ಆ್ಯಪ್ನಗರ

ರೋರಿಕ್‌ ಎಸ್ಟೇಟ್‌ನಲ್ಲಿಫಿಲ್ಮ್‌ ಸಿಟಿ

ತಾತಗುಣಿಯ ರೋರಿಕ್‌ ಎಸ್ಟೇಟ್‌ನಲ್ಲಿ'ಫಿಲ್ಮ್‌ ಸಿಟಿ' ನಿರ್ಮಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ...

Vijaya Karnataka 16 Sep 2019, 5:00 am
ಬೆಂಗಳೂರು: ತಾತಗುಣಿಯ ರೋರಿಕ್‌ ಎಸ್ಟೇಟ್‌ನಲ್ಲಿ'ಫಿಲ್ಮ್‌ ಸಿಟಿ' ನಿರ್ಮಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.
Vijaya Karnataka Web film


ಈ ಹಿಂದೆ ಹೆಸರಘಟ್ಟ, ರಾಮನಗರ ಹಾಗೂ ಮೈಸೂರಿನಲ್ಲಿಫಿಲ್ಮ್‌ ಸಿಟಿ ನಿರ್ಮಿಸುವ ಬಗ್ಗೆ ಚರ್ಚೆಯಾಗಿತ್ತು. ಜಾಗದ ಸಮಸ್ಯೆಯಿಂದಾಗಿ ಫಿಲ್ಮ್‌ ಸಿಟಿ ನಿರ್ಮಾಣದ ಕನಸು ಇನ್ನೂ ನನಸಾಗಿಲ್ಲ. ಈಗ ಬಿ.ಎಸ್‌.ಯಡಿಯೂರಪ್ಪ ಅವರೇ ರೋರಿಕ್‌ ಎಸ್ಟೇಟ್‌ನಲ್ಲಿಫಿಲ್ಮ್‌ ಸಿಟಿ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿ ಸರಕಾರದ ಅವಧಿಯಲ್ಲೂಫಿಲ್ಮ್‌ ಸಿಟಿಯ ಜಾಗ ಬದಲಾವಣೆಯಾಗುತ್ತಲೇ ಇದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಮೈಸೂರಿನಲ್ಲಿಫಿಲ್ಮ್‌ ಸಿಟಿ ನಿರ್ಮಿಸುವ ಪ್ರಸ್ತಾಪ ಮಾಡಿತ್ತು. ನಂತರ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ರಾಮನಗರದಲ್ಲಿಫಿಲ್ಮ್‌ ಸಿಟಿ ನಿರ್ಮಾಣ ಮಾಡಲು ತೀರ್ಮಾನಿಸಿತ್ತು. ನಂತರ ಮತ್ತೆ ಮೈಸೂರಿನಲ್ಲೇ ನಿರ್ಮಿಸಲು ನಿರ್ಧರಿಸಲಾಗಿತ್ತು.

ರೋರಿಕ್‌ ಎಸ್ಟೇಟ್‌ನಲ್ಲಿಫಿಲ್ಮ್‌ ಸಿಟಿ ನಿರ್ಮಾಣ ಮಾಡುವ ವಿನೂತನ ಯೋಜನೆಯನ್ನು ರೂಪಿಸಲಾಗಿದೆ.

-ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ