ಆ್ಯಪ್ನಗರ

ನಾಮಪತ್ರ ಸಲ್ಲಿಸಿದ ದಿನವೇ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಮತ್ತು ಸಿದ್ದರಾಮಯ್ಯ ಕಾರ್‌ ಚಾಲಕ ವಿರುದ್ಧ ಎಫ್‌ಐಆರ್..!

ಕೊರೊನಾ ಹಿನ್ನೆಲೆಯಲ್ಲಿ 100 ಮೀಟರ್ ದೂರದಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು. ನಿಯಮದ ಪ್ರಕಾರ ಕಾರ್‌ನ್ನು ಆಚೆಯೇ ನಿಲ್ಲಿಸಿ ನಾಮಪತ್ರ ಸಲ್ಲಿಸುವವರು ಬರಬೇಕಾಗಿತ್ತು. ಆದರೆ ಸಿದ್ದರಾಮಯ್ಯ ಕಾರ್‌ ಚಾಲಕ ಬ್ಯಾರಿಕೇಡ್ ಪಕ್ಕಕ್ಕೆ ಸರಿಸಿ ಒಳಬಂದಿದ್ದಾರೆ. ಅವರ ಹಿಂದೆಯೇ ಕುಸುಮಾ ಕೂಡ ಬಂದಿದ್ದಾರೆ.

Vijaya Karnataka Web 15 Oct 2020, 6:45 am
ಬೆಂಗಳೂರು: ಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿನವೇ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರು ಚಾಲಕ ಹಾಗೂ ಎಸ್ಕಾರ್ಟ್‌ ವಾಹನ ಚಾಲಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Vijaya Karnataka Web kusuma


ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿಎಫ್‌ಐಆರ್‌ ದಾಖಲಾಗಿದ್ದು, ಮೂವರ ವಿರುದ್ಧ ಕೇಸ್‌ ದಾಖಲಾಗಿದೆ. ನಾಮಪತ್ರ ಸಲ್ಲಿಸುವ ಕಚೇರಿಯ ಸುತ್ತಲಿನ 100 ಮೀಟರ್‌ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು, ಈ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.

ಆರ್‌ಆರ್‌ ನಗರ: ಜೆಡಿಎಸ್‌ನ ಕೃಷ್ಣಮೂರ್ತಿ ಆಸ್ತಿ ಭಾರೀ ಕಡಿಮೆ..! ಸಾಲ ಕೊಟ್ಟಿಲ್ಲ.. ತಗೊಂಡಿಲ್ಲ..!

ಕೊರೊನಾ ಹಿನ್ನೆಲೆಯಲ್ಲಿ 100 ಮೀಟರ್ ದೂರದಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು. ನಿಯಮದ ಪ್ರಕಾರ ಕಾರ್‌ನ್ನು ಆಚೆಯೇ ನಿಲ್ಲಿಸಿ ನಾಮಪತ್ರ ಸಲ್ಲಿಸುವವರು ಬರಬೇಕಾಗಿತ್ತು. ಆದರೆ ಸಿದ್ದರಾಮಯ್ಯ ಕಾರ್‌ ಚಾಲಕ ಬ್ಯಾರಿಕೇಡ್ ಪಕ್ಕಕ್ಕೆ ಸರಿಸಿ ಒಳಬಂದಿದ್ದಾರೆ. ಅವರ ಹಿಂದೆಯೇ ಕುಸುಮಾ ಕೂಡ ಬಂದಿದ್ದಾರೆ.

ಆರ್‌.ಆರ್‌ ನಗರ ಬೈ ಎಲೆಕ್ಷನ್: ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಬಳಿ ಇರುವ ಆಸ್ತಿ ಎಷ್ಟು?

ಹೀಗಾಗಿ ಸರಕಾರಿ ಅಧಿಕಾರಿಯ ಆದೇಶವನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ