ಆ್ಯಪ್ನಗರ

ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಮತ್ತೆ ಜಮೀನ್ದಾರಿ ಪದ್ದತಿಗೆ ಹೋಗುವ ಅನುಮಾನವಿದೆ ; ಎಚ್‌ಡಿಕೆ

ರೈತರಲ್ಲಿ ಒಂದು ರೀತಿಯ ಆತಂಕ ಇದೆ. ರೈತ ಲಾಭ ಬರಲಿ ನಷ್ಟ ಆಗಲಿ ಹೊಲದಲ್ಲಿ ದುಡಿಯುತ್ತಾನೆ. ಕೊರೊನಾ ಸಂದರ್ಭದಲ್ಲಿ ದಾಖಲೆ ಪ್ರಮಾಣದಲ್ಲಿ ಬಿತ್ತನೆ ಆಗಿದೆ. ಬೆಂಗಳೂರು ಬಡಾವಣೆಗಾಗಿ ಭೂಮಿಯನ್ನು ವಶಪಡಿಸಿಕೊಂಡ ರೈತರಿಗೆ ಏನು ಅನುಕೂಲ ಆಯಿತು ಎಂದು ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

Vijaya Karnataka Web 26 Sep 2020, 1:50 pm
ಬೆಂಗಳೂರು: ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ.
Vijaya Karnataka Web Kumarswamy


ಕೊರೊನಾದಂತಹ ಕೆಟ್ಟ ಪರಿಸ್ಥಿತಿಯಲ್ಲಿ ಈ ರೀತಿಯ ಸಂಶಯ, ಅನುಮಾನ ಇರುವ ತಿದ್ದುಪಡಿ ಸುಗ್ರೀವಾಜ್ಞೆ ತರುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿರುವ ಎಚ್‌ಡಿಕೆ, ರೈತ ಸಂಘಟನೆಗಳ ಜೊತೆಗೆ ಚರ್ಚೆ ಮಾಡಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿತ್ತು. ಕೊರೊನಾ ಹರಡುವಿಕೆಗೆ ನಾವೇ ಕಾರಣವಾಗುತ್ತಿದ್ದೇವೆ ಎಂದು ಆರೋಪ ಬರ್ತಿದೆ. ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಮತ್ತೆ ಜಮೀನ್ದಾರಿ ಪದ್ದತಿಯ ವಾತಾವರಣಕ್ಕೆ ಹೋಗುತ್ತಿದ್ದೇವೆ ಎಂದು ಅನುಮಾನವಾಗಿದೆ ಎಂದು ಹೇಳಿದರು.

88ನೇ ವರ್ಷಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಮನಮೋಹನ್ ಸಿಂಗ್; ಪ್ರಧಾನಿ ಸೇರಿ ಗಣ್ಯರ ಶುಭಾಶಯ

40 ಯುನಿಟ್‌ವರೆಗೆ ಭೂಮಿ ಹೊಂದಲು ತಿದ್ದುಪಡಿಯಲ್ಲಿ‌ ಅವಕಾಶ ನೀಡಲಾಗಿದೆ. 79 ಎ ಹಾಗೂ 79 ಬಿ ಕಾನೂನಿನಲ್ಲಿ ಕೆಲವೊಂದು ನೂನ್ಯತೆ ಇದೆ ಹೌದು ಎಂದ ಕುಮಾರಸ್ವಾಮಿ, ಇದನ್ನು ದ್ವೇಷಕ್ಕೆ ದುರ್ಬಳಕೆ ಮಾಡಿಕೊಳ್ಳುವ ಅಪಾಯವೂ ಇದೆ. ನಮ್ಮ ಕುಟುಂಬದ ಮೇಲೂ ಇದನ್ನು ಪ್ರಯೋಗ ಮಾಡಿದ್ದಾರೆ ಎಂದು ಹೇಳಿದರು.

‘ಬಿಎಸ್‌ವೈ ಅವರೇ, ರಾಜ್ಯದ ಜನರ ಪಾಲನ್ನು ಕೇಳಲು ಧೈರ್ಯವಿಲ್ಲದಿದ್ದರೆ ನಮ್ಮನ್ನು ಕರೆದುಕೊಂಡು ಹೋಗಿ’; ಸಿದ್ದರಾಮಯ್ಯ

ಅಲ್ಲದೇ ಈ ಕುರಿತಾಗಿ ಲೋಕಾಯುಕ್ತ ತನಿಖೆಯೂ ನಡೆದಿದೆ ಎಂದ ಕುಮಾರಸ್ವಾಮಿ, ರೈತರಲ್ಲಿ ಒಂದು ರೀತಿಯ ಆತಂಕ ಇದೆ. ರೈತ ಲಾಭ ಬರಲಿ ನಷ್ಟ ಆಗಲಿ ಹೊಲದಲ್ಲಿ ದುಡಿಯುತ್ತಾನೆ. ಕೊರೊನಾ ಸಂದರ್ಭದಲ್ಲಿ ದಾಖಲೆ ಪ್ರಮಾಣದಲ್ಲಿ ಬಿತ್ತನೆ ಆಗಿದೆ. ಬೆಂಗಳೂರು ಬಡಾವಣೆಗಾಗಿ ಭೂಮಿಯನ್ನು ವಶಪಡಿಸಿಕೊಂಡ ರೈತರಿಗೆ ಏನು ಅನುಕೂಲ ಆಯಿತು ಎಂದು ಪ್ರಶ್ನಿಸಿದರು. ಇದೇ ವೇಳೆ ಈ ನಿಟ್ಟಿನಲ್ಲಿ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ