ಆ್ಯಪ್ನಗರ

ಖೋಟಾ ನೋಟು ಚಲಾವಣೆ, ಇಬ್ಬರಿಗೆ 10 ವರ್ಷ ಜೈಲು ಶಿಕ್ಷೆ

ಖೋಟಾ ನೋಟು ಚಲಾವಣೆ ಪ್ರಕರಣದಲ್ಲಿ ರಾಜ್ಯದ ಇಬ್ಬರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆಂಧ್ರಪ್ರದೇಶದ ವಿಜಯವಾಡದ ಎನ್‌ಐಎ ಪ್ರಕರಣಗಳ ವಿಶೇಷ ...

Vijaya Karnataka 27 Jun 2019, 5:00 am
ಬೆಂಗಳೂರು: ಖೋಟಾ ನೋಟು ಚಲಾವಣೆ ಪ್ರಕರಣದಲ್ಲಿ ರಾಜ್ಯದ ಇಬ್ಬರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆಂಧ್ರಪ್ರದೇಶದ ವಿಜಯವಾಡದ ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
Vijaya Karnataka Web fake note
ಖೋಟಾ ನೋಟು ಚಲಾವಣೆ, ಇಬ್ಬರಿಗೆ 10 ವರ್ಷ ಜೈಲು ಶಿಕ್ಷೆ


ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮೊಹಮ್ಮದ್‌ ಮೆಹಬೂಬ್‌ ಬೇಗ್‌ ಅಲಿಯಾಸ್‌ ಅಜರ್‌ ಬೇಗ್‌ ಮತ್ತು ಶ್ರೀರಂಗಪಟ್ಟಣ ತಾಲೂಕು ಗಂಜಾಂ ಗ್ರಾಮದ ಸೈಯ್ಯದ್‌ ಇಮ್ರಾನ್‌ ಶಿಕ್ಷೆಗೆ ಒಳಗಾದವರು. ಶಿಕ್ಷೆ ಜೊತೆಗೆ ತಲಾ 30 ಸಾವಿರ ರೂ. ದಂಡ ವಿಧಿಸಲಾಗಿದೆ.

2018ರ ಮಾ.31ರಂದು ಖಚಿತ ಮಾಹಿತಿ ಆಧರಿಸಿ ಕಂದಾಯ ಗುಪ್ತಚರ ನಿರ್ದೇಶನಾಲಯ ವಿಶಾಖಪಟ್ಟಣ ವಿಭಾಗದ ಅಧಿಕಾರಿಗಳ ತಂಡ, ವಿಶಾಖಪಟ್ಟಣ ರೈಲು ನಿಲ್ದಾಣದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿತ್ತು. ತಪಾಸಣೆ ವೇಳೆ ಆರೋಪಿಗಳ ಬಳಿ 2 ಸಾವಿರ ರೂ. ಮುಖಬೆಲೆಯ 10.20 ಲಕ್ಷ ರೂ. ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಎನ್‌ಐಎ ಅಧಿಕಾರಿಗಳು, ತನಿಖೆ ನಡೆಸಿ ವಿಜಯವಾಡ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಇಂಡೋ-ಬಾಂಗ್ಲಾ ಗಡಿಯಿಂದ ಭಾರತಕ್ಕೆ ನೋಟುಗಳು:

ಬೆಂಗಳೂರು ಮತ್ತು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಖೋಟಾ ನೋಟು ಚಲಾವಣೆ ದಂಧೆಯಲ್ಲಿ ಆರೋಪಿಗಳಿಬ್ಬರು ಸಕ್ರಿಯವಾಗಿದ್ದರು. 2015ರಿಂದ ನೋಟುಗಳನ್ನು ಬಾಂಗ್ಲಾ ದೇಶದಿಂದ ಇಂಡೋ-ಬಾಂಗ್ಲಾ ಗಡಿ ಮೂಲಕ ಭಾರತಕ್ಕೆ ತಂದು, ಕರ್ನಾಟಕ ಮತ್ತು ದೇಶದ ಇತರ ರಾಜ್ಯಗಳಲ್ಲಿ ಚಲಾವಣೆಗೆ ಬಿಡುತ್ತಿದ್ದರು. ಮಾಲ್ಡಾದಿಂದ ಬೆಂಗಳೂರು ನಡುವೆ ಹಲವು ಬಾರಿ ಪ್ರಯಾಣಿಸಿ, ಭಾರಿ ಪ್ರಮಾಣದ ನೋಟುಗಳನ್ನು ತೆಗೆದುಕೊಂಡು ಬಂದಿದ್ದರು. ಆರೋಪಿಗಳು ವ್ಯವಸ್ಥಿತ ಜಾಲದ ಮೂಲಕ ಒಳಸಂಚು ರೂಪಿಸಿ ಖೋಟಾ ನೋಟು ಚಲಾವಣೆ ದಂಧೆಯಲ್ಲಿ ತೊಡಗಿದ್ದರು ಎಂದು ಎನ್‌ಐಎ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ