ಆ್ಯಪ್ನಗರ

ಬಂದ್ ಮಾಡಲು ಬಲವಂತ: ರಾಜ್ಯದ ಕೆಲವೆಡೆ ಹಲ್ಲೆ, ದಾಂಧಲೆ

ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿರುವ 'ಭಾರತ್ ಬಂದ್' ಹಿನ್ನೆಲೆಯಲ್ಲಿ ಕೆಲವೆಡೆ ಬಲವಂತವಾಗಿ ಬಂದ್ ಮಾಡಿಸಲಾಗಿದ್ದರೆ, ಇನ್ನು ಕೆಲವೆಡೆ ಹಲ್ಲೆ, ದಾಂಧಲೆ ಪ್ರಕರಣಗಳು ಸಹ ವರದಿಯಾಗಿದೆ.

Vijaya Karnataka Web 10 Sep 2018, 3:04 pm

ಬೆಂಗಳೂರು: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿರುವ 'ಭಾರತ್ ಬಂದ್' ಹಿನ್ನೆಲೆಯಲ್ಲಿ ಕೆಲವೆಡೆ ಬಲವಂತವಾಗಿ ಬಂದ್ ಮಾಡಿಸಲಾಗಿದ್ದರೆ, ಇನ್ನು ಕೆಲವೆಡೆ ಹಲ್ಲೆ, ದಾಂಧಲೆ ಪ್ರಕರಣಗಳು ಸಹ ವರದಿಯಾಗಿದೆ.
Vijaya Karnataka Web 2


ಪೆಟ್ರೋಲ್ ಬಂಕ್‌ನಲ್ಲಿ ಕೈ ಕಾರ್ಯಕರ್ತರ ದಾಂಧಲೆ

ಧಾರವಾಡ: ನಗರದ ಜ್ಯೋತಿ ಪೆಟ್ರೋಲ್‌ ಬಂಕ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಾಂಧಲೆ ನಡೆಸಿದ್ದು, ಬಂಕ್ ನಲ್ಲಿರುವ ಕ್ಯಾಲ್ಕುಲೇಟರ್, ಬಿಲ್ಲಿಂಗ್ ಮಷಿನ್ ಸೇರಿದಂತೆ ಅನೇಕ ವಸ್ತುಗಳು ಜಖಂಗೊಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ: ಲಾಠಿ ಚಾರ್ಜ್

ಉಡುಪಿ: ಭಾರತ್ ಬಂದ್ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲಾಗಿದೆ. ಪರಿಸ್ಥಿತಿ ನಿಭಾಯಿಸಲು ಎಸ್‌ಪಿ ಕಚೇರಿ ಮುಂದೆಯೇ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.


ಮಾಜಿ ಶಾಸಕ ಜೆ.ಆರ್ ಲೋಬೋ ಪೊಲೀಸ್ ವಶಕ್ಕೆಮಂಗಳೂರು: ಕಂಕನಾಡಿಯಲ್ಲಿ ಪ್ರತಿಭಟನಾನಿರತ ಮಾಜಿ ಶಾಸಕ ಜೆ.ಆರ್.ಲೋಬೊ ಸಹಿತ ಕಾಂಗ್ರೆಸ್, ಜೆಡಿಎಸ್ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.


ತೈಲ ಬೆಲೆ ಏರಿಸಲೇಬೇಕು ಎಂದವನಿಗೆ ಕಪಾಳ ಮೋಕ್ಷ

ಬೆಳಗಾವಿ:
ತೈಲ‌ ಬೆಲೆ‌ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುವ ವೇಳೆ ತಪ್ಪಾಗಿ ಪೆಟ್ರೋಲ್ ಬೆಲೆ ಏರಿಸಲೇಬೇಕು ಎಂದು ಘೋಷಣೆ ಕೂಗಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನಿಗೆ ಮತ್ತೊಬ್ಬ ಮುಖಂಡ ಕಪಾಳಮೋಕ್ಷ ಮಾಡಿದ್ದಾರೆ.


ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯುತ್ತಿದೆ. ಪಕ್ಷದ ಮುಖಂಡ ಸದಾನಂದ್ ಬಾಮನೆ ಅವರು ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದರು.

ಮಂಗಳೂರಿನಲ್ಲಿ ಬಸ್ ಮೇಲೆ ಕಲ್ಲು ತೂರಾಟ


ಮಂಗಳೂರು: ಬೆಂಗಳೂರು-ಮಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ಮೇಲೆ ನಗರದ ಬಿ.ಸಿ.ರಸ್ತೆಯಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳೂರು ವಿಭಾಗಕ್ಕೆ ಸೇರಿದ KA 19 F 3485 ಸಂಖ್ಯೆಯ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಸುರತ್ಕಲ್‌ನಲ್ಲೂ ದುಷ್ಕರ್ಮಿಗಳು ಬಸ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.


ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯಕ ಅವರ ಕಾರಿನ ಮೇಲೆಯೂ ಕಲ್ಲು ಎಸೆಯಲಾಗಿದೆ ಎಂದು ದೂರು ದಾಖಲಾಗಿದೆ.

ಬಂದ್: ಹೆಲ್ಮೆಟ್ ಧರಿಸಿ ಕಲ್ಲು ತೂರಿದ ದುಷ್ಕರ್ಮಿ


ತನ್ನ ಗುರುತು ಪತ್ತೆಯಾಗದಂತೆ ಹೆಲ್ಮೆಟ್ ಧರಿಸಿ ಬಂದಿದ್ದ ದುಷ್ಕರ್ಮಿಯೊಬ್ಬ ಮಂಗಳೂರಿನ ಶಿವಬಾಗ್‌ನಲ್ಲಿರುವ ಹೋಟೆಲ್ ಒಂದಕ್ಕೆ ಕಲ್ಲೆಸೆದು ಪರಾರಿಯಾಗಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ