ಆ್ಯಪ್ನಗರ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಮಾಡಿ: ಸಚಿವ ನಿರಾಣಿ ಆಹ್ವಾನ

'ಕರ್ನಾಟಕವು ಭಾರತದ ಅತಿ ದೊಡ್ಡ ಅಂತರಿಕ್ಷ ‌ಕ್ಲಸ್ಟರ್ ಆಗಿರುವುದಲ್ಲದೆ, ಭಾರತದಲ್ಲಿ ಬೃಹತ್ ಎಲೆಕ್ಟ್ರಿಕಲ್ ಯಂತ್ರಗಳ 2 ನೇ ಅತಿ ದೊಡ್ಡ ಉತ್ಪಾದನಾ ‌ರಾಜ್ಯವಾಗಿದೆ' - ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ

Vijaya Karnataka Web 17 Oct 2021, 6:10 pm

ಹೈಲೈಟ್ಸ್‌:

  • ವಿಶ್ವ ದುಬೈ ಎಕ್ಸ್ ಪೋ - 2020ನಲ್ಲಿ ಆನಾವರಣಗೊಂಡ ಕರ್ನಾಟಕದ ಯಶೋಗಾಥೆ
  • ದೇಶದಲ್ಲೇ ಬೃಹತ್ ಎಲೆಕ್ಟ್ರಿಕಲ್ ಯಂತ್ರಗಳ 2 ನೇ ಅತಿ ದೊಡ್ಡ ಉತ್ಪಾದನಾ ‌ರಾಜ್ಯವಾಗಿ ಕರ್ನಾಟಕ
  • ರಾಜ್ಯಕ್ಕೆ ‌ಹೆಚ್ಚಿನ ಎಫ್‌ಡಿಐ‌ ಹರಿದು ಬರುವ ವಿಶ್ವಾಸ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web minister nirani
ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಮಾಡಿ: ಸಚಿವ ನಿರಾಣಿ ಆಹ್ವಾನ
ದುಬೈ: ಕರ್ನಾಟಕದಲ್ಲಿ ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿರುವ ವಿಪುಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಈ ಕ್ಷೇತ್ರದಲ್ಲಿ ಹೆಚ್ಚಿನ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಾಡಲು ಉದ್ಯಮೆದಾರರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ವಿಶ್ವ ದುಬೈಎಕ್ಸ್ ಪೋ - 2020ನಲ್ಲಿ ಕರ್ನಾಟಕದಲ್ಲಿ ಅಂತರಿಕ್ಷ, ರಕ್ಷಣೆ ಹಾಗೂ ವೈಮಾನಿಕ ವಲಯದಲ್ಲಿರುವ ಅವಕಾಶಗಳು ಕುರಿತ‌‌ ವಿಚಾರ ಸಂಕಿರಣದಲ್ಲಿ‌ ಮಾತನಾಡಿದ ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ಸಚಿವ ‌ಮುರುಗೇಶ್ ಆರ್ ನಿರಾಣಿ ಅವರು, ಈ ವಲಯದಲ್ಲಿ ರಾಜ್ಯವು ಸಾಧಿಸಿರುವ ಪ್ರಗತಿಯ ಚಿತ್ರಣವನ್ನು ತೆರೆದಿಟ್ಟರು.

ಈ ಕ್ಷೇತ್ರಗಳಲ್ಲಿ ರಾಜ್ಯವು ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಕರ್ನಾಟಕವು ಭಾರತದ ಅತಿ ದೊಡ್ಡ ಅಂತರಿಕ್ಷ ‌ಕ್ಲಸ್ಟರ್ ಆಗಿರುವುದಲ್ಲದೆ, ಭಾರತದಲ್ಲಿ ಬೃಹತ್ ಎಲೆಕ್ಟ್ರಿಕಲ್ ಯಂತ್ರಗಳ 2 ನೇ ಅತಿ ದೊಡ್ಡ ಉತ್ಪಾದನಾ ‌ರಾಜ್ಯವಾಗಿದೆ ಎಂದು ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಭಾರತದಲ್ಲಿ ಸುಮಾರು 60% ಯಂತ್ರೋಪಕರಣಗಳನ್ನು ಉತ್ಪಾದಿಸಲಾಗುತ್ತದೆ. ನಮ್ಮ ರಾಜ್ಯವು ದೇಶದ 2 ನೇ ಅತಿ ದೊಡ್ಡ ಚಿಪ್ ವಿನ್ಯಾಸ ಕೇಂದ್ರವಾಗಿದೆ. ಉದ್ಯಮಕ್ಕೆ ಸಿದ್ಧವಾಗಿರುವ ಮಾನವ ಸಂಪನ್ಮೂಲವನ್ನು ಒದಗಿಸಲು ನಾವು ಡಸಾಲ್ಟ್ ಸಿಸ್ಟಮ್ಸ್ ಸಹಭಾಗಿತ್ವದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸಿದ್ದೇವೆ ಎಂದು ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾಹಿತಿ ನೀಡಿದರು.

ಯುವಕರು ಉದ್ಯಮಿಯಾಗಲು ಸುವರ್ಣಾವಕಾಶದ ವೇದಿಕೆ ಸೃಷ್ಟಿ: ಸಚಿವ ನಿರಾಣಿ
ಅಂತರಿಕ್ಷ ಮತ್ತು ರಕ್ಷಣಾ ವಲಯಕ್ಕೆ ಸಹಾಯಕವಾಗುತ್ತಿರುವ ಸಣ್ಣ ಕೈಗಾರಿಕೆಗಳ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು, ಈ ಕ್ಷೇತ್ರಗಳನ್ನು ಮುನ್ನಡೆಸಲು ‌ರಾಜ್ಯ ಸರ್ಕಾರ ಎಲ್ಲಾ ‌ರೀತಿಯ ನೆರವು ನೀಡುತ್ತಿದೆ ‌ಎಂದು‌ ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು ‌

ಕರ್ನಾಟಕ ‌ಸುಮಾರು 2,000 ಎಸ್‌ಎಂಇಗಳ ಪ್ರಬಲ ನೆಲೆಯನ್ನು ಹೊಂದಿದೆ. ಇದು ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿರುವ ಉಪ-ಗುತ್ತಿಗೆ ಕೆಲಸಗಳನ್ನು ನಿರ್ವಹಿಸುತ್ತದೆ. ಈ ವಲಯಕ್ಕೆ ಸರ್ಕಾರ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ಮತ್ತು ‌ ಬೆಂಬಲ ಕೊಟ್ಟ ‌ಪರಿಣಾಮ, ರಾಜ್ಯದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸುವುದರ ಜೊತೆಗೆ ‌ವಿಸ್ತರಣೆಯನ್ನು ಮತ್ತಷ್ಟು ಹೆಚ್ಚಿಸಲು ‌
ಅನುಕೂಲವಾಗಿದೆ. ಪರಿಣಾಮ ಹೆಚ್ಚು ಉದ್ಯಮೆದಾರರಿಗೆ ‌ನಮ್ಮ ರಾಜ್ಯದ ಕಡೆ ಆಕರ್ಷಿತವಾಗಿದೆ ಎಂದು ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಪ್ರಶಂಸಿದರು.

ಮಹಿಳಾ ಉದ್ಯಮಿಗಳು ಸ್ವಾವಲಂಬಿಯಾಗಲು ಸರ್ಕಾರದ ‌ನೆರವು: ಸಚಿವ ನಿರಾಣಿ
ಭಾರತೀಯ ಸ್ಟಾರ್ಟ್ ಅಪ್‌ಗಳು ಅನುಭವಗಳಿಂದ ಕಲಿಯುತ್ತಾರೆ. ಭವಿಷ್ಯದಲ್ಲಿ ಅವರ ನಿರ್ಧಾರಗಳಿಗೆ ಇದು ಮಾರ್ಗದರ್ಶನ ನೀಡಲು ಉತ್ತಮ ವೇದಿಕೆಯಾಗಲಿದೆ ಎಂಬ‌ ವಿಶ್ವಾಸವನ್ನು ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ‌ಅವರು ವ್ಯಕ್ತಪಡಿಸಿದರು.

ಈ ವೇದಿಕೆಯಲ್ಲಿ ಆರಂಭವಾದ ಸಂವಾದಗಳು, ವಿಚಾರಗಳ ವಿನಿಮಯವು ಮುಂದುವರಿಯುತ್ತದೆ. ದುಬೈ ಎಕ್ಸ್‌ಪೋ 2020 ಅನ್ನು ವಿವಿಧ ‌ರಾಜ್ಯಗಳು, ಉದ್ದಿಮೆದಾರರು ‌ ಮತ್ತು ಇತರ ಪಾಲುದಾರರನ್ನು ಭೇಟಿಯಾಗಿ ಸಂವಾದಿಸಲು ಮತ್ತು ಸಹಯೋಗಿಸಲು ವೇದಿಕೆ ಒದಗಿಸಿದ್ದಕ್ಕಾಗಿ ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರಶಂಸಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ