ಆ್ಯಪ್ನಗರ

Congress Freedom March | ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡಬೇಕಿದೆ: ರಣದೀಪ್ ಸಿಂಗ್ ಸುರ್ಜೇವಾಲ

Save Democracy: ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸ್ವಾತಂತ್ರ ನಡಿಗೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ ಅವರು, ಮಹಾತ್ಮ ಗಾಂಧಿ, ನೆಹರೂ, ಅಬ್ದುಲ್‌ ಕಲಾಂ ಆಜಾದ್ ಸೇರಿದಂತೆ ಸ್ವಾತಂತ್ರ ಹೋರಾಟಗಾರರು ಕೇವಲ ಬ್ರಿಟಿಷರ ವಿರುದ್ಧ ಮಾತ್ರ ಹೋರಾಟ ಮಾಡಿಲ್ಲ. ಜೊತೆಗೆ ಮನುಷ್ಯ ಮನುಷ್ಯರ ನಡುವಿನ ಬೇಧ ಭಾವ ದೂರ ಮಾಡಲು, ಸಮಾನತೆಯ ಪರವಾಗಿಯೂ ಹೋರಾಟ ನಡೆಯಿತು ಹಾಗೂ ಅಸ್ಪೃಶ್ಯತೆಯ ವಿರುದ್ದದ ಹೋರಾಟವಾಗಿತ್ತು ಎಂದರು.

Edited byಹೇಮಂತ್ ಕುಮಾರ್ ಎಸ್ | Reported byಇರ್ಷಾದ್ ಉಪ್ಪಿನಂಗಡಿ | Vijaya Karnataka Web 15 Aug 2022, 6:48 pm

ಹೈಲೈಟ್ಸ್‌:

  • 75 ವರ್ಷ ಪೂರ್ಣವಾದರೂ ದೇಶದ ಸ್ವಾತಂತ್ರದ ಹೋರಾಟ ಪೂರ್ಣವಾಗಿಲ್ಲ
  • ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸ್ವಾತಂತ್ರ ನಡಿಗೆ ಕಾರ್ಯಕ್ರಮದ ಸಮಾರೋಪ
  • ಭಾಷೆ, ಬಣ್ಣ, ವಸ್ತ್ರದ ಆಧಾರದಲ್ಲಿ ಬೇಧ ಭಾವ ಮಾಡಲು ಸಾಧ್ಯವಿಲ್ಲ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Congress leader Randeep Singh Surjewala
ರಣದೀಪ್ ಸಿಂಗ್ ಸುರ್ಜೇವಾಲ
ಬೆಂಗಳೂರು: ಪ್ರಜಾಪ್ರಭುತ್ವದ ಉಳಿವಿಗಾಗಿ ಇಂದು ಹೋರಾಟ ಮಾಡಬೇಕಾದ ಅಗತ್ಯ ಇದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸ್ವಾತಂತ್ರ ನಡಿಗೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ, ನೆಹರೂ, ಅಬ್ದುಲ್‌ ಕಲಾಂ ಆಜಾದ್ ಸೇರಿದಂತೆ ಸ್ವಾತಂತ್ರ ಹೋರಾಟಗಾರರು ಕೇವಲ ಬ್ರಿಟಿಷರ ವಿರುದ್ಧ ಮಾತ್ರ ಹೋರಾಟ ಮಾಡಿಲ್ಲ. ಜೊತೆಗೆ ಮನುಷ್ಯ ಮನುಷ್ಯರ ನಡುವಿನ ಬೇಧ ಭಾವ ದೂರ ಮಾಡಲು, ಸಮಾನತೆಯ ಪರವಾಗಿಯೂ ಹೋರಾಟ ನಡೆಯಿತು ಹಾಗೂ ಅಸ್ಪೃಶ್ಯತೆಯ ವಿರುದ್ದದ ಹೋರಾಟವಾಗಿತ್ತು ಎಂದರು.
Congress Freedom March | ಬೆಂಗಳೂರಿನಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ: ಪ್ರಮುಖ ಹೈಲೈಟ್ಸ್ ಇಲ್ಲಿದೆ
75 ವರ್ಷ ಪೂರ್ಣವಾದರೂ ದೇಶದ ಸ್ವಾತಂತ್ರದ ಹೋರಾಟ ಪೂರ್ಣವಾಗಿಲ್ಲ. ಪ್ರಜಾಪ್ರಭುತ್ವದ ಉಳಿಕೆಗಾಗಿ ಇಂದು ಹೋರಾಟ ಮಾಡಬೇಕಿದೆ. ದೇಶದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಮಹಿಳೆಯರ, ದಲಿತರ, ಹಿಂದುಳಿದ, ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುವ ಮೂಲಕ ಈ ದೇಶ ನಡೆಯಲು ಸಾಧ್ಯವಿಲ್ಲ. ಈ‌ ದೇಶ ಸಾಮರಸ್ಯ, ಸಮಾನತೆಯ ದೇಶ. ಭಾಷೆ, ಬಣ್ಣ, ವಸ್ತ್ರದ ಆಧಾರದಲ್ಲಿ ಬೇಧ ಭಾವ ಮಾಡಲು ಸಾಧ್ಯವಿಲ್ಲ. ಹಾಗಿದ್ದರೂ ಇಂದು ಬೇಧ ಭಾವ ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಕರೆಕೊಟ್ಟರು.
ಸರಕಾರವು ತಳ್ಳಿಕೊಂಡು ಹೋಗುವ ಸ್ಥಿತಿಗೆ ಬಂದಿರುವುದು ದುರಂತ: ಮಾಧುಸ್ವಾಮಿ ಆಡಿಯೋಗೆ ಕಾಂಗ್ರೆಸ್ ಟ್ವೀಟ್
ಈ‌ ದೇಶ ಎಲ್ಲರ ದೇಶವಾಗಿದೆ. ದಲಿತರು, ಮುಸ್ಲಿಂಮರು, ಮಹಿಳೆಯರು, ಬಡವರು ಎಲ್ಲರ ದೇಶವಾಗಿದೆ. ಯಾರ ಅಧಿಕಾರವನ್ನು ಕಸಿದುಕೊಳ್ಳಲಾಗುತ್ತಿದೆ ಅವರ ಪರವಾಗಿ ಕಾಂಗ್ರೆಸ್ ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಕೆಪಿಸಿಸಿ ಹಮ್ಮಿಕೊಂಡಿದ್ದ ಪಾದಯಾತ್ರೆ ಹೆಚ್ಚಿನ ಸಂಖ್ಯೆಯ ಜನರು ಭಾಗಿಯಾಗಿದ್ದರು. ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ ಪಾದಯಾತ್ರೆ ನಡೆಯಿತು. ಮಧ್ಯಾಹ್ನ ಎರಡು ಗಂಟೆಗೆ ಆರಂಭವಾದ ಪಾದಯಾತ್ರೆ ಸುಮಾರು ಏಳು ಕಿಲೋ ಮೀಟರ್ ಸಾಗಿ ಸಂಜೆ 5.10 ನ್ಯಾಷನಲ್ ಕಾಲೇಜು ಮೈದಾನಕ್ಕೆ ತಲುಪಿತು.
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ