ಆ್ಯಪ್ನಗರ

ಎಸ್‌ಪಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ: ಪರಿಚಿತರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಖದೀಮರು

ಎಸ್‌ಪಿ ಜಿನೇಂದ್ರ ಖಣಗಾವಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದ ಕಿಡಿಗೇಡಿಗಳು ಹಣಕ್ಕಾಗಿ ಬೇಡಿಕೆ ಇಟ್ಟು, ಪರಿಚಿತರಿಂದ ಹಣವನ್ನು ಲಪಟಾಯಿಸಿದ ಘಟನೆ ನಡೆದಿದೆ. ಪೊಲೀಸ್ ಆಫೀಸರ್ ಗಳನ್ನೇ ಬಿಡದ ಈ ಖದೀಮರಿಂದ ಜನಸಾಮಾನ್ಯರು ಬಲು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ.

Vijaya Karnataka Web 17 Sep 2020, 9:35 am
ಬೆಂಗಳೂರು: ಆಂತರಿಕ ಭದ್ರತಾ ದಳದ ಎಸ್‌ಪಿ ಜಿನೇಂದ್ರ ಖಣಗಾವಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದ ಆನ್‌ಲೈನ್‌ ಖದೀಮರು, ಪರಿಚಿತರಿಗೆ ಮೆಸೆಂಜರ್‌ ಮೂಲಕ ಸಂದೇಶ ಕಳುಹಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ಈ ಸಂಬಂಧ ಎಸ್ಪಿ ಅವರಿಗೆ ಪರಿಚಯ ಇರುವ ಶ್ರೀದೇವಿ ಎಂಬುವರು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ, ಫ್ರೆಂಡ್‌ ರಿಕ್ವೆಸ್ಟ್‌ ಅಕ್ಸೆಪ್ಟ್‌ ಮಾಡುವಾಗ ಎಚ್ಚರದಿಂದ ಇರುವಂತೆ ಕೋರಿದ್ದಾರೆ.

ಜೀನೇಂದ್ರ ಖಣಗಾವಿ ಅವರ ನೈಜ ಖಾತೆಯಲ್ಲಿನ ಪೋಟೋಗಳನ್ನು, ಪ್ರೊಫೈಲ್‌ ಫೋಟೊ ಆಗಿ ಬಳಸಿರುವ ಖದೀಮರು ಮತ್ತೊಂದು ಖಾತೆ ಸೃಷ್ಟಿಸಿದ್ದಾರೆ. ಅವರೊಂದಿಗೆ ಇರುವ ಸ್ನೇಹಿತರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಫ್ರೆಂಡ್‌ ಆಗಿದ್ದಾರೆ. ನಂತರ ಅನುಮಾನ ಬಾರದಂತೆ ಎಫ್‌ಬಿ ಮೆಸೆಂಜರ್‌ ಮೂಲಕ ಹಣಕ್ಕೆ ಡಿಮ್ಯಾಂಡ್‌ ಮಾಡಿದ್ದಾರೆ.
ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂತಹ ಸಂವಹನ ಆ್ಯಪ್‌ಗಳಿಗೆ ಪ್ರತಿಬಂಧಕ ಕ್ರಮ ಅಗತ್ಯವಿಲ್ಲ: ಟ್ರಾಯ್‌

''ಖಣಗಾವಿ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ನನಗೆ ಹಣ ಕೇಳುತ್ತಿದ್ದಾರೆ. ದಯವಿಟ್ಟು ಇಂತಹ ನಕಲಿ ಅಕೌಂಟ್‌ಗಳ ಬಗ್ಗೆ ಎಚ್ಚರದಿಂದಿರಿ'' ಎಂದು ಶ್ರೀದೇವಿ ಮನವಿ ಮಾಡಿದ್ದಾರೆ.

'ಹಲೋ ಗುಡ್‌ಮಾರ್ನಿಂಗ್‌. ಎಲ್ಲಿದ್ದೀರಾ? ಎಂದು ಶ್ರೀದೇವಿ ಅವರಿಗೆ ಮೆಸೇಜ್‌ ಮಾಡಿರುವ ಖದೀಮರು, 'ಗೂಗಲ್‌ ಪೇ ಅಥವಾ ಫೋನ್‌ ಪೇ ಬಳಸುತ್ತಿದ್ದೀರಾ. ತುರ್ತಾಗಿ 20 ಸಾವಿರ ಕಳುಹಿಸಿ' ಎಂದು ಪೇಟಿಎಂ ಬ್ಯಾಂಕ್‌ ಖಾತೆ ವಿವರಗಳನ್ನು ನೀಡಿದ್ದಾರೆ. '10 ಸಾವಿರ ರೂ. ಕಳುಹಿಸುತ್ತೇನೆ. ಹಣವನ್ನು ಬ್ಯಾಂಕ್‌ ಮೂಲಕ ಟ್ರಾನ್ಸ್‌ಫರ್‌ ಮಾಡುತ್ತೇನೆ' ಎಂದು ಶ್ರೀದೇವಿ ಹೇಳಿದ್ದಾರೆ.
ಫೇಸ್ ಬುಕ್ ಬಳಕೆದಾರರೇ ಎಚ್ಚರ: ಕೊಡಗಿನಲ್ಲಿ ಮೂರು ಫೇಸ್‌ಬುಕ್‌ ಖಾತೆ ಹ್ಯಾಕ್!‌

ಆನಂತರ ಈ ಕುರಿತು ಪರಿಶೀಲನೆ ನಡೆಸಿದಾಗ ನಕಲಿ ಖಾತೆ ತೆರೆದ ಖದೀಮರು, ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಳ್ಳಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಖಣಗಾವಿ ಅವರ ಹೆಸರಿನಲ್ಲಿ ಇನ್ನೂ ಹಲವರಿಗೆ ಹಣಕ್ಕಾಗಿ ಎಫ್‌ಬಿ ಮೆಸೇಂಜರ್‌ ಮೂಲಕ ಹಣ ಕೋರಲಾಗಿದೆ. ಇನ್ನು ರಾಮನಗರ ಎಸ್ಪಿ ಚಂದ್ರಗುಪ್ತ ಹೆಸರಲ್ಲೂ ನಕಲಿ ಖಾತೆ ತೆರೆಯಲಾಗಿದೆ. ಈ ಕುರಿತು ಎಸ್ಪಿ ಕೂಡ ಪ್ರಕರಣ ದಾಖಲಿಸಿದ್ದಾರೆ.

ನನ್ನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ ಸೈಬರ್‌ ಕ್ರಿಮಿನಲ್‌ಗಳು ಪರಿಚಿತರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದಾರೆ. ನಂತರ ಎಫ್‌ಬಿ ಮೆಸೆಂಜರ್‌ ಮೂಲಕ ಹಣಕ್ಕೆ ಡಿಮ್ಯಾಂಡ್‌ ಮಾಡಿದ್ದಾರೆ. ಕೆಲವರು ಗೂಗಲ್‌ ಪೇ ಮೂಲಕ ಹಣ ಪಾವತಿ ಮಾಡಿದ್ದಾರೆ. ನನ್ನನ್ನು ಸಂಪರ್ಕಿಸಿದಾಗ ನಕಲಿ ಖಾತೆ ಎಂದು ಗೊತ್ತಾಗಿದೆ.
ಜಿನೇಂದ್ರ ಖಣಗಾವಿ, ಎಸ್ಪಿ ,ಆಂತರಿಕ ಭದ್ರತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ