪೊಲೀಸರ ವಶದಲ್ಲಿ ಇರಿಸಲಾಯಿತು. ಮಧ್ಯಾಹ್ನದವೆರೆಗೆ ಪೊಲೀಸ್‌ ವಶದಲ್ಲಿದ್ದ ನಾಗೇಂದ್ರ ಅವರಿಗೆ 250 ರೂ. ದಂಡ ವಿಧಿಸಿ ವಾರೆಂಟ್‌ ಹಿಂಪಡೆದುಕೊಳ್ಳಲಾಯಿತು.

ಎಸ್‌.ಎ. ರವೀಂದ್ರನಾಥ್‌: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಹಾಜರಗದ ಕಾರಣ ಮಾಜಿ ಸಚಿವ ಹಾಗೂ ದಾವಣಗೆರೆ ಶಾಸಕ ಎಸ್‌.ಎ.ರವೀಂದ್ರನಾಥ್‌ ಅವರನ್ನೂ ವಿಶೇಷ ನ್ಯಾಯಾಲಯ ಕೆಲ ಕಾಲ ಪೊಲೀಸರ ವಶಕ್ಕೆ ನೀಡಿ, ನಂತರ 250 ರೂ. ದಂಡ ವಿಧಿಸಿ ಬಿಡುಗಡೆಗೊಳಿಸಿತು.ಹಲವು ಬಾರಿ ನೋಟಿಸ್‌ ಜಾರಿ ಮಾಡಿದ್ದರೂ, ವಿಚಾರಣೆಗೆ ಹಾಜರಾಗಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ