ಆ್ಯಪ್ನಗರ

ಪರಿಸರ ಸ್ನೇಹಿ ದೀಪಾವಳಿಗೆ ಒತ್ತು: ಗೋಮಯ ಹಣತೆ ಬಳಸಲು ಕೃಷಿ ಸಚಿವ ಬಿಸಿ ಪಾಟೀಲ್ ಕರೆ

ಈ ಗೋಮಯ ದೀಪಗಳನ್ನು ಬಳಸುವುದರಿಂದ ರೈತರ ಬೆನ್ನೆಲುಬಾದ ಭಾರತೀಯ ದೇಶಿ ಗೋತಳಿಯ ಉಳಿವಿಗೆ ಪ್ರಯತ್ನ ಮಾಡುವುದರ ಜತೆಗೆ ಆರೋಗ್ಯದ ಹಿತದೃಷ್ಟಿಯಿಂದಲೂ ಉತ್ತಮವಾಗಿದೆ.

Vijaya Karnataka Web 24 Oct 2020, 2:27 pm
ಬೆಂಗಳೂರು: ಬೆಳಕಿನ ಹಬ್ಬವನ್ನು ಪರಿಸರ ಸ್ನೇಹಿ ದೀಪಾವಳಿಯನ್ನಾಗಿ ಆಚರಿಸಲು ಒತ್ತು ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಈ ಬಾರಿಯ ದೀಪಾವಳಿಯನ್ನು ಕಾಮಧೇನು (ಗೋಮಯ) ದೀಪಾವಳಿಯನ್ನಾಗಿಸಲು ಕರೆ ನೀಡಿದ್ದಾರೆ.
Vijaya Karnataka Web ದೀಪಾವಳಿ
ದೀಪಾವಳಿ


ರಾಸಾಯನಿಕಯುಕ್ತ ಹಣತೆ, ಅಪಾಯಕಾರಿ ಪಟಾಕಿಗಳನ್ನು ಬಳಸುವುದನ್ನು ಬಿಟ್ಟು ಮನಸಿಗೆ ಮುದ ನೀಡುವ ಹಾನಿಕಾರಕವಲ್ಲದ ಗೋಮಯ ದೀಪಗಳನ್ನು ಬಳಸಲು ಕರೆ ನೀಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರ ಸ್ವಾವಲಂಬನೆ ಹಾಗೂ ಆದಾಯ ದ್ವಿಗುಣ ಕಾರ್ಯಯೋಜನೆಯನ್ನು ಆತ್ಮ ನಿರ್ಭರ ಭಾರತದ ಸಂಕಲ್ಪವನ್ನು ಸಾಕಾರ ಗೊಳಿಸಲು ಕೇಂದ್ರ ಪಶು ಸಂಗೋಪನಾ ಸಚಿವಾಲಯದ ರಾಷ್ಟ್ರೀಯ ಕಾಮಧೇನು ಆಯೋಗದಿಂದ ಪ್ರಾಯೋಜಿತವಾದ ಸಗಣಿಯಿಂದ ತಯಾರಿಸಿದ ಗೋಮಯ ಹಣತೆಯನ್ನು ಈ ದೀಪಾವಳಿಯ ಸಂದರ್ಭದಲ್ಲಿ ದೇಶದಾದ್ಯಂತ ಉರಿಸುವ ಯೋಜನೆ ರೂಪಿಸಿದೆ.

ಈ ನಿಟ್ಟಿನಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗ, ರಾಷ್ಟ್ರೋತ್ಥಾನ ಗೋಶಾಲೆ, ಗೋಸೇವಾ ಗತಿ ವಿಧಿ ಹಾಗೂ ಪ್ರಾಣಿ ಕಲ್ಯಾಣ ಮಂಡಳಿ ಈ ಬಾರಿಯ ದೀಪಾವಳಿಯನ್ನು ಪರಿಸರ ಸ್ನೇಹಿ ಗೋಮಯ ದೀಪಗಳಿಂದ ಆಚರಿಸಬೇಕೆಂದು ಯೋಜ‌ನೆ ರೂಪಿಸಿದ್ದು, ದೇಶದಲ್ಲಿ 33 ಕೋಟಿ ದೀಪಗಳನ್ನು ರಾಜ್ಯದಲ್ಲಿ 3 ಕೋಟಿ ಗೋಮಯ ದೀಪಗಳನ್ನು ಬಳಸುವ ಉದ್ದೇಶ ಹೊಂದಲಾಗಿದೆ.

ಈ ಗೋಮಯ ದೀಪಗಳನ್ನು ಬಳಸುವುದರಿಂದ ರೈತರ ಬೆನ್ನೆಲುಬಾದ ಭಾರತೀಯ ದೇಶಿ ಗೋತಳಿಯ ಉಳಿವಿಗೆ ಪ್ರಯತ್ನ ಮಾಡುವುದರ ಜತೆಗೆ ಆರೋಗ್ಯದ ಹಿತದೃಷ್ಟಿಯಿಂದಲೂ ಉತ್ತಮವಾಗಿದೆ. ಅಲ್ಲದೇ ಇದರಿಂದ ದೇಶೀಯ ದೀಪಗಳಿಗೆ ಉತ್ತೇಜನ ತಯಾರಿಕರಿಗೆ ಪ್ರೋತ್ಸಾಹ ದೊರೆಯುವಂತಾಗುತ್ತದೆ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ